ಭಾನುವಾರ, ಸೆಪ್ಟೆಂಬರ್ 20, 2020
21 °C

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಸವಾಲು ಮುನ್ನಡೆಸಲಿರುವ ಅಮಿತ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಈ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆಯುವ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಅಮಿತ್‌ ಪಂಘಲ್‌ ಭಾರತದ ಸವಾಲನ್ನು ಮುನ್ನಡೆಸುವರು. ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಪಂಘಲ್‌ ಅವರು ಚಾಂಪಿಯನ್‌ಷಿಪ್‌ಗೆ ನೇರ ಅರ್ಹತೆ ಪಡೆದಿದ್ದಾರೆ. ರಷ್ಯಾದಲ್ಲಿ ಸೆಪ್ಟೆಂಬರ್‌ 7ರಿಂದ ಟೂರ್ನಿ ಆರಂಭವಾಗಲಿದೆ.

ಮನೀಷ್‌ ಕೌಶಿಕ್‌ (63 ಕೆಜಿ ವಿಭಾಗ) ಅವರು ರಾಷ್ಟ್ರೀಯ ಆಯ್ಕೆ ಟ್ರಯಲ್ಸ್‌ನಲ್ಲಿ ಶಿವ ಥಾಪಾ ಅವರನ್ನು ಹಿಂದಿಕ್ಕಿ, ಭಾರತದ ಎಂಟು ಬಾಕ್ಸರ್‌ಗಳ ಬಲಿಷ್ಠ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕವಿಂದರ್‌ ಸಿಂಗ್‌ ಬಿಷ್ತ್‌ (57 ಕೆಜಿ ವಿಭಾಗ), ದುರ್ಯೋಧನ ಸಿಂಗ್‌ ನೇಗಿ (69 ಕೆಜಿ), ಆಶಿಷ್‌ ಕುಮಾರ್‌ (75 ಕೆಜಿ), ಬ್ರಿಜೇಶ್‌ ಯಾದವ್‌ (81 ಕೆಜಿ), ಸಂಜೀತ್‌ (91 ಕೆಜಿ) ಮತ್ತು ಸತೀಶ್‌ ಕುಮಾರ್‌ (+91 ಕೆಜಿ) ಅವರು ಪಟಿಯಾಲಾದಲ್ಲಿ ನಡೆದ ಟ್ರಯಲ್ಸ್ ಮೂಲಕ ತಂಡಕ್ಕೆ ಆಯ್ಕೆಯಾದವರು.

57 ಕೆಜಿ ವಿಭಾಗದಲ್ಲಿ ಏಷ್ಯನ್‌ ಚಾಂಪಿಯನ್‌ಷಿಪ್‌ ಬೆಳ್ಳಿ ಪದಕ ವಿಜೇತ ಕವಿಂದರ್‌ ಅವರು ಮೊಹಮ್ಮದ್‌ ಹುಸ್ಸಾಮುದ್ದೀನ್‌ ಅವರನ್ನು ಮಣಿಸಿದ್ದರು. 75 ಕೆಜಿ ವಿಭಾಗದಲ್ಲಿ ಆಶೀಸ್‌ ಕುಮಾರ್‌ ಅವರು ಪ್ರಯಾಗ್‌ ಚೌಹಾನ್‌ ಅವರ ಸವಾಲು ಮೀರಿದ್ದರು. ದುರ್ಯೋಧನ ಅವರು 69 ಕೆಜಿ ವಿಭಾಗದಲ್ಲಿ ಆಶೀಸ್‌ ಕುಲ್ಹಾರಿ ಅವರನ್ನು ಸೋಲಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು