ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಕಾರ್‌ ರ‍್ಯಾಲಿ: ಅರವಿಂದ್‌ ಸ್ಪರ್ಧೆ

Last Updated 3 ಡಿಸೆಂಬರ್ 2018, 16:08 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ಮೋಟರ್‌ ಬೈಕ್‌ ಸಾಹಸಿ ಕೆ.ಪಿ.ಅರವಿಂದ್‌, ಮುಂದಿನ ವರ್ಷ ನಡೆಯುವ ಪ್ರತಿಷ್ಠಿತ ಡಕಾರ್‌ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.

ಶೆರ್ಕೊ ಟಿವಿಎಸ್‌ ಫ್ಯಾಕ್ಟರಿ ರ‍್ಯಾಲಿ ತಂಡ ಸೋಮವಾರ ಅರವಿಂದ್‌ ಹೆಸರನ್ನು ಪ್ರಕಟಿಸಿದೆ. ಒಟ್ಟು 5000 ಕಿಲೊ ಮೀಟರ್ಸ್‌ ದೂರದ ರ‍್ಯಾಲಿಯು ಜನವರಿ 6ರಿಂದ 17ರ ವರೆಗೆ ಪೆರುವಿನಲ್ಲಿ ನಡೆಯಲಿದೆ.

ಪ್ಯಾನ್‌ ಪೆಸಿಫಿಕ್‌ ರ‍್ಯಾಲಿ ವೇಳೆ ಗಾಯಗೊಂಡಿದ್ದ ಉಡುಪಿಯ ಬೈಕ್‌ ಸಾಹಸಿ, ಇದರಿಂದ ಗುಣಮುಖವಾದ ನಂತರ ಸ್ಪೇನ್‌ನಲ್ಲಿ ನಡೆದಿದ್ದ ವಿಶೇಷ ತರಬೇತಿಯಲ್ಲಿ ಭಾಗವಹಿಸಿದ್ದರು.

ಅರವಿಂದ್‌, ಮೂರನೇ ಸಲ ರ‍್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ. ಅವರು ಈ ಬಾರಿ ಡಕಾರ್‌ ಸ್ಪೆಕ್‌ ಆರ್‌ಟಿಆರ್‌ 450 ರ‍್ಯಾಲಿ ಮೋಟರ್‌ಬೈಕ್‌ನೊಂದಿಗೆ ಕಣಕ್ಕಿಳಿಯಲಿದ್ದಾರೆ.

‘ವಿಶ್ವದ ಅಂತ್ಯಂತ ಅಪಾಯಕಾರಿ ರ‍್ಯಾಲಿಗಳಲ್ಲಿ ಡಕಾರ್‌ ಕೂಡಾ ಒಂದು. ಇದರಲ್ಲಿ ಮೂರನೇ ಬಾರಿ ಭಾಗವಹಿಸುವ ಅವಕಾಶ ಸಿಕ್ಕಿರುವುದಕ್ಕೆ ಅತೀವ ಖುಷಿಯಾಗಿದೆ. ರ‍್ಯಾಲಿ ಆರಂಭಕ್ಕೆ ಇನ್ನು ಒಂದು ತಿಂಗಳು ಸಮಯ ಇದೆ. ಈ ಅವಧಿಯಲ್ಲಿ ತಂಡದ ಇತರ ಸದಸ್ಯರ ಜೊತೆ ಮೊರೊಕ್ಕೊದಲ್ಲಿ ಕಠಿಣ ಅಭ್ಯಾಸ ನಡೆಸುತ್ತೇನೆ’ ಎಂದು ಅರವಿಂದ್‌ ಹೇಳಿದ್ದಾರೆ.

ಸಹೋದರರಾದ ಮೈಕಲ್‌ ಮತ್ತು ಆ್ಯಂಡ್ರಿಯನ್‌ ಮೆಟ್ಗೆ ಹಾಗೂ ಸ್ಪೇನ್‌ನ ಲೊರೆಂಜೊ ಸ್ಯಾಂಟೋಲಿನೊ ಅವರೂ ರ‍್ಯಾಲಿಯಲ್ಲಿ ಟಿವಿಎಸ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT