ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16ರ ಘಟ್ಟಕ್ಕೆ ದೀಪಕ್‌, ರೋಹಿತ್‌

Last Updated 19 ಏಪ್ರಿಲ್ 2019, 19:10 IST
ಅಕ್ಷರ ಗಾತ್ರ

ಬ್ಯಾಂಕಾಕ್: ಭಾರತದ ಬಾಕ್ಸರ್‌ಗಳಾದ ದೀಪಕ್ ಮತ್ತು ರೋಹಿತ್‌ ಟೋಕಸ್‌ ಅವರು ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ 16ರ ಘಟ್ಟಕ್ಕೆ ಶುಕ್ರವಾರ ಪ್ರವೇಶಿಸಿದರು.

49 ಕೆ.ಜಿ ವಿಭಾಗದಲ್ಲಿ ದೀಪಕ್‌ ಅವರು ವಿಯೆಟ್ನಾಂನ ಲೂಯಿ ಬೂಯಿ ಕಾಂಗ್‌ ಧನ್ನ ವಿರುದ್ಧ ಗೆದ್ದರೆ, 64 ಕೆ.ಜಿ ವಿಭಾಗದಲ್ಲಿ ರೋಹಿತ್‌ ಟೋಕಸ್‌ ಅವರು ತೈವಾನ್‌ನ ಚೌ ಎನ್‌ ಲಾಯ್ ವಿರುದ್ದ ಜಯ ಗಳಿಸಿದರು.

ದೀಪಕ್ ಅವರು ಪ್ರಭಾವಶಾಲಿ ಪಂಚ್‌ಗಳಿಂದ ಎದುರಾಳಿ ವಿರುದ್ಧ ಮೇಲುಗೈ ಸಾಧಿಸಿದರು. ಬೂಯಿ ಕಾಂಗ್‌ ದನ್ನ ಅವರು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಬೇಕಾಯಿತು.

ಇನ್ನೊಂದು ಪಂದ್ಯದಲ್ಲಿ ರೋಹಿತ್‌ ಅವರು ಚೌ ಎನ್ ಲಾಯ್ ಅವರನ್ನು ನೇರ ಹಿಟ್‌ ಮತ್ತು ಪಂಚ್‌ಗಳಿಂದ ಕಟ್ಟಿಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT