ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್: ಸೆಮಿಗೆ ಶಿವ ಥಾಪ, ಸರಿತಾ

Last Updated 23 ಏಪ್ರಿಲ್ 2019, 19:08 IST
ಅಕ್ಷರ ಗಾತ್ರ

ಬ್ಯಾಂಕಾಕ್: ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪಾರಮ್ಯ ಮುಂದುವರಿದಿದೆ.

ಮಂಗಳವಾರ ನಡೆದ ಪಂದ್ಯ ಗಳಲ್ಲಿಶಿವ ಥಾಪ, ಸರಿತಾ ದೇವಿ ಮತ್ತು ನಿಖಾತ್‌ ಜರೀನ್‌ ಸೆಮಿಫೈನಲ್‌ ಪ್ರವೇಶಿಸುವುದರ ಮೂಲಕ ಭಾರತಕ್ಕೆ ಪದಕಗಳನ್ನು ಖಚಿತ ಪಡಿಸಿದ್ದಾರೆ.

60 ಕೆ.ಜಿ ವಿಭಾಗದ ಪಂದ್ಯದಲ್ಲಿ ಶಿವ ಥಾಪ ಅವರು ಥಾಯ್ಲೆಂಡ್‌ನ ರುಜಕ್ರಾನ್ ಜುಂತ್ರಾಂಗ್ ವಿರುದ್ಧ 5–0ರಿಂದ ಗೆದ್ದರು. ವೇಗ ಮತ್ತು ಆಕ್ರಮಣಕಾರಿ ಪಂಚ್‌ಗಳಿಂದ ಎದುರಾಳಿಯನ್ನು ಕಂಗೆ ಡಿಸಿದರು. 75 ಕೆ.ಜಿ ವಿಭಾಗದಲ್ಲಿ ಆಶೀಶ್‌ ಕುಮಾರ್‌ ಕಿರ್ಗಿಸ್ತಾನದ ಓಮರ್ಬೆಕ್ ಉಲು ಬೆಗಿಟ್ ವಿರುದ್ಧ ಜಯ ಸಾಧಿಸಿದರು.

ಸರಿತಾ ದೇವಿ ಅವರು ಮಹಿಳೆಯ 60 ಕೆ.ಜಿ ವಿಭಾಗದಲ್ಲಿ ಕಜಕಸ್ತಾನದ ರಿಮ್ಮಾ ವೊಲೊಸ್ಸೆಂಕೊ ಅವರನ್ನು ವಿರುದ್ಧ ಗೆದ್ದರೆ, ನಿಖಾತ್‌ ಜರೀನ್‌ ಅವರು 51 ಕೆ.ಜಿ ವಿಭಾಗದಲ್ಲಿ ಕಜಕಸ್ತಾನದ ನಾಜಿಮ್‌ ಕಿಜಾಯ್‌ಬಾಯ್‌ ಅವರನ್ನು ಸೋಲಿಸಿದರು.

ನಮನ್‌ಗೆ ನಿರಾಸೆ: 91 ಕೆ.ಜಿ ವಿಭಾಗದಲ್ಲಿ ನಮನ್‌ ತನ್ವರ್‌ ಅವರು ನಿರಾಸೆ ಅನುಭವಿಸಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT