ಬೃಹತ್ ವೇದಿಕೆಯಲ್ಲಿ ಕಾರ್ಯಕ್ರಮ ವೈವಿಧ್ಯ

7

ಬೃಹತ್ ವೇದಿಕೆಯಲ್ಲಿ ಕಾರ್ಯಕ್ರಮ ವೈವಿಧ್ಯ

Published:
Updated:
Deccan Herald

ಜಕಾರ್ತ: ಉದ್ಘಾಟನಾ ಸಮಾರಂಭದಲ್ಲಿ ಇಂಡೊನೇಷ್ಯಾದ ಕಲೆ, ಸಂಸ್ಕೃತಿ ಮತ್ತು ವೈವಿಧ್ಯಮಯ ಬದುಕು ಅನಾವರಣಗೊಳ್ಳಲಿದೆ. ಕ್ರೀಡಾಕೂಟದ ಪ್ರಮುಖ ಅಂಗಣವು ವೈಭವದ ಸಮಾರಂಭಕ್ಕೆ ವಿಶೇಷ ವೇದಿಕೆಯನ್ನು ವಿನ್ಯಾಸಗೊಳಿಸಲಾಗಿದೆ. 120 ಮೀಟರ್‌ ಉದ್ದ, 30 ಮೀಟರ್ ಅಗಲ ಮತ್ತು 26 ಮೀಟರ್‌ ಎತ್ತರದ ವೇದಿಕೆಯ ಹಿಂದೆ ಬೃಹತ್ ಶಿಖರದ ಮಾದರಿಯನ್ನು ನಿರ್ಮಿಸಲಾಗಿದೆ. ಇದರಲ್ಲಿ ಇಂಡೊನೇಷ್ಯಾದ ಸುಂದರ, ವಿಶಿಷ್ಟ ಗಿಡಗಳು ಮತ್ತು ಹೂಗಳು ರಾರಾಜಿಸಲಿವೆ.

ಬಂಡುಂಗ್‌ ಮತ್ತು ಜಕಾರ್ತದ ಕಲಾವಿದರು ಸಿದ್ಧಗೊಳಿಸಿರುವ ಈ ವೇದಿಕೆಯಲ್ಲಿ 4,000  ನೃತ್ಯಪಟುಗಳು ಪ್ರದರ್ಶನ ನೀಡಲಿದ್ದಾರೆ. ಇವರಿಗೆ ನೂರು ಕಲಾವಿದರು ಸಂಗೀತದ ಹಿನ್ನೆಲೆ ಒದಗಿಸಲಿದ್ದಾರೆ.

ಸ್ಥಳೀಯ ಗಾಯಕರಾದ ಅಂಗುನ್, ರೈಸಾ, ತಲುಸ್‌, ಎಡೊ ಕೊಂಡೊಲೊಜಿತ್‌, ಪುತ್ರಿ ಅಯೂನ್‌, ಫಾತಿನ್‌, ಕಮಸೀನ್ ಮತ್ತು ವಿಯಾ ವಲೆನ್‌ ಮುಂತಾದವರು ಪ್ರಮುಖ ಆಕರ್ಷಣೆಯಾಗಿದ್ದಾರೆ. ಭಾರತದ ನೀರಜ್ ಚೋಪ್ರಾ ತ್ರಿವರ್ಣಧ್ವಜದೊಂದಿಗೆ ಪಥಸಂಚಲದಲ್ಲಿ ಹೆಜ್ಜೆ ಹಾಕಲಿದ್ದಾರೆ.

ಉದ್ಘಾಟನಾ ಸಮಾರಂಭ
ಸ್ಥಳ: ಜೆಲೋರಾ ಬಂಗ್‌ ಕರ್ನೊ ಕ್ರೀಡಾಂಗಣ, ಜಕಾರ್ತ
ಆರಂಭ: ಸಂಜೆ 5.30ರಿಂದ (ಭಾರತೀಯ)
ನೇರ ಪ್ರಸಾರ: ಸೋನಿ ಟೆನ್‌1,2, ಸೋನಿ ಇಎಸ್‌ಪಿಎನ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !