ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್‌ ವಯೋವರ್ಗ ಈಜು ಚಾಂಪಿಯನ್‌ಷಿಪ್‌: ರಮಾನಂದ–ಸಿದ್ಧಾರ್ಥ್‌ಗೆ ಚಿನ್ನ

ಪಲಕ್‌ ಶರ್ಮಾಗೆ ಬೆಳ್ಳಿ
Last Updated 1 ಅಕ್ಟೋಬರ್ 2019, 20:09 IST
ಅಕ್ಷರ ಗಾತ್ರ

ಬೆಂಗಳೂರು: ಅಮೋಘ ಫಾರ್ಮ್‌ ಮುಂದುವರಿಸಿದ ರಮಾನಂದ ಶರ್ಮಾ ಅವರು ಸಿದ್ಧಾರ್ಥ್‌ ಪರ್ದೇಶಿ ಜೊತೆಯಾಗಿ ಮತ್ತೊಂದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಮುಕ್ತ ವಿಭಾಗದ 3 ಮೀಟರ್‌ ಸಿಂಕ್ರೋನೈಸ್ಡ್‌ ಡೈವಿಂಗ್‌ ಸ್ಪರ್ಧೆಯಲ್ಲಿ ಈ ಜೋಡಿ ಮೊದಲ ಸ್ಥಾನ ಪಡೆಯಿತು.

ಮಂಗಳವಾರ ಹಲಸೂರಿನ ಕೆನ್ಸಿಂಗ್ಟನ್‌ ಈಜುಕೊಳದಲ್ಲಿ ನಡೆದ ಏಷ್ಯನ್‌ ವಯೋವರ್ಗ ಈಜು ಚಾಂಪಿಯನ್‌ಷಿಪ್‌ನಲ್ಲಿ ಈ ಜೋಡಿ ಮೋಡಿ ಮಾಡಿತು.

ರಮಾನಂದ ಶರ್ಮಾ–ಸಿದ್ಧಾರ್ಥ್‌ ದೇಸಾಯಿ ಜೋಡಿ 309.42 ಪಾಯಿಂಟ್ಸ್ ಗಳಿಸಿತು. ಇರಾನ್‌ನ ಅಲಿ ಶಾಕುಲ್‌–ಮೊಜತಬಾ ವಲಿಪುರ್‌ (272.52 ಪಾಯಿಂಟ್ಸ್) ಬೆಳ್ಳಿ ಹಾಗೂ ಕತಾರ್‌ನ ಅಬ್ದುಲ್‌ ಅಜೀಜ್‌ ಖಾಲಿದ್‌ ಬಲಗೇತ್‌– ಶೆವೈತರ್‌ ಮೊಹಮ್ಮದ್‌ ಅಹಮ್ಮದ್‌ (210.96) ಕಂಚು ತಮ್ಮದಾಗಿಸಿಕೊಂಡರು.

3 ಮೀ. ಸ್ಪ್ರಿಂಗ್‌ ಬೋರ್ಡ್‌ ವಿಭಾಗದಲ್ಲಿ ಪಲಕ್‌ ಶರ್ಮಾ ಬೆಳ್ಳಿ ತಮ್ಮದಾಗಿಸಿಕೊಂಡರು. 200.65 ಪಾಯಿಂಟ್ಸ್‌ ಗಳಿಸಿದ ಪಲಕ್‌ ಬೆಳ್ಳಿ ನಗೆ ಮೂಡಿಸಿದರು. ಇಂಡೊನೇಷ್ಯಾದ ಸುದಿ ರ್ಮನ್‌ ನೂರ್‌ ನುಫಿಧಾ (206.10) ಅವರಿಗೆ ಚಿನ್ನ ಒಲಿದರೆ, ಹಾಂಗ್‌ ಕಾಂಗ್‌ನ ವೈ ಕಿ ಚಾನ್‌ (163.65 ಪಾಯಿಂಟ್ಸ್) ಕಂಚು ಗೆದ್ದರು.

ಚಾಂಪಿಯನ್‌ಷಿಪ್‌ನಲ್ಲಿಭಾರತ ಒಟ್ಟು 62 (18 ಚಿನ್ನ, 24 ಬೆಳ್ಳಿ ಹಾಗೂ 20 ಕಂಚು) ಪದಕಗಳನ್ನು ತನ್ನದಾಗಿಸಿಕೊಂಡಿತು.

ಫಲಿತಾಂಶಗಳು: ಡೈವಿಂಗ್‌: 3 ಮೀ. ಸ್ಪ್ರಿಂಗ್‌ ಬೋರ್ಡ್‌: ಬಾಲಕರುಗುಂಪು3: ಸುಗಿಮೊಟೊ ರುವಾನ್‌ (320 ಪಾಯಿಂಟ್ಸ್, ಜಪಾನ್‌)–1, ಜಮ್ಸಿದಿ ಮೊಹಮ್ಮದ್‌ (258.60 ಪಾಯಿಂಟ್ಸ್, ಇರಾನ್‌)–2, ಕಿರಿಲ್‌ ನೊವಿಕೊವ್‌ (252.15 ಪಾಯಿಂಟ್ಸ್ ಕಜಕಸ್ತಾನ)–3. 3 ಮೀ.ಸ್ಪ್ರಿಂಗ್‌ ಬೋರ್ಡ್‌: ಬಾಲಕಿಯರು ಗುಂಪು 3: ಸುದಿರ್ಮನ್‌ ನೂರ್‌ ನುಫಿಧಾ (206.10 ಇಂಡೊನೇಷ್ಯಾ)–1, ಪಲಕ್‌ ಶರ್ಮಾ (200.65 ಪಾಯಿಂಟ್ಸ್, ಭಾರತ)–2, ವೈ ಕಿ ಚಾನ್‌ (163.65, ಹಾಂಗ್‌ಕಾಂಗ್‌)–3.

3 ಮೀಟರ್‌ ಸ್ಪ‍್ರಿಂಗ್ ಬೋರ್ಡ್ ಸಿಂಕ್ರೊನೈಸ್ಡ್‌ (ಪುರುಷರು ಮುಕ್ತ ವಿಭಾಗ): ಸಿದ್ಧಾರ್ಥ್‌ ಪರ್ದೇಶಿ– ರಮಾನಂದ ಶರ್ಮಾ (309. 42, ಭಾರತ)–1, ಅಲಿ ಶಾಕುಲ್‌–ಮೊಜತಬಾ ವಲಿಪುರ್‌ (272.52 ಪಾಯಿಂಟ್ಸ್, ಇರಾನ್‌)–2,ಅಬ್ದುಲ್‌ ಅಜೀಜ್‌ ಖಾಲಿದ್‌ ಬಲಗೇತ್‌– ಶೆವೈತರ್‌ ಮೊಹಮ್ಮದ್‌ ಅಹಮ್ಮದ್‌ (210.96, ಕತಾರ್‌)–3.

ಸೋಲೊ ವಿಭಾಗದಲ್ಲಿ ಕಜಕಸ್ತಾನದ ಪ್ರಾಬಲ್ಯ

ಕಜಕಸ್ತಾನದ ಈಜುಪಟುಗಳು ಕಲಾತ್ಮಕ ಈಜು ವಿಭಾಗದ ಸೋಲೊ ಸ್ಪರ್ಧೆಗಳಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. ಎರಡು ಚಿನ್ನ, ಒಂದು ಬೆಳ್ಳಿ ಕಂಚು ಗೆದ್ದು ಸಂಭ್ರಮಿಸಿದರು.

ಫಲಿತಾಂಶಗಳು: ಮಹಿಳೆಯರ ಸೋಲೊ ಗುಂಪು ‘ಎ’ (ಮುಕ್ತ ವಿಭಾಗ): ಅಮಿ ವಾಡಾ (ಜಪಾನ್‌, 86.16 ಪಾಯಿಂಟ್ಸ್)–1, ಜಾಂಗ್‌ ಹೈಯಾ (ಚೀನಾ, 85.26 ಪಾಯಿಂಟ್ಸ್)–2, ಜಿಯಾಂಗ್‌ಜಿ ಜನಿಯಾ (ಕಜಕಸ್ತಾನ, 81.06 ಪಾಯಿಂಟ್ಸ್)–3. ಮಹಿಳೆಯರಸೋಲೊ ಗುಂಪು ‘ಬಿ’: ಮ್ಯಾಸ್ನಿಕೊವಾ ಅರಿನಾ (ಕಜಕಸ್ತಾನ, 154.30 ಪಾಯಿಂಟ್ಸ್)–1, ತೋಷ್ಕುಜೆವಾ ಜಿಯೊಡಾಕನ್‌ (ಉಜ್ಬೇಕಿಸ್ತಾನ, 145.41 ಪಾಯಿಂಟ್ಸ್)–2, ತಾಯ್‌ ಸಾಂಡ್ರಾ ಸೆನ್‌ ಲಿ (ಸಿಂಗಪುರ, 133.58 ಪಾಯಿಂಟ್ಸ್).ಬಾಲಕಿಯರ ಸೋಲೊ ಗುಂಪು ‘ಸಿ’: ಸ್ನೆಗಿರ್ಯೊವಾ ವಾರ್ವರಾ (ಕಜಕಸ್ತಾನ, 132.25 ಪಾಯಿಂಟ್ಸ್)–1, ಮರ್ಜ್‌ಲಿಕೊವಾ ಪೊಲಿನಾ (ಕಜಕಸ್ತಾನ, 132.20 ಪಾಯಿಂಟ್ಸ್)–2, ಸುಯ್‌ ಮಿಂಗ್‌ ಯು (ಹಾಂಗ್‌ಕಾಂಗ್‌ 126.74)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT