ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಮಾಸ್ಟರ್ಸ್‌ ಕೂಟಕ್ಕೆ ಯೋಗೇಂದ್ರ

Last Updated 27 ನವೆಂಬರ್ 2019, 20:10 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರದ ಸಿಎಸ್‌ಇಜೆಡ್ ಅಧಿಕಾರಿ ಎಂ. ಯೋಗೇಂದ್ರ ಅವರು ಮಲೇಷ್ಯಾದಲ್ಲಿ ಡಿಸೆಂಬರ್ 2 ರಿಂದ ನಡೆಯಲಿರುವ ಏಷ್ಯನ್ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಕೂಟದಲ್ಲಿ ಸ್ಪರ್ಧಿಸಲಿದ್ದಾರೆ.

ಅವರು 55 ವರ್ಷ ಮೇಲಿನವರ ಮೂರು ಸಾವಿರ ಮೀಟರ್ಸ್‌ ಸ್ಟೀಪಲ್ ಚೇಸ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಈಚೆಗೆ ಮಂಗಳೂರಿನಲ್ಲಿ ನಡೆದಿದ್ದ ರಾಜ್ಯ ಮಾಸ್ಟರ್ಸ್‌ ಕೂಟದಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದರು.

ಮೂಲತಃ ಮೈಸೂರಿನವರಾದ ಯೋಗೇಂದ್ರ, ಬೆಳ್ಳಂದೂರಿನಲ್ಲಿರುವ ಕೊಚಿನ್ ವಿಶೇಷ ಆರ್ಥಿಕ ವಲಯದ ಕಚೇರಿಯಲ್ಲಿ ( ಸಿಎಸ್‌ಇಜೆಡ್)ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಇಲಾಖೆಯ ಜಂಟಿ ಅಭಿವೃದ್ಧಿ ಆಯುಕ್ತ ಎ.ಎಸ್. ನವೀನ್ ಕುಶಾಲಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT