ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣದಲ್ಲಿ 200 ಆಟಗಾರರು

ಗ್ರ್ಯಾನ್‌ ಪ್ರಿ ಬ್ಯಾಡ್ಮಿಂಟನ್ ಲೀಗ್; ಹರಾಜು ಪ್ರಕ್ರಿಯೆ ಜೂನ್ 12 ರಂದು
Last Updated 11 ಜೂನ್ 2022, 13:44 IST
ಅಕ್ಷರ ಗಾತ್ರ

ಬೆಂಗಳೂರು: ಚೊಚ್ಚಲ ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್ ಲೀಗ್‌ನ (ಜಿಪಿಬಿಎಲ್‌) ಎಂಟು ತಂಡಗಳಿಗೆ ಆಟಗಾರರ ಆಯ್ಕೆಗಾಗಿ ಹರಾಜು ಪ್ರಕ್ರಿಯೆ ಭಾನುವಾರ ಇಲ್ಲಿ ನಡೆಯಲಿದೆ.

ಮೊದಲ ಋತುವಿನ ಟೂರ್ನಿಯಲ್ಲಿ ಕರ್ನಾಟಕ ಆಟಗಾರರು ಮಾತ್ರ ಪಾಲ್ಗೊಳ್ಳಲಿದ್ದು, ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ 200 ಸ್ಪರ್ಧಿಗಳು ಹರಾಜಿನಲ್ಲಿ ಭಾಗವಹಿಸಲಿದ್ದಾರೆ.

‌ಆಟಗಾರರನ್ನು ಐಕಾನ್‌, ಮೊದಲ ಹಂತ ಮತ್ತು ಎರಡನೇ ಹಂತ ಎಂಬುದಾಗಿ ಮೂರು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಎಲ್ಲ ಹಂತದವರಿಗೂ ಪ್ರತ್ಯೇಕ ಮೂಲಬೆಲೆ ಮತ್ತು ಗರಿಷ್ಠ ಬೆಲೆ ನಿಗದಿಪಡಿಸಲಾಗಿದೆ.

ಬಿಡ್ಡಿಂಗ್‌ನಲ್ಲಿ ಒಂದು ತಂಡಕ್ಕೆ ಗರಿಷ್ಠ ₹ 12 ಲಕ್ಷ ಖರ್ಚು ಮಾಡಲ ಅವಕಾಶವಿದೆ. ಐಕಾನ್‌ ಆಟಗಾರರಿಗೆ ₹ 2.5 ಲಕ್ಷ ಮೂಲಬೆಲೆ, ₹ 3.5 ಲಕ್ಷ ಗರಿಷ್ಠ ಬೆಲೆ ನಿಗದಿಪಡಿಸಲಾಗಿದೆ. ಐಕಾನ್‌ ಆಟಗಾರರನ್ನು ಸೆಳೆದುಕೊಳ್ಳಲು ಫ್ರಾಂಚೈಸಿಗಳ ನಡುವೆ ತುರುಸಿನ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.

’ಯುವ ಹಾಗೂ ಪ್ರತಿಭಾನ್ವಿತ ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. 400 ಕ್ಕೂ ಅಧಿಕ ಮಂದಿ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದರು. ಜಿಪಿಬಿಎಲ್‌ನ ಕೋಚ್‌ಗಳು ಮತ್ತು ಆಡಳಿತ ಮಂಡಳಿಯು ಅಂತಿಮವಾಗಿ 200 ಮಂದಿಯ ಪಟ್ಟಿ ಸಿದ್ಧಪಡಿಸಿದೆ. ಈ ಆಟಗಾರರನ್ನು ಮೂರು ಹಂತಗಳನ್ನಾಗಿ ವಿಂಗಡಿಸಲಾಗಿದೆ‘ ಎಂದು ಜಿಪಿಬಿಎಲ್ ಸಂಘಟಕರಲ್ಲಿ ಒಬ್ಬರಾದ ಪ್ರಶಾಂತ್‌ ರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT