ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್‌ ಲಾನ್‌ ಬೌಲ್‌ ಚಾಂಪಿಯನ್‌ಶಿಪ್‌: ರಾಘವೇಂದ್ರಗೆ ಬೆಳ್ಳಿ

Last Updated 13 ಅಕ್ಟೋಬರ್ 2022, 21:36 IST
ಅಕ್ಷರ ಗಾತ್ರ

ಬೆಂಗಳೂರು:ಏಷ್ಯನ್‌ ಲಾನ್‌ ಬೌಲ್‌ ಚಾಂಪಿಯನ್‌ಶಿಪ್‌ ಸ್ಪರ್ಧೆಯಲ್ಲಿ ಕರ್ನಾಟಕದ ಪಿ. ರಾಘವೇಂದ್ರ ಬೆಳ್ಳಿ ಪದಕ ಜಯಿಸಿದ್ದಾರೆ.

ಮಲೇಷಿಯಾದ ಜೋಹನ್‌ನಲ್ಲಿ ನಡೆದ 3ನೇ ಏಷ್ಯನ್‌ ಲಾನ್‌ ಬೌಲ್‌ ಚಾಂಪಿಯನ್‌ಶಿಪ್‌ನ ಡಬಲ್‌ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಸಾಧನೆ ಮಾಡಿದ ಮೊದಲ ಕನ್ನಡಿಗ ರಾಘವೇಂದ್ರ ಆಗಿದ್ದಾರೆ.

ಹರಿಯಾಣದ ವಿಕಾಸ್‌ ನವಾಲ್‌ ಅವರ ಜೊತೆ ಸೇರಿ ಈ ಸಾಧನೆ ಮಾಡಿದ್ದಾರೆ.

ರಾಘವೇಂದ್ರ ಅವರ ಈ ಸಾಧನೆಗೆ ಭಾರತೀಯ ಪ್ಯಾರಾ ಒಲಿಂಪಿಕ್‌ ಸಮಿತಿ ಅಭಿನಂದನೆ ಸಲ್ಲಿಸಿದೆ. ಸತ್ಯನಾರಾಯಣ್‌ ಅವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹದಲ್ಲಿ ಈ ಸಾಧನೆ ಮಾಡಿದ್ದಾರೆ.

ರಾಘವೇಂದ್ರ ಅವರು ರಾಜ್ಯ ಔಷಧ ನಿಯಂತ್ರಣ ಇಲಾಖೆಯ ಉದ್ಯೋಗಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT