ಶುಕ್ರವಾರ, ನವೆಂಬರ್ 22, 2019
21 °C

ಏಷ್ಯಾ ಕಪ್‌ ಸ್ಲೈಕ್ಲಿಂಗ್‌ ಸ್ಪರ್ಧೆ: ಭಾರತಕ್ಕೆ 12 ಪದಕ

Published:
Updated:

ನವದೆಹಲಿ: ಭಾರತದ ಸೈಕ್ಲಿಸ್ಟ್‌ಗಳು ಜೂನಿಯರ್‌ ಟ್ರ್ಯಾಕ್‌ ಏಷ್ಯಾ ಕಪ್‌ ಸ್ಲೈಕ್ಲಿಂಗ್‌ ಸ್ಪರ್ಧೆಯಲ್ಲಿ ಸೋಮವಾರ ನಾಲ್ಕು ಚಿನ್ನ ಸೇರಿದಂತೆ 12 ಪದಕಗಳನ್ನು ಗೆದ್ದುಕೊಂಡರು.

ಪುರುಷರ ಜೂನಿಯರ್‌ ಟೀಮ್‌ ಸ್ಪ್ರಿಂಟ್‌, ಮಹಿಳಾ ಜೂನಿಯರ್‌ ಮತ್ತು ಎಲೈಟ್‌ ತಂಡಗಳೂ ಅಮೋಘ ಪ್ರದರ್ಶನದೊಡನೆ ಚಿನ್ನದ ಪದಕಗಳನ್ನು ಗೆದ್ದುಕೊಂಡವು.

ವಿಶ್ವ ಜೂನಿಯರ್‌ ಚಾಂಪಿಯನ್‌ ರೊನಾಲ್ಡೊ ಲೈತೋನ್‌ ಜಮ್‌ ಒಂದೇ ದಿನ ಎರಡು ಚಿನ್ನದ ಪದಕಗಳನ್ನು ಕೊರಳಿಗೆ ಹಾಕಿಕೊಂಡರು. ಸ್ಪ್ರಿಂಟ್‌ ಜೂನಿಯರ್‌ ವಿಭಾಗದಲ್ಲಿ ತಂಡ ಚಿನ್ನ ಗೆಲ್ಲಲು ನೆರವಾದ ಅವರು ಟ್ರ್ಯಾಕ್‌ಗೆ ಮರಳಿ 1 ಕಿ.ಮೀ. ಟೈಮ್‌ ಟ್ರಯಲ್‌ ಸ್ಪರ್ಧೆಯಲ್ಲೂ ಮೊದಲಿಗರಾದರು.

ತ್ರಿಯಾಶಾ ಪಾಲ್‌ ಮೊದಲ ದಿನ ಎರಡು ಚಿನ್ನ ಗೆದ್ದುಕೊಂಡಿದ್ದರು. ಜೂನಿಯರ್ ಮಹಿಳೆಯರ ಸ್ಪ್ರಿಂಟ್‌ ವಿಭಾಗದಲ್ಲಿ  ನಿಕಿತಾ ನಿಶಾ ಜೊತೆಗೂಡಿ ಮೊದಲ ಸ್ಥಾನ ಪಡೆದಿದ್ದರು. 500 ಮೀ. ಟೈಮ್‌ ಟ್ರಯಲ್‌ ಅನ್ನೂ ತ್ರಿಯಾಶಾ ಮೊದಲ ಸ್ಥಾನದಲ್ಲಿ ಮುಗಿಸಿ ದರೆ, ನಿಶಾ ಎರಡನೇ ಸ್ಥಾನ ಪಡೆದರು.

ಪ್ರತಿಕ್ರಿಯಿಸಿ (+)