ಚಿನ್ನಕ್ಕೆ ಗುರಿ ಇಡಲು ಶೂಟರ್‌ಗಳು ಸಜ್ಜು

7

ಚಿನ್ನಕ್ಕೆ ಗುರಿ ಇಡಲು ಶೂಟರ್‌ಗಳು ಸಜ್ಜು

Published:
Updated:
Deccan Herald

ಪಲೆಂಬಾಂಗ್‌: ಯುವ ಶೂಟರ್‌ಗಳಾದ ಅನೀಶ್‌ ಭಾನವಾಲಾ ಮತ್ತು ಮನು ಭಾಕರ್‌ ಅವರು ಏಷ್ಯನ್‌ ಕೂಟದ ಶೂಟಿಂಗ್‌ನಲ್ಲಿ ಚಿನ್ನಕ್ಕೆ ಗುರಿ ಇಡಲು ಸಜ್ಜಾಗಿದ್ದಾರೆ.

ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕೂಟದಲ್ಲಿ 15ರ ಹರೆಯದ ಅನೀಶ್‌ 25 ಮೀಟರ್ಸ್‌ ರ‍್ಯಾಪಿಡ್‌ ಫೈರ್‌ ಪಿಸ್ತೂಲ್‌ನಲ್ಲಿ ಚಿನ್ನದ ಪದಕ ಜಯಿಸಿ ಗಮನ ಸೆಳೆದಿದ್ದರು. 16 ವರ್ಷ ವಯಸ್ಸಿನ ಭಾಕರ್‌ 10 ಮೀಟರ್ಸ್‌ ಏರ್‌ ಪಿಸ್ತೂಲ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.

ಭಾಕರ್‌ ಅವರು ಅಭಿಷೇಕ್‌ ವರ್ಮಾ ಅವರೊಂದಿಗೆ ಮಿಶ್ರ ತಂಡ ವಿಭಾಗದಲ್ಲಿ (ಪಿಸ್ತೂಲ್‌) ಕಣಕ್ಕಿಳಿಯಲಿದ್ದಾರೆ.

ಹೀನಾ ಸಿಧು, ಸಂಜೀವನಿ ರಜಪೂತ್‌, ಅಪೂರ್ವಿ ಚಾಂಡೇಲಾ ಮತ್ತು ರವಿ ಕುಮಾರ್‌ ಅವರೂ ಮಿಂಚುವ ವಿಶ್ವಾಸದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !