ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಥೆ ಒಂದು; ಅಧ್ಯಕ್ಷರು ಇಬ್ಬರು

ಆರ್ಚರಿ ‘ಸಂಸ್ಥೆಗಳಿಗೆ’ ಒಂದೇ ದಿನ ಎರಡು ಚುನಾವಣೆ: ಡಬ್ಲ್ಯುಎಎ ಎಚ್ಚರಿಕೆ
Last Updated 9 ಜೂನ್ 2019, 20:18 IST
ಅಕ್ಷರ ಗಾತ್ರ

ಕೋಲ್ಕತ್ತ: ವಿಶ್ವ ಆರ್ಚರಿ ಸಂಸ್ಥೆಯ ಎಚ್ಚರಿಕೆಯನ್ನೂ ಲೆಕ್ಕಿಸದೆ ಭಾರತದ ಎರಡು ಸಂಸ್ಥೆಗಳು ಒಂದೇ ದಿನ ಚುಣಾವಣೆ ನಡೆಸಿದ್ದು ಇಬ್ಬರು ಅಧ್ಯಕ್ಷರು ನೇಮಕಗೊಂಡಿದ್ದಾರೆ.

ಒಂದು ಸಂಸ್ಥೆಗೆ ಕೇಂದ್ರ ಸಚಿವ ಅರ್ಜುನ್ ಮುಂಡಾ ಅಧ್ಯಕ್ಷರಾದರೆ ಮತ್ತೊಂದರ ಅಧ್ಯಕ್ಷರಾಗಿ ಬಿವಿಬಿ ರಾವ್ ಆಯ್ಕೆಯಾದರು. ಒಂದು ಚುನಾವಣೆ ದೆಹಲಿಯಲ್ಲಿ, ಮತ್ತೊಂದು ಚಂಡೀಗಢದಲ್ಲಿ ನಡೆದಿದ್ದು ಇಬ್ಬರನ್ನೂ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ನಿಯಮಗಳನ್ನು ಪಾಲಿಸಿದ್ದು, ರಾಷ್ಟ್ರೀಯ ಕ್ರೀಡಾ ನೀತಿಯಡಿಯಲ್ಲೇ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿಕೊಂಡಿರುವ ಎರಡೂ ಸಂಸ್ಥೆಗಳ ಪದಾಧಿಕಾರಿಗಳು ಆರು ತಿಂಗಳ ಒಳಗೆ ದೆಹಲಿ ಹೈಕೋರ್ಟ್‌ಗೆ ವರದಿಯನ್ನು ಸಲ್ಲಿಸಲಿದ್ದಾರೆ. ಎರಡು ಸಂಸ್ಥೆಗಳ ಪೈಕಿ ಯಾವುದರ ಚುನಾವಣೆಯನ್ನು ಅಧಿಕೃತ ಎಂದು ಘೋಷಿಸಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಒಂದಾಗಿಸಲು ನಡೆಸಿದ ಪ್ರಯತ್ನ ವಿಫಲ: ಭಾರತದ ಎರಡು ಸಂಸ್ಥೆಗಳನ್ನು ಒಗ್ಗೂಡಿಸಿ ಒಂದೇ ಚುನಾವಣೆ ನಡೆಸಲು ವಿಶ್ವ ಆರ್ಚರಿ ಸಂಸ್ಥೆ ಪ್ರಯತ್ನಿಸಿತ್ತು. ಪ್ರತ್ಯೇಕ ಚುನಾವಣೆ ನಡೆಸಿದರೆ ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿತ್ತು. ಆದರೆ ಫೆಡರೇಷನ್‌ನ ಪ್ರಯತ್ನಗಳಿಗೆ ಫಲ ಸಿಗಲಿಲ್ಲ. ಭಾರತ ಆರ್ಚರಿ ಸಂಸ್ಥೆಯನ್ನು ಅಮಾನತು ಮಾಡಬೇಕೇ ಬೇಡವೇ ಎಂಬುದನ್ನು ವಾರದೊಳಗೆ ನಿರ್ಧರಿಸಲಾಗುವುದು ಎಂದು ಸಂಸ್ಥೆಯ ಪದಾಧಿಕಾರಿಯೊಬ್ಬರು ತಿಳಿಸಿದರು.

ಈ ಎಲ್ಲ ವಿವಾದಗಳ ನಡುವೆ ನೆದರ್ಲೆಂಡ್ಸ್‌ನಲ್ಲಿ ಮಂಗಳವಾರ ವಿಶ್ವ ಚಾಂಪಿಯನ್‌ಷಿಪ್‌ ನಡೆಯಲಿದ್ದು ಭಾರತದ ಸ್ಪರ್ಧಿಗಳು ಇದರಲ್ಲಿ ಪಾಲ್ಗೊಳ್ಳಲು ಯಾವುದೇ ಅಡ್ಡಿ ಇಲ್ಲ ಎಂದು ತಿಳಿಸಲಾಗಿದೆ.

ದೆಹಲಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಕೈಲಾಶ್ ಗಂಭೀರ್ ಅವರು ಅರ್ಜುನ್ ಮುಂಡಾ ಅಧ್ಯಕ್ಷರಾಗಿರುವುದಾಗಿ ಘೋಷಿಸಿದರು. ವೀರೇಂದ್ರ ಸಚ್‌ದೇವ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಸುಶೀಲ್ ಶರ್ಮಾ ಹಿರಿಯ ಉಪಾಧ್ಯಕ್ಷರಾದರು. ಉಪಾಧ್ಯಕ್ಷರು: ಕ್ಯಾಪ್ಟನ್ ಅಭಿಮನ್ಯು, ರೂಪಕ್ ದೆಬ್ರಾಯ್, ರಾಜೇಂದ್ರ ಸಿಂಗ್ ತೋಮರ್, ರೂಪೇಶ್ ಕರ್‌, ಡಿ.ಕೆ.ವಿದ್ಯಾರ್ಥಿ, ಪಾಯ ಬಾನಿಲ ವರ್ ನೊಂಗ್‌ಬ್ರಿ, ಜೋರಿಸ್ ಪೌಲೋಸ್ ಉಮ್ಮಚೇರಿಲ್, ಕೆ.ಕೆ. ಕದಂ; ಜಂಟಿ ಕಾರ್ಯದರ್ಶಿಗಳು: ಮನೋಜ್ ಕುಮಾರ್, ಕೆ.ಬಿ.ಗುರುಂಗ್, ಚೇತನ್ ಕವಳೇಕರ್, ಶಿಹಾನ್ ಹುಸೇನಿ, ಕೊಂಜುಮ್ ರೀಬಾ, ರಘುನಾಥ್ ರಾಣ, ಆಶಿಶ್ ತೋಮರ್; ಖಜಾಂಚಿ: ಪ್ರಮೋದ್ ಚಂದೂರ್ಕರ್.

ಚಂಡೀಗಢದಲ್ಲಿ ನಡೆದ ಚುನಾವಣೆ: ಅಧ್ಯಕ್ಷ: ಬಿ.ವಿ.ಪಿ ರಾವ್‌; ಹಿರಿಯ ಉಪಾಧ್ಯಕ್ಷ: ಜಿ.ಎ ಇಬೊಪಿಶಕ್ ಶರ್ಮಾ; ಉಪಾಧ್ಯಕ್ಷರು: ಅನಂತರಾಜು, ಕೆ.ಎಸ್‌.ಕಂಗ್‌, ಚೆರುಕುರಿ ಸತ್ಯನಾರಾರಣ, ಜಯಂತ ಬೋರೊ, ವಿ.ಲಾಲ್‌ಜೌಮ್ಯಾನ, ಕೈಲಾಶ್‌ ಮುರಾರ್ಕ, ಡಿ.ಕೆ.ವಿದ್ಯಾರ್ಥಿ; ಪ್ರಧಾನ ಕಾರ್ಯದರ್ಶಿ: ಮಹಾ ಸಿಂಗ್‌; ಖಜಾಂಚಿ: ಸಮಿಖ್ಯಾ ನಂದ ದಾಸ್‌; ಜಂಟಿ ಕಾರ್ಯದರ್ಶಿ ಆರ್‌.ವೆಂಕಟೇಶ್‌, ಹುನೇಜೊ ತಿಸಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT