ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ.ಟಿ: ಅರ್ಚನಾಗೆ ಬೆಳ್ಳಿ

Last Updated 23 ಮಾರ್ಚ್ 2019, 20:25 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಅರ್ಚನಾ ಕಾಮತ್‌, ಒಮನ್‌ನಲ್ಲಿ ನಡೆದ ಸೀಮಾಸ್ಟರ್‌ 2019 ಐಟಿಟಿಎಫ್‌ ಚಾಲೆಂಜ್‌ ಪ್ಲಸ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಬೆಳ್ಳಿಯ ಪದಕ ಜಯಿಸಿದ್ದಾರೆ.

ಶನಿವಾರ ನಡೆದ 21 ವರ್ಷದೊಳಗಿನವರ ಮಹಿಳಾ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಅರ್ಚನಾ 7–15, 8–15, 6–15ರಲ್ಲಿ ಜಪಾನ್‌ನ ಅಗ್ರಶ್ರೇಯಾಂಕದ ಆಟಗಾರ್ತಿ ಸತ್ಸುಕಿ ಒಡೊ ಎದುರು ಪರಾಭವಗೊಂಡರು.

ಬೆಂಗಳೂರಿನ ಅರ್ಚನಾ, ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ 3–0 ಗೇಮ್‌ಗಳಿಂದ ರಷ್ಯಾದ ಎರಡನೇ ಶ್ರೇಯಾಂಕದ ಆಟಗಾರ್ತಿ ವಲೇರಿ ಶಚೆರ್‌ಬತಿಕ್‌ಗೆ ಆಘಾತ ನೀಡಿದ್ದರು.

ಟೂರ್ನಿಯಲ್ಲಿ ಒಂಬತ್ತನೇ ಶ್ರೇಯಾಂಕ ಹೊಂದಿದ್ದ ರಾಜ್ಯದ ಆಟಗಾರ್ತಿ ಕ್ವಾರ್ಟರ್‌ ಫೈನಲ್‌ನಲ್ಲಿ 3–0ರಲ್ಲಿ ಸಿಂಗಪುರದ ಗೊಯಿ ರುಯಿ ಕ್ಸಿಯಾನ್‌ ಎದುರು ಗೆದ್ದಿದ್ದರು.

ಸೆಮಿಫೈನಲ್‌ನಲ್ಲಿ ಅರ್ಚನಾ 3–2ರಲ್ಲಿ ರಷ್ಯಾದ ಮರಿಯಾ ತಯಿಲಕೋವಾ ಅವರನ್ನು ಮಣಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT