ಟೇಬಲ್‌ ಟೆನಿಸ್‌: ಭಾರತ ತಂಡಕ್ಕೆ ಕಂಚು

7
ಸೆಮಿಫೈನಲ್‌ನಲ್ಲಿ ಸೋಲು

ಟೇಬಲ್‌ ಟೆನಿಸ್‌: ಭಾರತ ತಂಡಕ್ಕೆ ಕಂಚು

Published:
Updated:
Deccan Herald

ಜಕಾರ್ತ: ಭಾರತದ ಪುರುಷರ ಟೇಬಲ್‌ ಟೆನಿಸ್‌ ತಂಡದವರು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಏಷ್ಯನ್‌ ಕ್ರೀಡಾಕೂಟದ ಟೇಬಲ್‌ ಟೆನಿಸ್‌ನಲ್ಲಿ ಭಾರತಕ್ಕೆ ಲಭಿಸಿದ ಮೊದಲ ಪದಕ ಇದಾಗಿದೆ.

ಮಂಗಳವಾರ ನಡೆದ ಪುರುಷರ ತಂಡ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಜ್ಞಾನಶೇಖರನ್‌ ಸತ್ಯನ್‌, ಅಚಂತಾ ಶರತ್‌ ಕಮಲ್‌ ಹಾಗೂ ಎ. ಅಮಲ್‌ರಾಜ್‌ ಅವರಿದ್ದ ಭಾರತ ತಂಡವು 0–3ರಿಂದ ದಕ್ಷಿಣ ಕೊರಿಯಾ ತಂಡದ ಎದುರು ಮಣಿಯಿತು. 

ಮೊದಲ ಪಂದ್ಯದಲ್ಲಿ ಸತ್ಯನ್‌, 11–9, 9–11, 3–11, 3–11ರಿಂದ ಲೀ ಸಂಗ್ಸು ಅವರ ಎದುರು ಸೋತರು. ಇದರೊಂದಿಗೆ ಕೊರಿಯಾ 1–0ಯ ಮುನ್ನಡೆ ಗಳಿಸಿತು. 

ಎರಡನೇ ಪಂದ್ಯದಲ್ಲಿ ಯುಂಗ್‌ ಸಿಕ್‌ ಯುಂಗ್‌, 11–9, 11–9, 6–11, 7–11, 11–8ರಿಂದ ಭಾರತದ ಅನುಭವಿ ಆಟಗಾರ ಅಚಂತಾ ಶರತ್‌ ಕಮಲ್‌ ಅವರನ್ನು ಮಣಿಸಿ ತಂಡದ ಮುನ್ನಡೆಯನ್ನು ಹೆಚ್ಚಿಸಿದರು. 

ಮೂರನೇ ಪಂದ್ಯದಲ್ಲಿ ಅಮಲ್‌ರಾಜ್‌, 5–11, 7–11, 11–4, 7–11ರಿಂದ ವೂಜಿನ್‌ ಜಾಂಗ್‌ ಎದುರು ಸೋತರು. 

ಮೂರು ಪಂದ್ಯಗಳಲ್ಲಿ ಭಾರತದ ಆಟಗಾರರು ಎದುರಾಳಿಯ ತಂತ್ರಗಳಿಗೆ ಪ್ರತ್ಯುತ್ತರ ನೀಡಲು ವಿಫಲರಾದರು. ಉತ್ತಮ ಸ್ಮ್ಯಾಷ್‌ ಹಾಗೂ ಆಕ್ರಮಣಕಾರಿ ಸರ್ವ್‌ಗಳಿಂದ ದಕ್ಷಿಣ ಕೊರಿಯಾದ ಆಟಗಾರರು ಎದುರಾಳಿ ತಂಡದವರನ್ನು ಕಟ್ಟಿಹಾಕಿದರು. 

ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಭಾರತ ತಂಡವು 3–1ರಿಂದ ಜಪಾನ್‌ ತಂಡವು ಸೋಲಿಸಿತ್ತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !