ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಆರ್ಚರಿ ತಂಡ ಒಲಿಂಪಿಕ್ಸ್‌ ರಹದಾರಿ

Last Updated 12 ಜೂನ್ 2019, 17:42 IST
ಅಕ್ಷರ ಗಾತ್ರ

ಡೆನ್ ಬಾಷ್, ನೆದರ್‌ಲೆಂಡ್ಸ್‌: ಭಾರತ ಪುರುಷರ ಆರ್ಚರಿ ತಂಡವು 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದೆ.

ಇಲ್ಲಿ ನಡೆಯುತ್ತಿರುವ ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ 5–0ಯಿಂದ ಕೆನಡಾ ವಿರುದ್ಧ ಗೆದ್ದಿತು. ಆ ಮೂಲಕ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟ ಭಾರತ ತಂಡವು ಒಲಿಂಪಿಕ್ಸ್‌ ರಹದಾರಿ ಪಡೆಯಿತು. ತರುಣದೀಪ್ ರಾಯ್, ಪ್ರವೀಣ್ ಜಾಧವ್ ಮತ್ತು ಅತನು ದಾಸ್ ಅವರಿದ್ದ ತಂಡವು ಈ ಸಾಧನೆ ಮಾಡಿದೆ.

2012ರ ಒಲಿಂಪಿಕ್ಸ್‌ ನಂತರ ಮತ್ತೊಮ್ಮೆ ಪುರುಷರ ತಂಡವು ಅರ್ಹತೆ ಗಿಟ್ಟಿಸಿದೆ. 2016ರ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ತಂಡವು ವಿಫಲವಾಗಿತ್ತು.

‘ಅಂತಿಮವಾಗಿ ನಾವು ಒಲಿಂಪಿಕ್ಸ್‌ ಪ್ರವೇಶಿಸುವಲ್ಲಿ ಸಫಲರಾಗಿದ್ದೇವೆ. ಈಗ ನಮ್ಮ ಗಮನ 2020ರತ್ತ ನೆಟ್ಟಿದೆ. ಅಲ್ಲಿ ಉನ್ನತ ಸಾಧನೆ ಮಾಡುವುದು ನಮ್ಮ ಗುರಿ’ ಎಂದು ಒಲಿಂಪಿಯನ್ ತರುಣ್‌ ದೀಪ್ ರಾಯ್ ತಿಳಿಸಿದ್ದಾರೆ.

ಮಹಿಳೆಯರ ರಿಕರ್ವ್ ತಂಡವ ಕೂಡ ಒಲಿಂಪಿಕ್ಸ್‌ ರಹದಾರಿ ಪಡೆಯುವ ವಿಶ್ವಾಸದಲ್ಲಿದೆ. ಇಲ್ಲಿ ನಡಯುತ್ತಿರುವ ಸ್ಪರ್ಧೆಯಲ್ಲಿ ಮಹಿಳಾ ವಿಭಾಗದಲ್ಲಿ ಅಗ್ರ ಎಂಟು ಸ್ಥಾನಗಳನ್ನು ಗಳಿಸುವ ತಂಡಗಳಿಗೆ ಟೋಕಿಯೊ ಟಿಕೆಟ್ ಲಭಿಸಲಿದೆ.

ಮಿಶ್ರ ತಂಡ ವಿಭಾಗದಲ್ಲಿ ತರುಣ್ ದೀಪ್ ರಾಯ್ ಮತ್ತು ಬೊಂಬಿಯಾಲಾ ದೇವಿ ಸೋತರು. ತಂಡವು 17–19ರಿಂದ ಪೊಲೆಂಡ್ ಎದುರು ಸೋತಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT