ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಸ್‌: ಅರ್ಜುನ್‌ ಮೈನಿಗೆ ಎರಡನೇ ಸ್ಥಾನ

Last Updated 5 ಸೆಪ್ಟೆಂಬರ್ 2022, 15:28 IST
ಅಕ್ಷರ ಗಾತ್ರ

ಹಾಕೆನೀಮ್‌, ಜರ್ಮನಿ: ಭಾರತದ ಅರ್ಜುನ್‌ ಮೈನಿ ಅವರು ಇಲ್ಲಿ ನಡೆದ ಫನಾಟೆಕ್‌ ಜಿಟಿ ವಿಶ್ವ ಚಾಲೆಂಜ್‌ ಯೂರೋಪ್ ಟೂರ್ನಿಯಗೋಲ್ಡ್ ಕ್ಲಾಸ್‌ ವಿಭಾಗದಲ್ಲಿ ಎರಡನೇ ಸ್ಥಾನ ಗಳಿಸಿದರು.

ಮರ್ಸಿಡಿಸ್‌ –ಎಎಂಜಿ ಪ್ರತಿನಿಧಿಸುವ ಬೆಂಗಳೂರು ಮೂಲದ ಕಾರು ರೇಸರ್‌ ಅರ್ಜುನ್‌, ಹ್ಯೂಬರ್ಟ್‌ ಹಾಪ್ಟ್‌ ಮತ್ತು ಫ್ಲೋರಿನಾ ಸೊಲ್ಜ್‌ ಅವರನ್ನೊಳಗೊಂಡ ಎಚ್‌ಆರ್‌ಟಿ ತಂಡವು ‘ಪೋಡಿಯಂ ಫಿನಿಶ್’ ಮಾಡಿತು.

ರೇಸ್‌ನಲ್ಲಿ ರಕ್ಷಣಾ ಕಾರುಗಳಿಂದ ಹಲವು ಬಾರಿ ಅಡೆತಡೆಗಳು ಉಂಟಾದವು. ಇದರಿಂದಾಗಿ ಒಂದು ಹಂತದಲ್ಲಿ ಅರ್ಜುನ್ ಅವರಿದ್ದ ಕಾರು, ಐದನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಹಿಂದುಳಿಯಿತು.

ಅರ್ಜುನ್ ಅವರ ತಂಡವು ಸದ್ಯ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟಾರೆ ನಾಲ್ಕನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT