ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿಗೆ ಅನೂಪ್ ಕುಮಾರ್ ವಿದಾಯ

Last Updated 19 ಡಿಸೆಂಬರ್ 2018, 19:43 IST
ಅಕ್ಷರ ಗಾತ್ರ

ಪಂಚಕುಲಾ: 15 ವರ್ಷ ಗಳಿಂದ ಭಾರತ ಕಬಡ್ಡಿಯಲ್ಲಿ ಮಿಂಚಿದ, ‘ಕ್ಯಾಪ್ಟನ್ ಕೂಲ್‌’ ಎಂದೇ ಕರೆಯಲಾಗುತ್ತಿದ್ದ ಅನೂಪ್ ಕುಮಾರ್ ಬುಧವಾರ ನಿವೃತ್ತಿ ಘೋಷಿಸಿದ್ದಾರೆ.

2006ರಲ್ಲಿ, ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಅಂತರರಾಷ್ಟ್ರೀಯ ಕಬಡ್ಡಿಗೆ ಪದಾರ್ಪಣೆ ಮಾಡಿದ್ದ ಅವರು ನಂತರ ತಂಡದ ನಾಯಕನಾಗಿದ್ದರು. 2010 ಮತ್ತು 2014ರ ಏಷ್ಯಾ ಕ್ರೀಡಾಕೂಟದ ಕಬಡ್ಡಿಯಲ್ಲಿ ಭಾರತಕ್ಕೆ ಚಿನ್ನ ಗಳಿಸಿಕೊಡು ವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 35 ವರ್ಷದ ಅವರು 2016ರಲ್ಲಿ ವಿಶ್ವಕಪ್‌ ಗೆದ್ದುಕೊಟ್ಟಿದ್ದರು.

ಪ್ರೊ ಕಬಡ್ಡಿ ಲೀಗ್‌ನ ಆರಂಭದಲ್ಲಿ ಯು ಮುಂಬಾ ತಂಡದ ನಾಯಕರಾಗಿದ್ದ ಅವರು ಎರಡನೇ ಆವೃತ್ತಿಯಲ್ಲಿ ತಂಡಕ್ಕೆ ಪ್ರಶಸ್ತಿ ಗೆಲ್ಲಿಸಿಕೊಟ್ಟರು. ಈ ಬಾರಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ಪರವಾಗಿ ಆಡುತ್ತಿದ್ದರು. ತಕ್ಷಣಕ್ಕೆ ಜಾರಿಗೆ ಬರುವಂತೆ ನಿವೃತ್ತಿ ಘೋಷಿಸಿದ್ದರಿಂದ ಬುಧವಾರ ರಾತ್ರಿ ನಡೆದಿದ್ದ ಗುಜರಾತ್‌ ಫಾರ್ಚೂನ್‌ಜೈಂಟ್ಸ್ ಎದುರಿನ ಪಂದ್ಯದಲ್ಲಿ ಆಡಿರಲಿಲ್ಲ.

‘ಬದುಕಿನ ಬಹುಮುಖ್ಯ ಕನಸನ್ನು ನನಸು ಮಾಡಲು ಸಾಧ್ಯವಾದ ಅಪ ರೂಪದ ವ್ಯಕ್ತಿಗಳಲ್ಲಿ ನಾನೂ ಒಬ್ಬ. ಪ್ರೊ ಕಬಡ್ಡಿಯಿಂದಾಗಿ ಕಬಡ್ಡಿ ಪ್ರಸಿದ್ಧಿ ಪಡೆದಿದೆ. ಇದರಲ್ಲಿ ಭಾಗಿಯಾಗಲು ಸಾಧ್ಯವಾದದ್ದು ಕೂಡ ನನ್ನ ಸೌಭಾಗ್ಯ. ಇಂದು ನನ್ನ ಮಗನ 10ನೇ ಜನ್ಮದಿನ. ಈ ದಿನವೇ ನಿವೃತ್ತಿ ಘೋಸಿಸುತ್ತಿದ್ದೇನೆ’ ಎಂದು ಅನೂಪ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT