ಶುಭಾರಂಭದ ನಿರೀಕ್ಷೆಯಲ್ಲಿ ರಾಣಿ ಪಡೆ

7

ಶುಭಾರಂಭದ ನಿರೀಕ್ಷೆಯಲ್ಲಿ ರಾಣಿ ಪಡೆ

Published:
Updated:

ಜಕಾರ್ತ: ಭಾರತ ಮಹಿಳಾ ಹಾಕಿ ತಂಡದವರು ಏಷ್ಯನ್‌ ಕ್ರೀಡಾಕೂಟದಲ್ಲಿ ಗೆಲುವಿನ ಮುನ್ನುಡಿ ಬರೆಯಲು ಕಾತರರಾಗಿದ್ದಾರೆ.

ಭಾನುವಾರ ನಡೆಯುವ ‘ಬಿ’ ಗುಂಪಿನ ತನ್ನ ಮೊದಲ ಹೋರಾಟದಲ್ಲಿ ರಾಣಿ ರಾಂಪಾಲ್‌ ಬಳಗ ಆತಿಥೇಯ ಇಂಡೊನೇಷ್ಯಾ ಸವಾಲು ಎದುರಿಸಲಿದೆ.

1982ರ ಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದ ಭಾರತ ತಂಡ 1998ರಲ್ಲಿ ಬ್ಯಾಂಕಾಕ್‌ನಲ್ಲಿ ಆಯೋಜನೆಯಾಗಿದ್ದ ಕೂಟದಲ್ಲಿ ಬೆಳ್ಳಿ ಪದಕದ ಸಾಧನೆ ಮಾಡಿತ್ತು.

ಈ ಬಾರಿ ರಾಣಿ ಪಡೆ ಚಿನ್ನದ ಪದಕ ಗೆಲ್ಲುವ ವಿಶ್ವಾಸದಲ್ಲಿದೆ. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಒಂಬತ್ತನೆ ಸ್ಥಾನದಲ್ಲಿರುವ ತಂಡ 64ನೇ ಸ್ಥಾನ ಹೊಂದಿರುವ ಇಂಡೊನೇಷ್ಯಾವನ್ನು ಸುಲಭವಾಗಿ ಮಣಿಸುವ ಹುಮ್ಮಸ್ಸಿನಲ್ಲಿದೆ.

ಇತ್ತೀಚೆಗೆ ನಡೆದಿದ್ದ ವಿಶ್ವಕಪ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದ ರಾಣಿ ಪಡೆ, ಐರ್ಲೆಂಡ್‌ ಎದುರು ಆಘಾತ ಕಂಡಿತ್ತು.

ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಏಷ್ಯನ್‌ ಕೂಟ ವೇದಿಕೆಯಾಗಿರುವ ಕಾರಣ ಭಾರತ ತಂಡ ಗುಂಪು ಹಂತದ ಎಲ್ಲಾ ಪಂದ್ಯಗಳಲ್ಲೂ ಪರಿಣಾಮಕಾರಿ ಸಾಮರ್ಥ್ಯ ತೋರುವುದು ಅನಿವಾರ್ಯವೆನಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !