ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್‌: ಅನೀಶ್‌–ರಿಧಮ್‌ಗೆ ಕಂಚು

Last Updated 19 ಜುಲೈ 2022, 12:28 IST
ಅಕ್ಷರ ಗಾತ್ರ

ಚಾಂಗ್ವಾನ್‌, ದಕ್ಷಿಣ ಕೊರಿಯಾ: ಐಎಸ್‌ಎಸ್‌ಎಫ್‌ ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಶೂಟರ್‌ಗಳ ಪದಕ ಬೇಟೆ ಮುಂದುವರಿದಿದೆ. ಇಲ್ಲಿ ನಡೆಯುತ್ತಿರುವ ಟೂರ್ನಿಯ 25 ಮೀಟರ್ಸ್ ಫೈರ್ ಪಿಸ್ತೂಲ್‌ ಮಿಶ್ರ ತಂಡ ವಿಭಾಗದಲ್ಲಿ ಮಂಗಳವಾರ ಅನೀಶ್ ಭಾನ್ವಾಲ ಮತ್ತು ರಿಧಮ್ ಸಂಗ್ವಾನ್‌ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ಕಂಚಿನ ಪದಕಕ್ಕಾಗಿ ನಡೆದ ಹಣಾಹಣಿಯಲ್ಲಿ ಭಾರತದ ಜೋಡಿಯು 16–12ರಿಂದ ಜೆಕ್ ಗಣರಾಜ್ಯದ ಅನ್ನಾ ದೆದೊವಾ ಮತ್ತು ಮಾರ್ಟಿನ್‌ ಪೊದಾರಸ್ಕಿ ಅವರನ್ನು ಮಣಿಸಿದರು.

ಅನೀಶ್ ಮತ್ತು ರಿಧಮ್ ಜೋಡಿಗೆ ವಿಶ್ವಕಪ್‌ ಹಂತದಲ್ಲಿ ಇದು ಎರಡನೇ ಪದಕವಾಗಿದೆ. ಈ ವರ್ಷ ಮಾರ್ಚ್‌ನಲ್ಲಿ ಕೈರೊದಲ್ಲಿ ನಡೆದ ಟೂರ್ನಿಯಲ್ಲಿ ಈ ಶೂಟರ್‌ಗಳು ಚಿನ್ನದ ಪದಕ ಗೆದ್ದುಕೊಂಡಿದ್ದರು.

ಭಾರತ ಸದ್ಯ 14 ಪದಕಗಳನ್ನು (ತಲಾ ಐದು ಚಿನ್ನ, ಬೆಳ್ಳಿ ಮತ್ತು 4 ಕಂಚು) ಜಯಿಸಿದ್ದು ಪದಕಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT