ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶ್ವಿನಿ ಕ್ರೀಡಾ ಅಕಾಡೆಮಿಯಲ್ಲಿ ಆಯ್ಕೆ ಟ್ರಯಲ್ಸ್ 13ರಂದು

Last Updated 5 ಮಾರ್ಚ್ 2021, 3:53 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಅಂತರರಾಷ್ಟ್ರೀಯ ಅಥ್ಲೀಟ್ ಅಶ್ವಿನಿ ನಾಚಪ್ಪ ಅವರ ಅಶ್ವಿನಿ ಸ್ಪೋರ್ಟ್ಸ್‌ ಫೌಂಡೇಷನ್ ಇದೇ ಮೊದಲ ಬಾರಿಗೆ ಸಾಯ್ ಸಹಯೋಗದಲ್ಲಿ ತರಬೇತಿ ನೀಡಲು 13 ರಿಂದ 18 ವರ್ಷದೊಳಗಿನವರ ಅಥ್ಲೆಟಿಕ್ಸ್ ಹಾಕಿ ಆಟಗಾರರಿಗೆ ಆಯ್ಕೆ ಟ್ರಯಲ್ಸ್ ಆಯೋಜಿಸಿದೆ.

ಮಾರ್ಚ್‌ 13ರಂದು ದಕ್ಷಿಣ ಕೊಡಗಿನ ಗೋಣಿಕೊಪ್ಪಲು, ಕೈಕೆರಿಯಲ್ಲಿರುವ ಸಾಯ್–ಎಎಸ್‌ಎಫ್ ಅಥ್ಲೆಟಿಕ್ ಅರೆನಾದಲ್ಲಿ ಟ್ರಯಲ್ಸ್ ನಡೆಯಲಿದೆ.

ಅಥ್ಲೆಟಿಕ್ಸ್‌ನಲ್ಲಿ ವೇಗದ ಮತ್ತು ಮಧ್ಯಮ ಅಂತರದ ಓಟಗಾರರನ್ನು ಆಯ್ಕೆ ಮಾಡಲಾಗುವುದು. ಅವರ ಕೌಶಲಗಳನ್ನು ಪರೀಕ್ಷಿಸಿ ಆಯ್ಕೆ ಮಾಡಲಾಗುವುದು. ಹಾಕಿ ಕ್ರೀಡೆಯಲ್ಲಿ ಆಟದ ಕೌಶಲಗಳು, ಮೋಟರ್ ಸ್ಕಿಲ್ಸ್‌ ಮತ್ತು ವೇಗದ ಪರೀಕ್ಷೆ ನಡೆಯಲಿದೆ

ಆಯ್ಕೆಯಾದ ಕ್ರೀಡಾಪಟುಗಳಿಗೆ ಎರಡು ವರ್ಷ ಅವಧಿಯ ಭಾಗಶಃ ಅಥವಾ ಪೂರ್ಣಾವಧಿಯ ಶಿಷ್ಯವೇತನ ನೀಡಲಾಗುವುದು. ಅದರಲ್ಲಿ ಶಾಲೆ, ಕಾಲೇಜು ಶುಲ್ಕವೂ ಇರಲಿದೆ.

ಮಾಹಿತಿಗಾಗಿ ಮತ್ತು ಆನ್‌ಲೈನ್ ಮೂಲಕ ನೋಂದಾಯಿಸಿಕೊಳ್ಳಲು ಈ ಲಿಂಕ್ https://docs.google.com/forms/d/1aKsKeGCIHtCD-Bjb7O8ggRUOGS0U ಬಳಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT