ಅಪ್ಪು ಖ್ಯಾತಿ; ಘೇಂಡಾಮೃಗದ ಶಕ್ತಿ

7

ಅಪ್ಪು ಖ್ಯಾತಿ; ಘೇಂಡಾಮೃಗದ ಶಕ್ತಿ

Published:
Updated:
Deccan Herald

ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್‌ ಕ್ರೀಡಾಕೂಟದ ಲಾಂಛನ ವೈವಿಧ್ಯಮಯ ಕಥೆ ಹೇಳುತ್ತದೆ. ಒಂದು ಹಕ್ಕಿ ಮತ್ತು ಎರಡು ಪ್ರಾಣಿಗಳನ್ನು ಬಳಸಿ ಸಿದ್ಧಗೊಳಿಸಿರುವ ಈ ಲಾಂಛನ ಭಿನ್‌ ಭಿನ್ ಕಾಕ ಅತುಂಗ್‌ ಎಂಬ ನಾಮದಲ್ಲಿ ‘ಹೆಸರು’ ಗಳಿಸಿದೆ.

ಸ್ವರ್ಗದ ಹಕ್ಕಿ ಎಂದು ಕರೆಯಲಾಗುವ ಭಿನ್ ಭಿನ್‌ ರಣತಂತ್ರವನ್ನು ಬಿಂಬಿಸುತ್ತದೆ. ಬವೀನ್‌ ದ್ವೀಪದ, ಅವಸಾನದ ಅಂಚಿನಲ್ಲಿರುವ ಜಿಂಕೆ ಅತುಂಗ್. ಇದು ವೇಗವನ್ನು ಪ್ರತಿಬಿಂಬಿಸುತ್ತದೆ. ಕಾಕ ಹೆಸರಿನ ಜಾವಾದ ಘೇಂಡಾಮೃಗವನ್ನು ಶಕ್ತಿಯ ಪ್ರತೀಕವಾಗಿ ಬಳಸಲಾಗುತ್ತದೆ.

ಈ ಮೂರು ಪ್ರಾಣಿಗಳು ಇಂಡೊನೇಷ್ಯಾದ ವೈವಿಧ್ಯತೆಯ ಕಥೆಯನ್ನೂ ಹೇಳುತ್ತವೆ. ಭಿನ್‌ ಭಿನ್‌ ಈ ದೇಶದ ಪೂರ್ವಭಾಗವನ್ನು ಪ್ರತಿನಿಧಿಸುತ್ತಿದ್ದರೆ ಪಶ್ಚಿಮ ಭಾಗವನ್ನು ಘೇಂಡಾಮೃಗ ಪ್ರತಿನಿಧಿಸುತ್ತದೆ. ಅತುಂಗ್‌ ಕೇಂದ್ರ ಭಾಗದ ಪ್ರತಿನಿಧಿಯಂತೆ ಇದೆ.

 ಲಾಂಛನ ಸಿದ್ಧಗೊಂಡ ಬಗೆ

ಈ ಬಾರಿಯ ಕ್ರೀಡಾಕೂಟದ ಅಧಿಕೃತ ಲಾಂಛನವನ್ನು ಸಿದ್ಧಗೊಳಿಸುವ ಜವಾಬ್ದಾರಿಯನ್ನು ಇಂಡೊನೇಷ್ಯಾದ ಆರ್ಥಿಕ ಮಂಡಳಿಗೆ ವಹಿಸಲಾಗಿತ್ತು. ಅವರು ನಡೆಸಿದ ಸ್ಪರ್ಧೆಗೆ 60 ಮಾದರಿಗಳು ಬಂದಿದ್ದವು. ಅವುಗಳ ಪೈಕಿ ಅಂತಿಮ ಸುತ್ತಿಗೆ ಮೂರನ್ನು ಬಳಸಲಾಗಿತ್ತು. ರಾಷ್ಟ್ರದ ಅಧ್ಯಕ್ಷ ಜೊಕೊ ವಿಡೊಡೊ ಅವರು ವಿಜೇತ ಮಾದರಿಯನ್ನು ಆರಿಸಿದ್ದರು.

ಸ್ವರ್ಗದ ಹಕ್ಕಿಯು ಇಂಡೊನೇಷ್ಯಾದ ಸಮರ ಕಲೆಯಾದ ಪೆಂಕಾಕ್ ಸಿಲಟ್‌ಗೆ ಬಳಸುವ ಉಡುಪು ತೊಟ್ಟು ನಿಂತಿರುವ ಮಾದರಿಯನ್ನು ಕೂಡ ಆಯ್ಕೆಗೆ ಪರಿಗಣಿಸಲಾಗಿತ್ತು. ಆದರೆ ಇದಕ್ಕೆ ದೇಶದ ವಿವಿಧ ಕಡೆಯಿಂದ ಭಾರಿ ಟೀಕೆ ವ್ಯಕ್ತವಾಗಿತ್ತು. ಕಲಾವಿದರು ಇದನ್ನು ಹೊಸತನ ಇಲ್ಲದ ಹಳೆಯ ಮಾದರಿ ಎಂದು ಹೇಳಿದ್ದರೆ, ರಾಷ್ಟ್ರೀಯವಾದಿಗಳು ಇದು ನಿಜವಾದ ಸ್ವರ್ಗದ ಹಕ್ಕಿಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ಜರಿದಿದ್ದರು.

 ಏಷ್ಯಾದ ಶಕ್ತಿ; ದಶಕಗಳ ನೆನಪು

ಈ ಬಾರಿ ಕ್ರೀಡಾಕೂಟಕ್ಕಾಗಿ ಬಳಸುತ್ತಿರುವ ಚಿಹ್ನೆಯನ್ನು ಏಷ್ಯಾದ ಶಕ್ತಿ ಬಿಂಬಿಸುವಂತೆ ವಿನ್ಯಾಸಗೊಳಿಸಲಾಗಿದೆ. 1962ರಲ್ಲಿ ಜಕಾರ್ತವು ಏಷ್ಯನ್‌ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿದ್ದ ಸಂದರ್ಭದಲ್ಲಿ ನಿರ್ಮಾಣಗೊಂಡ ಜೆಲೋರ ಬಂಗ್ ಕರ್ನೊ ಕ್ರೀಡಾಂಗಣದ ಎಂಟು ದ್ವಾರಗಳನ್ನು ನೆನಪಿಸುವ ಮಾದರಿಯಲ್ಲಿರುವ ಚಿಹ್ನೆಯ ಮಧ್ಯದಲ್ಲಿ ಸೂರ್ಯನನ್ನು ಹೋಲುವ ವಿನ್ಯಾಸವಿದೆ. ಏಷ್ಯಾದ ರಾಷ್ಟ್ರಗಳ ಒಗ್ಗಟ್ಟಿನ ಮಂತ್ರವನ್ನೂ ಈ ಲಾಂಛನ ಪಠಿಸುತ್ತದೆ. ಏಷ್ಯಾ, ಇಂಡೊನೇಷ್ಯಾ ಮತ್ತು ಕ್ರೀಡೆಯನ್ನು ಪ್ರತಿನಿಧಿಸುವ ಮೂರು ಬಣ್ಣಗಳ ವೃತ್ತವನ್ನೂ ಒಳಗೊಂಡಿದೆ.

 ಅಧಿಕೃತ ಲಾಂಛನಗಳು ಬೆಳೆದ ಬಗೆ

ಮ್ಯೂನಿಚ್‌ನಲ್ಲಿ 1972ರಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಮೊತ್ತಮೊದಲು ಅಧಿಕೃತ ಲಾಂಛನ ಬಳಸುವ ರೂಢಿಯಾಯಿತು. ಸ್ಥಳೀಯ ನಾಯಿ, ವಾಯ್ದಿಯನ್ನು ಅಂದು ಲಾಂಛನವಾಗಿ ಬಳಸಲಾಗಿತ್ತು. ನಂತರ ನಡೆದ ಪ್ರಮುಖ ಕ್ರೀಡಾಕೂಟಗಳಲ್ಲಿ ಅವುಗಳು ಪ್ರಮುಖ ಆಕರ್ಷಣೆಯಾದವು.

ಏಷ್ಯನ್‌ ಕ್ರೀಡಾಕೂಟಕ್ಕೆ ಅಧಿಕೃತ ಲಾಂಛನ ಬಳಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. 1982ರಲ್ಲಿ ದೆಹಲಿಯಲ್ಲಿ ನಡೆದ ಕೂಟದಲ್ಲಿ ‘ಅಪ್ಪು’ ಎಂಬ ಆನೆ ಲಾಂಛನವಾಗಿತ್ತು. ಇದು, ಏಷ್ಯನ್‌ ಕೂಟಕ್ಕೆ ಗಳಿಸಿಕೊಟ್ಟ ಖ್ಯಾತಿ ಅಷ್ಟಿಷ್ಟೇನಲ್ಲ.
 

ವೈವಿಧ್ಯತೆಯ ಕಥೆ ಹೇಳುವ ಹಕ್ಕಿ, ಪ್ರಾಣಿ

ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್‌ ಕ್ರೀಡಾಕೂಟದ ಲಾಂಛನ ವೈವಿಧ್ಯಮಯ ಕಥೆ ಹೇಳುತ್ತದೆ. ಒಂದು ಹಕ್ಕಿ ಮತ್ತು ಎರಡು ಪ್ರಾಣಿಗಳನ್ನು ಬಳಸಿ ಸಿದ್ಧಗೊಳಿಸಿರುವ ಈ ಲಾಂಛನ ಭಿನ್‌ ಭಿನ್ ಕಾಕ ಅತುಂಗ್‌ ಎಂಬ ನಾಮದಲ್ಲಿ ‘ಹೆಸರು’ ಗಳಿಸಿದೆ.

ಸ್ವರ್ಗದ ಹಕ್ಕಿ ಎಂದು ಕರೆಯಲಾಗುವ ಭಿನ್ ಭಿನ್‌ ರಣತಂತ್ರವನ್ನು ಬಿಂಬಿಸುತ್ತದೆ. ಬವೀನ್‌ ದ್ವೀಪದ ಜಿಂಕೆ ಅತುಂಗ್, ವೇಗವನ್ನು ಪ್ರತಿಬಿಂಬಿಸುತ್ತದೆ. ಕಾಕ ಹೆಸರಿನ ಘೇಂಡಾಮೃಗ ಶಕ್ತಿಯ ಪ್ರತೀಕ.

ಈ ಮೂರು ಪ್ರಾಣಿಗಳು ಇಂಡೊನೇಷ್ಯಾದ ವೈವಿಧ್ಯತೆಯ ಕಥೆಯನ್ನೂ ಹೇಳುತ್ತವೆ. ಭಿನ್‌ ಭಿನ್‌ ಈ ದೇಶದ ಪೂರ್ವಭಾಗವನ್ನು ಪ್ರತಿನಿಧಿಸುತ್ತಿದ್ದರೆ ಪಶ್ಚಿಮ ಭಾಗವನ್ನು ಘೇಂಡಾಮೃಗ ಪ್ರತಿನಿಧಿಸುತ್ತದೆ. ಅತುಂಗ್‌ ಕೇಂದ್ರ ಭಾಗದ ಪ್ರತಿನಿಧಿಯಂತೆ ಇದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !