ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಚಿನ್ನದ ಭರವಸೆ

ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಫೈನಲ್‌ಗೆ ಬಿಷ್ಟ್, ಆಶೀಶ್, ದೀಪಕ್, ಅಮಿತ್‌
Last Updated 25 ಏಪ್ರಿಲ್ 2019, 19:34 IST
ಅಕ್ಷರ ಗಾತ್ರ

ಬ್ಯಾಂಕಾಕ್ (ಪಿಟಿಐ): ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪಾರಮ್ಯ ಮುಂದುವರೆದಿದ್ದು, ಅಂತಿಮ ಘಟ್ಟಕ್ಕೆ ಆರು ಬಾಕ್ಸರ್‌ಗಳು ಪ್ರವೇಶ ಪಡೆದಿದ್ದಾರೆ.

ಗುರುವಾರ ನಡೆದ ಸೆಮಿಫೈನಲ್‌ ಪಂದ್ಯಗಳಲ್ಲಿ ಕವಿಂದರ್‌ ಸಿಂಗ್‌ ಬಿಷ್ಟ್, ದೀಪಕ್‌ ಸಿಂಗ್, ಆಶೀಶ್‌ ಕುಮಾರ್, ಅಮಿತ್‌ ಪಂಗಲ್, ಸಿಮ್ರನ್‌ಜಿತ್‌ ಕೌರ್‌ ಮತ್ತು ಪೂಜಾ ರಾಣಿ ಜಯ ಸಾಧಿಸಿದ್ದು,ಭಾರತಕ್ಕೆ ಚಿನ್ನದ ಪದಕ ತಂದುಕೊಡುವ ಭರವಸೆ ಮೂಡಿಸಿದ್ದಾರೆ.

ಪುರುಷರ 56 ಕೆ.ಜಿ ವಿಭಾಗದಲ್ಲಿ ಕವಿಂದರ್‌ ಸಿಂಗ್‌ ಬಿಷ್ಟ್ ಮಂಗೋಲಿಯಾದ ಎಂಕ್‌ ಅಮರ್ ಕಾಖೂ ಅವರನ್ನು ತಮ್ಮ ಆಕ್ರಮಣಕಾರಿ ಆಟದಿಂದ ಸೋಲಿಸಿದರು. ಬಿಷ್ಟ್ ಅವರ ವೇಗದ ಪಂಚ್‌ಗಳಿಗೆ ಎದುರಾಳಿ ನಿರುತ್ತರರಾದರು. ಪೈಪೋಟಿಯುತ ಆಟಕ್ಕೆ ಇಬ್ಬರ ಕಣ್ಣಿಗೂ ಬಲವಾದ ಪೆಟ್ಟುಗಳು ಬಿದ್ದವು. ಕೊನೆಯ ಮೂರು ನಿಮಿಷಗಳಲ್ಲಿ ಬಿಷ್ಟ್ 3–2ರಿಂದ ಪಂದ್ಯವನ್ನು ಗೆದ್ದರು.49 ಕೆ.ಜಿ ವಿಭಾಗದಲ್ಲಿ ದೀಪಕ್‌ ಸಿಂಗ್,ಕಜಕಸ್ತಾನದ ತೆಮಿರ್‌ತಸ್ ಜುಸುಪೊವ್‌ ಗಾಯಗೊಂಡಿದ್ದರಿಂದಫೈನಲ್‌ಗೆ ನೇರವಾಗಿ ಲಗ್ಗೆ ಇಟ್ಟರು.

ಅಮಿತ್‌ ಪಂಗಲ್‌ 52 ಕೆ.ಜಿ ವಿಭಾಗದಲ್ಲಿ ಚೀನಾದ ಜಿಯಾಂಗು ಅವರನ್ನು ಮಣಿಸಿದರೆ,ಆಶೀಶ್‌ ಕುಮಾರ್ 75 ಕೆ.ಜಿ ವಿಭಾಗದಲ್ಲಿ ಇರಾನ್‌ನ ಸೈಯದ್‌ಶಾಹಿ ಮೌಸಾವಿ ಅವರನ್ನು ಸೋಲಿಸಿದರು. ಆರಂಭದ ಹಂತದಲ್ಲಿ ಇರಾನ್‌ ಬಾಕ್ಸರ್ ಮೇಲುಗೈ ಸಾಧಿಸಿದ್ದರೂ ಎರಡು ಮತ್ತು ಮೂರನೇ ಸುತ್ತಿನಲ್ಲಿಛಲ ತೋರಿದ ಆಶೀಶ್ ಜಯದ ನಗೆ ಬೀರಿದರು.

ಮಹಿಳೆಯರ 75 ಕೆ.ಜಿ ವಿಭಾಗದಲ್ಲಿ ಪೂಜಾ ರಾಣಿ ಕಜಕಸ್ತಾನದ ಫಾರಿಜಾ ಶೋಲ್ತಾಯ್ ಅವರನ್ನು ಸೋಲಿಸಿದರೆ, ಸಿಮ್ರನ್‌ಜಿತ್ ಕೌರ್‌ ಉಜ್ಬೆಕಿಸ್ತಾನದ ಮಫ್ತುನಾಕೋ ಮೆಲೀಬಾ ಅವರನ್ನು 5–0ರಿಂದ ಮಣಿಸಿ ಫೈನಲ್‌ ಪ್ರವೇಶಿಸಿದರು.

‌ಥಾಪಗೆ ನಿರಾಸೆ:ಚಿನ್ನ ಗೆಲ್ಲುವ ಕನಸು ಹೊತ್ತಿದ್ದ ಶಿವ ಥಾಪ (60 ಕೆ.ಜಿ) ಕಜಕಸ್ತಾನದ ಜಾಕೀರ್‌ ಸಫಿಯುಲ್ಲೀನ್‌ ವಿರುದ್ಧ ಪರಾಭವಗೊಂಡರು. ಆಶೀಶ್‌ (69 ಕೆ.ಜಿ), ಸತೀಶ್‌ ಕುಮಾರ್ (91 ಕೆ.ಜಿ) ಅವರೂ ನಿರಾಸೆ ಪಡಬೇಕಾಯಿತು.

ಮಹಿಳೆಯರ ವಿಭಾಗದಲ್ಲಿಸರಿತಾ ದೇವಿ (60 ಕೆ.ಜಿ) ಮತ್ತು ಮನೀಷಾ (54 ಕೆ.ಜಿ) ಕ್ರಮವಾಗಿ ಚೀನಾದ ಯಾಂಗ್‌ ವೆನ್‌ಲೂ, ತೈವಾನ್‌ನ ಹುವಾಂಗ್‌ ಸಿಯಾವೊ ವೆನ್‌ ಅವರಿಗೆ ಮಣಿದರು.ನಿಖತ್‌ ಜರೀನ್‌ (51 ಕೆ.ಜಿ) ವಿಯೆಟ್ನಾಂನ ಎನ್ಗುಯೇ ತಿ ತಂ ಅವರಿಂದ ಪರಾಭವಗೊಂಡರೆ, ಸೋನಿಯಾ ಚಾಹಲ್‌ (57 ಕೆ.ಜಿ) ಥಾಯ್ಲೆಂಡ್‌ನ ನಿಲ್ವಾನ್ ಅವರಿಗೆ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT