ಅಥ್ಲೆಟಿಕ್ಸ್: ಅನುರಾಣಿ ದಾಖಲೆ; ಪೂವಮ್ಮ ಫೈನಲ್‌ಗೆ

ಪಟಿಯಾಲ: ಜಾವೆಲಿನ್ ಥ್ರೋ ಪಟು ಅನು ರಾಣಿ ಇಲ್ಲಿ ಸೋಮವಾರ ಆರಂಭಗೊಂಡ ಫೆಡರೇಷನ್ ಕಪ್ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡರು. ಆದರೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು. ಕರ್ನಾಟಕದ ಎಂ.ಆರ್.ಪೂವಮ್ಮ 400 ಮೀಟರ್ಸ್ ಓಟದಲ್ಲಿ ಫೈನಲ್ ಪ್ರವೇಶಿಸಿದರು.
63.24 ಮೀಟರ್ಸ್ ದೂರದ ಸಾಧನೆ ಮಾಡಿದ ಅನು ರಾಣಿ ಚಿನ್ನದ ಪದಕ ಕೊರಳಿಗೇರಿಸಿಕೊಂಡರು. ದೋಹಾದಲ್ಲಿ 2019ರಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 62.43 ಮೀಟರ್ಸ್ ದೂರ ಎಸೆದು ಮಾಡಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದರು. 64 ಮೀಟರ್ಸ್ ದೂರದ ಸಾಧನೆ ಮಾಡಿದ್ದರೆ ಅವರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತಿದ್ದರು.
ರಾಜಸ್ತಾನದ ಸಂಜನಾ ಚೌಧರಿ (54.55 ಮೀ) ಮತ್ತು ಹರಿಯಾಣದ ಕುಮಾರಿ ಶರ್ಮಿಳಾ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು. ರಾಣಿ ಅವರ ಅಮೋಘ ಸಾಧನೆಯ ಮೂಲಕ ಉತ್ತರ ಪ್ರದೇಶ ಮೂರು ಚಿನ್ನದ ಪದಕ ಗಳಿಸಿತು.
ಮಹಿಳೆಯರ 400 ಮೀಟರ್ಸ್ ಓಟದಲ್ಲಿ 54.34 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಎಂ.ಆರ್.ಪೂವಮ್ಮ ಎಂಟು ಮಂದಿಯನ್ನು ಒಳಗೊಂಡ ಫೈನಲ್‌ಗೆ ಲಗ್ಗೆ ಇರಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.