ಶನಿವಾರ, ಡಿಸೆಂಬರ್ 14, 2019
22 °C

ಕುಸ್ತಿ: ಅರ್ಜುನ ಹಲಕುರ್ಕಿಗೆ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲುಧಿಯಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನ ಮೂರನೇ ದಿನವಾದ ಭಾನುವಾರ ಕರ್ನಾಟಕದ ಅರ್ಜುನ ಹಲಕುರ್ಕಿ ಚಿನ್ನದ ಪದಕ ಗಳಿಸಿದರು. 55 ಕೆ.ಜಿ. ಗ್ರೀಕೊ ರೋಮನ್ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದರು.

ಫೈ‌ನಲ್‌ನಲ್ಲಿ ಅವರು ಹರಿಯಾಣದ ಅಜಯ್ ವಿರುದ್ಧ 8-0 ಅಂತರದ ಗೆಲುವು ಸಾಧಿಸಿದರು. ಸರ್ವಿಸಸ್ ಕ್ರೀಡಾ ನಿಯಂತ್ರಣ ಮಂಡಳಿ (ಎಸ್‌ಎಸ್‌ಸಿಬಿ) ಪ್ರತಿನಿಧಿಸುತ್ತಿರುವ ಅರ್ಜುನ, ದಾವಣಗೆರೆ ಕ್ರೀಡಾನಿಲಯದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಭಾನುವಾರದ ಜಯದೊಂದಿಗೆ ಅವರು ಸ್ಯಾಫ್ ಕೂಟಕ್ಕೆ ಅರ್ಹತೆಯನ್ನೂ ಗಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು