ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ರೆಸಿಪಿಗಳ ಮಾಹಿತಿ

Last Updated 25 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಸಸ್ಯಾಹಾರ, ಮಾಂಸಾಹಾರ ಹಾಗೂ ಕೇಕ್‌ಗಳ ಮಾಹಿತಿ ‘ಕನ್ನಡ ರೆಸಿಪೀಸ್‌’ (kannada recipies) ಆ್ಯಪ್‌ನಲ್ಲಿ ಲಭ್ಯ. ಈ ಆ್ಯಪ್‌ನಲ್ಲಿರುವ ಅಡುಗೆ ವಿಧಗಳು ಎಲ್ಲವೂ ಸರಳವಾಗಿದ್ದು, ಮನೆಯಲ್ಲೇ ಸುಲಭವಾಗಿ ಸಿಗುವ ಸಾಮಗ್ರಿಗಳಿಂದ ತಯಾರಿಸಿಕೊಳ್ಳಬಹುದು.

ಈ ಆ್ಯಪ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ  ಉಚಿತವಾಗಿ ಡೌನ್ಲೋಡ್‌ ಮಾಡಿಕೊಳ್ಳಬಹುದು. ಈ ಆ್ಯಪ್‌ನಲ್ಲಿ ಸಸ್ಯಾಹಾರ, ಮಾಂಸಾಹಾರ, ಕೇಕ್‌ ಹಾಗೂ ಇತರ ಅಪ್ಲೀಕೇಷನ್‌ ಎಂಬ ಮೂರು ಆಯ್ಕೆಗಳು ತೆರೆದುಕೊಳ್ಳುತ್ತವೆ. ಸಸ್ಯಾಹಾರದಲ್ಲಿ ಆಲೂ ಬಟರ್‌ ಕೋಫ್ತಾ, ಅವರೆಕಾಳು ಸಾಂಬಾರು, ಬಟಾಣಿ ಪಲಾವ್‌ ಮೊದಲಾದ ಸರಳ ಅಡುಗೆಗಳ ಮಾಹಿತಿ ಸಿಕ್ಕರೆ, ಮಾಂಸಾಹಾರದಲ್ಲಿ ಮೊಟ್ಟೆ ಬೋಂಡಾ, ಚಿಕನ್‌ ಸಮೊಸ, ಮಟನ್‌ ಮಸಾಲಾ ಇಂತಹ ವಿಶೇಷ ಖಾದ್ಯಗಳ ಮಾಡುವ ವಿಧಾನಗಳನ್ನು ವಿವರಿಸಲಾಗಿದೆ. ಇದರಲ್ಲಿ ಮೂರಬನೇ ಆಯ್ಕೆ ಕೇಕ್‌. ಮನೆಯಲ್ಲೇ ಸುಲಭವಾಗಿ ತಯಾರು ಮಾಡುವಂತಹ ಮಾವು, ಎಗ್‌ಲೆಸ್‌, ಸ್ಟ್ರಾಬೆರಿ ಹೀಗೆ ನೂರಾರು ಕೇಕ್‌ ತಯಾರಿ ಮಾಹಿತಿ ಇಲ್ಲಿ ಸಿಗುತ್ತದೆ. ಇದರಲ್ಲಿ ಒಟ್ಟು 1000ಕ್ಕಿಂತ ಹೆಚ್ಚು ಖಾದ್ಯಗಳ ಮಾಹಿತಿ ಸಿಗುತ್ತದೆ

ಈ ಆ್ಯಪ್‌ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT