ಸೋಮವಾರ, ಸೆಪ್ಟೆಂಬರ್ 27, 2021
21 °C

ಚೆಸ್‌: ಆನಂದ್‌ಗೆ ಸ್ಪಾರ್ಕಸನ್ ಟ್ರೋಫಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಡಾರ್ಟ್‌ಮಂಡ್‌, ಜರ್ಮನಿ: ಭಾರತದ ಗ್ರ್ಯಾಂಡ್‌ಮಾಸ್ಟರ್‌ ವಿಶ್ವನಾಥನ್ ಆನಂದ್ ಅವರು ಸ್ಪಾರ್ಕಸನ್‌ ಟ್ರೋಫಿ ಚೆಸ್‌ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಭಾನುವಾರ ಇಲ್ಲಿ ಕೊನೆಗೊಂಡ ಟೂರ್ನಿಯಲ್ಲಿ ಅವರು, ದೀರ್ಘಕಾಲದ ಎದುರಾಳಿ ರಷ್ಯಾದ ವ್ಲಾಡಿಮಿರ್ ಕ್ರಾಮ್ನಿಕ್ ಅವರನ್ನು ಹಿಂದಿಕ್ಕಿದರು.

ಬಿಳಿ ಕಾಯಿಗಳೊಂದಿಗೆ ಆಡಿದ ಮಾಜಿ ವಿಶ್ವ ಚಾಂಪಿಯನ್ ಆನಂದ್‌, ನಾಲ್ಕನೇ ಮತ್ತು ಕೊನೆಯ ಸುತ್ತಿನಲ್ಲಿ ಕ್ರಾಮ್ನಿಕ್ ಎದುರು ಡ್ರಾ ಸಾಧಿಸಿದರು. ಆ ಮೂಲಕ 2.5–1.5ರಿಂದ ಪಂದ್ಯ ಗೆದ್ದುಕೊಂಡರು.

ಮೊದಲ ಗೇಮ್‌ನಲ್ಲಿ ಆನಂದ್ ಜಯ ಸಾಧಿಸಿದ್ದರು. ನಂತರದ ಮೂರು ಗೇಮ್‌ಗಳು ಡ್ರಾನಲ್ಲಿ ಅಂತ್ಯವಾಗಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು