ಆರ್ಚರಿ: ಪದಕ ಗೆಲ್ಲುವ ‘ವಿಶ್ವಾಸ’

7

ಆರ್ಚರಿ: ಪದಕ ಗೆಲ್ಲುವ ‘ವಿಶ್ವಾಸ’

Published:
Updated:

ಕೋಲ್ಕತ್ತ: ಹಿರಿಯ ಆರ್ಚರಿ ಪಟು ವಿಶ್ವಾಸ್‌ ಅವರು ಏಷ್ಯನ್‌ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ವಿಶ್ವಾಸದೊಂದಿಗೆ ಜಕಾರ್ತಕ್ಕೆ ತೆರಳಿದ್ದಾರೆ. 33 ವರ್ಷದ ವಿಶ್ವಾಸ್‌, ರಿಕರ್ವ್ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಹಿಂದೆ ಅವರ ಜೊತೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸವಾಯಿಯನ್‌ ಮಜಿ ಅವರು ಈಗ ತಂಡದ ಕೋಚ್ ಆಗಿದ್ದಾರೆ.

ಈ ಬಾರಿ ತಂಡದಲ್ಲಿರುವವರ ಪೈಕಿ ಈ ಹಿಂದೆ ಪದಕ ಗೆದ್ದ ಏಕೈಕ ಆರ್ಚರಿ ಪಟು ವಿಶ್ವಾಸ್‌. ಅವರು 2006ರಲ್ಲಿ ದೋಹಾದಲ್ಲಿ ನಡೆದಿದ್ದ ಕೂಟದ ತಂಡ ವಿಭಾಗದಲ್ಲಿ ಕಂಚು ಗೆದ್ದಿದ್ದರು. ಅವರೊಂದಿಗೆ ಈ ಬಾರಿ ಅತನು ದಾಸ್‌, ಸುಖ್‌ಚೈನ್ ಸಿಂಗ್‌ ಮತ್ತು ಜಗದೀಶ್‌ ಚೌಧರಿ ಕಣಕ್ಕೆ ಇಳಿಯಲಿದ್ದಾರೆ.

‘ಅನೇಕ ವರ್ಷಗಳಿಂದ ಭಾರತ ತಂಡದ ಸದಸ್ಯನಾಗಿದ್ದೇನೆ. ಕೆಲವು ಪ್ರಮುಖ ಟೂರ್ನಿಗಳ ಸಂದರ್ಭದಲ್ಲಿ ತಂಡದಿಂದ ಹೊರಗೆ ಉಳಿದಿದ್ದೆ. ನನ್ನೊಂದಿಗೆ ತಂಡದಲ್ಲಿದ್ದವರ ಪೈಕಿ ಕೆಲವರು ಈಗಾಗಲೇ ನಿವೃತ್ತಾಗಿದ್ದಾರೆ. ಕೆಲವರು ಕೋಚ್‌ ಆಗಿದ್ದಾರೆ. ಆದರೆ ನನಗೆ ಇನ್ನೂ ಸ್ಪರ್ಧಿಸುವ ಹುಮ್ಮಸ್ಸು ಇದೆ’ ಎಂದು ವಿಶ್ವಾಸ್ ಸುದ್ದಿಸಂಸ್ಥೆಗೆ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !