ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಈಜು ಕೂಟ: ಅನೀಶ್, ಸುವನಾ ದಾಖಲೆ

Last Updated 5 ಮಾರ್ಚ್ 2021, 19:47 IST
ಅಕ್ಷರ ಗಾತ್ರ

ಬೆಂಗಳೂರು: ಪೂಜಾ ಈಜುಕೇಂದ್ರದ ಅನೀಶ್ ಎಸ್‌.ಗೌಡ ಮತ್ತು ಡಾಲ್ಫಿನ್ ಈಜುಕೇಂದ್ರದ ಸುವನಾ ಭಾಸ್ಕರ್‌ ಅವರುರಾಜ್ಯ ಈಜು ಸಂಸ್ಥೆಯು ಡಾಲ್ಫಿನ್‌ ಅಕ್ವಾಟಿಕ್ಸ್‌, ಪಡುಕೋಣೆ–ದ್ರಾವಿಡ್‌ ಸೆಂಟರ್ ಫಾರ್ ಸ್ಪೋರ್ಟ್ಸ್‌ ಎಕ್ಸಲೆನ್ಸ್‌ನಲ್ಲಿ ಆಯೋಜಿಸಿರುವ ಈಜುಕೂಟದ ಮೊದಲ ದಿನ ದಾಖಲೆ ಬರೆದರು.

ಬಾಲಕರ ಗುಂಪು 1ರಲ್ಲಿ ಸ್ಪರ್ಧಿಸಿದ ಅನೀಶ್‌ 400 ಮೀಟರ್ಸ್ ಮತ್ತು 800 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ದಾಖಲೆ ಮಾಡಿದರೆ ಸುವನಾ ಭಾಸ್ಕರ್‌ ಬಾಲಕಿಯರ ಗುಂಪು ಒಂದರ 100 ಮಿಟರ್ಸ್ ಮತ್ತು 200 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ತಮ್ಮದೇ ದಾಖಲೆ ಉತ್ತಮಪಡಿಸಿಕೊಂಡರು.

ವಿಜಯನಗರ ಈಜು ಕೇಂದ್ರದ ಲಿಖಿತ್‌ ಎಸ್‌.ಪಿ ಮತ್ತು ಬಸವನಗುಡಿ ಈಜುಕೇಂದ್ರದ ಸಲೋನಿ ದಲಾಲ್ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ 100 ಮೀಟರ್ಸ್ ಬ್ರೆಸ್ಟ್‌ಸ್ಟ್ರೋಕ್‌ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದರು. ಸೀನಿಯರ್ ವಿಭಾಗದ 50 ಮೀಟರ್ಸ್ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಬಸವನಗುಡಿ ಈಜುಕೇಂದ್ರದ ಅವಿನಾಶ್ ಮಣಿ ಮತ್ತು ಸ್ನೇಹಾ ಟಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡರು. ಬಸವನಗುಡಿ ಕೇಂದ್ರದ ಕೌಸ್ತುಭ್ ಅಗರವಾಲ್‌ ಮತ್ತು ಜಿಎಎಫ್‌ಆರ್‌ಎವೈನ ವಿ.ಮಾಳವಿಕಾ 1500 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಚಾಂಪಿಯನ್ ಆದರು.

ಮೊದಲ ದಿನದ ಫಲಿತಾಂಶಗಳು: ಪುರುಷರ 1500 ಮೀಟರ್ಸ್‌ ಫ್ರೀಸ್ಟೈಲ್‌: ಕೌಸ್ತುಭ್‌ ಅಗರವಾಲ್‌ (ಬಸವನಗುಡಿ ಈಜುಕೇಂದ್ರ–ಬಿಎಸಿ)–1.ಕಾಲ:17:28.65, ಶ್ರಮಿತ್ ಶ್ರೀನಿವಾಸ್ (ಬಿಎಸಿ)–2, ಶಶಿಕಿರಣ್ (ಬಿಎಸ್‌ಆರ್‌ಸಿ)–3. ಬಾಲಕರ ಗುಂಪು1, 1500 ಮೀಟರ್ಸ್ ಫ್ರೀಸ್ಟೈಲ್‌: ಅನೀಶ್‌ ಎಸ್‌.ಗೌಡ (ಪೂಜಾ ಈಜುಕೇಂದ್ರ)–1. ಕಾಲ:16:47.56, ಧ್ಯಾನ್ ಬಾಲಕೃಷ್ಣ (ಜಿಎಎಫ್‌ಆರ್‌ಎವೈ)–2, ಶಿವಾಂಕ್‌ (ಜಿಎಎಫ್‌ಆರ್‌ಎವೈ)–3.ಬಾಲಕರ ಗುಂಪು2, 1500 ಮೀಟರ್ಸ್ ಫ್ರೀಸ್ಟೈಲ್‌: ಅಮೋಘ್ (ಬಿಎಸಿ)–1. ಕಾಲ: 17:18.26, ಪವನ್‌ ಡಿ (ಪೂಜಾ ಅಕ್ವಾಟಿಕ್ ಸೆಂಟರ್)–2, ಧೋನೀಶ್‌ ಎನ್‌ (ವಿಜಯನಗರ ಈಜುಕೇಂದ್ರ)–3. ಸೀನಿಯರ್ ಪುರುಷರ 400 ಮೀಟರ್ಸ್ ಫ್ರೀಸ್ಟೈಲ್‌: ಕೌಸ್ತುಭ್ ಅಗರವಾಲ್‌ (ಬಿಎಸಿ)–1.ಕಾಲ:4:25.34.ಶ್ರಮಿತ್ ಶ್ರೀನಿವಾಸ್ (ಬಿಎಸಿ)–2, ಶಶಿಕಿರಣ್ (ಬಿಎಸ್‌ಆರ್‌ಸಿ)–3. ಬಾಲಕರ 400 ಮೀಟರ್ಸ್‌ ಗುಂಪು 1 ಫ್ರೀಸ್ಟೈಲ್‌: ಅನೀಶ್ ಗೌಡ (ಪೂಜಾ ಈಜುಕೇಂದ್ರ)–1. ಕಾಲ:4:08.92 (ಹೊಸ ಕೂಟ ದಾಖಲೆ. ಹಳೆಯದು ಸೌರವ್ ಸಾಂಗ್ವೇಕರ್, 4:10.85). ಶಾನ್ ಗಂಗೂಲಿ (ಬಿಎಸಿ)–2, ಶಿವಾಂಕ್‌ (ಜಿಎಎಫ್‌ಆರ್‌ಎವೈ)–3. ಬಾಲಕರ ಗುಂಪು 2, 400 ಮೀಟರ್ಸ್‌ ಫ್ರೀಸ್ಟೈಲ್‌: ಅಮೋಘ್‌ (ಬಿಎಸಿ)–1. ಕಾಲ: 4:29.50, ಧೋಣೀಶ್‌ (ವಿಎಸಿ)–2, ಪವನ್‌ (ಪೂಜಾ)–3. ಪುರುಷರ 100 ಮೀ ಬ್ರೆಸ್ಟ್‌ಸ್ಟ್ರೋಕ್‌: ಲಿಖಿತ್ ಎಸ್ (ವಿಎಸಿ)–1. ಕಾಲ:1:02.67, ಸುನೀಶ್‌ (ಬಿಎಸ್‌ಆರ್‌ಸಿ)–2, ಅಂಶ್‌ ಅರೋರ (ಡಾಲ್ಫಿನ್‌)–3. ಬಾಲಕರ ಗುಂಪು 1ರ 100 ಮೀ ಬ್ರೆಸ್ಟ್‌ಸ್ಟ್ರೋಕ್‌: ಕಲ್ಪ ಬೊಹ್ರಾ (ಪೂಜಾ)–1. ಕಾಲ: 1:10.67. ಮಣಿಕಂಠ: (ದಾವಣಗೆರೆ)–2, ಪ್ರಣವ್‌ ಭಾರತಿ (ಪೂಜಾ)–3. ಬಾಲಕರ 100 ಮೀ ಬ್ರೆಸ್ಟ್‌ಸ್ಟ್ರೋಕ್: ವಿದಿತ್ ಶಂಕರ್ (ಡಾಲ್ಫಿನ್‌)–1. ಕಾಲ: 1:07.41 (ಕೂಟ ದಾಖಲೆ), ಇಂದ್ರಪ್ರಕಾಶ್ (ಪೂಜಾ)–2, ಸಾಹಿಲ್ ದಲಾಲ್ (ಬಿಎಸಿ)–3‌. ಬಾಲಕರ ಗುಂಪು1ರ 400 ಮೀ ಮಿಡ್ಲೆ: ಸೋಹನ್ (ಬಿಎಸಿ)–1. ಕಾಲ:4:44.72, ಅನೀಶ್ ಗೌಡ (ಪೂಜಾ)–2, ಕಲ್ಪ ಬೊಹ್ರಾ (ಪೂಜಾ)–3. ಪುರುಷರ 100 ಮೀ ಬ್ಯಾಕ್‌ಸ್ಟ್ರೋಕ್‌:ಶ್ರೀಹರಿ ನಟರಾಜ್ (ಡಾಲ್ಫಿನ್‌)–1. ಕಾಲ:55.37 (ಕೂಟ ದಾಖಲೆ), ಶಿವ (ಬಿಎಸಿ)–2.

ಮಹಿಳೆಯರ 100 ಮೀ ಬ್ರೆಸ್ಟ್‌ಸ್ಟ್ರೋಕ್‌: ಸಲೋನಿ ದಲಾಲ್‌ (ಬಿಎಸಿ)–1. ಕಾಲ: 1:18.55, ಶ್ರಿಯಾ ಭಟ್‌ (ಬಿಎಸಿ)–2, ಮಹತಿ ಪಟವರ್ಧನ್‌ (ನೆಟ್ಟಕಲ್ಲಪ್ಪ ಈಜುಕೇಂದ್ರ)–3. 1500 ಮೀಟರ್ಸ್‌ ಫ್ರೀಸ್ಟೈಲ್‌: ಮಾಳವಿಕಾ (ಜಿಎಎಫ್‌ಆರ್‌ಎವೈ)–1.ಕಾಲ: 18:36.34, ಧ್ರುತಿ ಮುರಳೀಧರ್‌ (ಬಿಎಸಿ)–2. ಮಹಿಳೆಯರ ಗುಂಪು1, 1500 ಮೀಟರ್ಸ್ ಫ್ರೀಸ್ಟೈಲ್‌: ಅಶ್ಮಿತಾ ಚಂದ್ರ (ಜಿಎಎಫ್‌ಆರ್‌ಎವೈ)–1. ಕಾಲ:19:16.50, ಅನ್ವಯಿ ಎಸ್‌ (ಡಾಲ್ಫಿನ್‌ ಅಕ್ವಾಟಿಕ್ಸ್‌)–2, ಅನುಮತಿ ಚೌಗುಲೆ (ಜಿಎಎಫ್‌ಆರ್‌ಎವೈ)–3.ಮಹಿಳೆಯರ ಗುಂಪು2, 1500 ಮೀಟರ್ಸ್ ಫ್ರೀಸ್ಟೈಲ್‌: ಶಿರೀನ್‌ (ಪೂಜಾ ಈಜುಕೇಂದ್ರ)–1.ಕಾಲ: 18:44.48, ರಿತಿಕಾ ಬಿ.ಎಂ (ಪೂಜಾ ಈಜುಕೇಂದ್ರ)–2, ಆಶ್ನಾ ಅಶ್ವಿನ್‌ (ಜಿಎಎಫ್‌ಆರ್‌ಎವೈ)–3. ಸೀನಿಯರ್ ಮಹಿಳೆಯರ 400 ಮೀಟರ್ಸ್ ಫ್ರೀಸ್ಟೈಲ್‌: ಮಾಳವಿಕಾ (ಜಿಎಎಫ್‌ಆರ್‌ಎವೈ)–1.ಕಾಲ:4:42.65. ಧ್ರುತಿ ಮುರಳೀಧರ್ (ಬಿಎಸಿ)–2, ನಿಖಿತಾ ಎಸ್‌ (ಬಿಎಸಿ)–3. ಮಹಿಳೆಯರ 400 ಮೀಟರ್ಸ್‌ ಗುಂಪು 1 ಫ್ರೀಸ್ಟೈಲ್‌: ಅಶ್ಮಿತಾ ಚಂದ್ರ(ಜಿಎಎಫ್‌ಆರ್‌ಎವೈ)–1.ಕಾಲ:4:50.94. ಮಧುರಾ (ಬಿಎಸಿ)–2, ಅಣ್ವೇಷಾ ಗಿರೀಶ್ (ಡಾಲ್ಫಿನ್‌ ಅಕ್ವಾಟಿಕ್ಸ್‌)–3. ಬಾಲಕಿಯರ ಗುಂಪು 2, 400 ಮೀಟರ್ಸ್‌ ಫ್ರೀಸ್ಟೈಲ್‌: ಶಿರೀನ್‌ (ಪೂಜಾ)–1. ಕಾಲ:4:51.66, ಹಶಿಕಾ (ಡಾಲ್ಫಿನ್‌)–2, ಋತಿಕಾ (ಪೂಜಾ)–3. ಮಹಿಳೆಯರ ಗುಂಪು 1ರ 100 ಮೀ ಬ್ರೆಸ್ಟ್‌ಸ್ಟ್ರೋಕ್‌: ಸಾನ್ವಿ (ಬಿಎಸ್‌ಆರ್‌ಸಿ)–1.ಕಾಲ: 1:20.38. ಮೊನಿತಾ (ಡಿಕೆವಿ)–2, ಜರಾ ಇವಾ (ಡಾಲ್ಫಿನ್‌)–3. ಬಾಲಕಿಯರ ಗುಂಪು1ರ 200 ಮೀ ಬ್ಯಾಕ್‌ಸ್ಟ್ರೋಕ್‌: ಸುವನಾ ಭಾಸ್ಕರ್‌ (ಡಾಲ್ಫಿನ್‌)–1. ಕಾಲ: 2:25.58 (ಕೂಟ ದಾಖಲೆ), ರಿತು ಭರಮರಡ್ಡಿ (ಬಿಎಸಿ)–2, ಭೂಮಿಕಾ (ಡಿಕೆವಿ)–3. ಬಾಲಕಿಯರ ಗುಂಪು2ರ 200 ಮೀ ಬ್ಯಾಕ್‌ಸ್ಟ್ರೋಕ್‌: ರಿಧಿಮಾ ಕುಮಾರ್ (ಬಿಎಸಿ)–1. ಕಾಲ: 2:29.56. ಶಾಲಿನಿ ದೀಕ್ಷಿತ್ (ಡಾಲ್ಫಿನ್‌)–2, ಇಮಾನಿ ಜಾಧವ್‌ (ಡಾಲ್ಫಿನ್‌)–3. ಮಹಿಳೆಯರ 100 ಮೀ ಬ್ಯಾಕ್‌ಸ್ಟ್ರೋಕ್‌: ಸುವನಾ ಭಾಸ್ಕರ್ (ಡಾಲ್ಫಿನ್‌)–1. ಕಾಲ:1:06.09 (ಕೂಟ ದಾಖಲೆ), ನೀನಾ ವೆಂಕಟೇಶ್‌ (ಡಾಲ್ಫಿನ್‌)–2, ರಿತು ಭರಮರಡ್ಡಿ (ಬಿಎಸಿ)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT