ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳನ ಅಂಗಳದಲ್ಲಿ ಬಂಡೆ ಕೊರೆಯಲು ಕ್ಯೂರಿಯಾಸಿಟಿ ಅಣಿ

Last Updated 21 ಮೇ 2018, 19:27 IST
ಅಕ್ಷರ ಗಾತ್ರ

ವಾಷಿಂಗ್ಟನ್‌ : ಮಂಗಳನ ಅಂಗಳದಲ್ಲಿರುವ ಕ್ಯೂರಿಯಾಸಿಟಿ ರೋವರ್ ಬಂಡೆಗಳನ್ನು ಕೊರೆಯುವ ಕಾರ್ಯ ಆರಂಭಿಸಲಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 'ನಾಸಾ' ತಿಳಿಸಿದೆ.

ತಾಂತ್ರಿಕ ದೋಷದಿಂದ ರೋವರ್‌ನಲ್ಲಿರುವ ಕೊರೆಯುವ ಯಂತ್ರ 2016ರಲ್ಲಿ ನಿಷ್ಕ್ರಿಯಗೊಂಡಿತ್ತು. ಒಂದು ವರ್ಷದ ಸತತ ಪ್ರಯತ್ನದ ನಂತರ ಸಂಸ್ಥೆಯ ಎಂಜಿನಿಯರ್‌ಗಳು ಈ ದೋಷವನ್ನು ಸರಿಪಡಿಸಿದ್ದಾರೆ. ‘ಫೀಡ್‌ ಎಕ್ಸ್‌ಟೆಂಡೆಡ್‌ ಡ್ರಿಲ್ಲಿಂಗ್‌‘ (ಎಫ್‌ಇಡಿ) ಎಂದು ಕರೆಯಲಾಗುವ ತಾಂತ್ರಿಕತೆ ಬಳಸಿ ರೋವರ್‌ ಈ ಕಾರ್ಯ ಮಾಡಲಿದೆ ಎಂದು ನಾಸಾ ಹೇಳಿದೆ. ಕಳೆದ ಮಾರ್ಚ್‌ 23ಕ್ಕೆ ಎರಡು ಸಾವಿರ ದಿನಗಳನ್ನು ಕ್ಯೂರಿಯಾಸಿಟಿ ರೋವರ್‌ ಪೂರೈಸಿತ್ತು. ಮಂಗಳ ಗ್ರಹದಲ್ಲಿ ಒಂದು ಸೌರದಿನವೆಂದರೆ 24 ಗಂಟೆ 39 ನಿಮಿಷ ಮತ್ತು 35 ಸೆಕಂಡ್‌ಗಳು. ಮಂಗಳ ಗ್ರಹದಲ್ಲಿನ 2,000 ದಿನಗಳು ಭೂಮಿಯ ಮೇಲಿನ 2,055 ದಿನಗಳಿಗೆ ಸಮವಾಗಿವೆ. ಆರು ಚಕ್ರಗಳನ್ನು ಹೊಂದಿರುವ ಈ ರೋವರ್‌, 2012ರಿಂದ ಮಂಗಳ ಗ್ರಹದ ಮೇಲೆ ಅನ್ವೇಷಣೆ ನಡೆಸುತ್ತಿದೆ.

‘ಕ್ಯೂರಿಯಾಸಿಟಿ ರೋವರ್‌ನ ಈಗಿನ ಕಾರ್ಯ ಮಹತ್ವದ್ದಾಗಿದೆ’ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT