ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಕಜ್‌ ಅಡ್ವಾಣಿಗೆ ಮಿಶ್ರ ಫಲ

ಏಷ್ಯನ್ ಸ್ನೂಕರ್‌ ಟೂರ್‌ ಟೆನ್ ರೆಡ್ಸ್‌ ಚಾಂಪಿಯನ್‌ಷಿಪ್‌: ಇರಾನ್‌, ಹಾಂಕಾಂಗ್‌ ಪಾರಮ್ಯ
Last Updated 22 ಏಪ್ರಿಲ್ 2019, 20:22 IST
ಅಕ್ಷರ ಗಾತ್ರ

ಬೆಂಗಳೂರು: ಸತತ ಎರಡನೇ ಪ್ರಶಸ್ತಿಯ ಕನಸು ಹೊತ್ತು ಕಣಕ್ಕೆ ಇಳಿದ ಪಂಕಜ್‌ ಅಡ್ವಾಣಿ, ಎಸಿಬಿಎಸ್‌ (ಏಷ್ಯನ್‌ ಕಾನ್ಫೆಡರೇಷನ್ ಆಫ್‌ ಬಿಲಿಯರ್ಡ್ ಸ್ಪೋರ್ಟ್ಸ್‌) ಏಷ್ಯನ್‌ ಸ್ನೂಕರ್ ಟೂರ್‌ 10 ರೆಡ್ಸ್ ಚಾಂಪಿಯನ್‌ಷಿಪ್‌ನ ಮೊದಲ ದಿನ ಮಿಶ್ರ ಫಲ ಕಂಡರು.

ವಸಂತ ನಗರದಲ್ಲಿರುವ ಕರ್ನಾಟಕ ರಾಜ್ಯ ಬಿಲಿಯರ್ಡ್ಸ್‌ ಸಂಸ್ಥೆ ಆವರಣದಲ್ಲಿ ಸೋಮವಾರ ಆರಂಭಗೊಂಡ ಚಾಂಪಿಯನ್‌ಷಿಪ್‌ನ ಮೂರನೇ ಲೆಗ್‌ನ ಮೊದಲ ಸುತ್ತಿನಲ್ಲಿ ಸೋತ ಪಂಕಜ್ ನಂತರದ ಪಂದ್ಯದಲ್ಲಿ ಗೆದ್ದು ಸಂಭ್ರಮಿ ಸಿದರು. ಹಾಂಕಾಂಗ್, ಇರಾನ್ ಮತ್ತು ಆತಿಥೇಯ ಭಾರತದ ಆಟಗಾರರು ಮೊದಲ ದಿನ ಪಾರಮ್ಯ ಮೆರೆದರೆ, ಭಾರತದ ಕೆಲವು ಆಟಗಾರರ ನಿರೀಕ್ಷೆ ಹುಸಿಯಾಯಿತು.

ಏಷ್ಯನ್ ಸ್ನೂಕರ್ ಟೂರ್ ರ‍್ಯಾಂಕಿಂಗ್‌ನ ಅಗ್ರ ಸ್ಥಾನದಲ್ಲಿರುವ ಪಂಕಜ್ ಅಡ್ವಾಣಿ ಕಳೆದ ಲೆಗ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು. ತವರಿನ ಪ್ರೇಕ್ಷಕರ ಸಮ್ಮುಖ ದಲ್ಲಿ ಬೆಳಿಗ್ಗೆ ವಿಶ್ವಾಸದಿಂದಲೇ ಕಣಕ್ಕೆ ಇಳಿದಿದ್ದರು. ಆದರೆ ಹಾಂಕಾಂಗ್‌ನ ಫಂಗ್ ಕ್ವಾಕ್ ವಾಯ್‌ಗೆ ಅಡ್ವಾಣಿ ಮಣಿದರು. ಸಂಜೆ ನಡೆದ ಪಂದ್ಯದಲ್ಲಿ ಭಾರತದ ಯೋಗೇಶ್ ಕುಮಾರ್ ವಿರುದ್ಧ 4–1ರಿಂದ ಗೆದ್ದು ಸಮಾಧಾನಪಟ್ಟುಕೊಂಡರು.

ಮೊದಲ ದಿನದ ಫಲಿತಾಂಶಗಳು: ಇರಾನ್‌ನ ಎಹ್ಸಾನ್ ಹೈದರಿ ನೇಜಾದ್‌ಗೆ ಭಾರತದ ಯೋಗೇಶ್‌ ಕುಮಾರ್ ಎದುರು 4–3ರಿಂದ ಜಯ (ಸ್ಕೋರ್‌: 42–50, 13–59, 46–29, 40–32, 38–48, 47–46, 50–05); ಥಾಯ್ಲೆಂಡ್‌ನ ತಿನಾವತ್‌ ತಿರಪೊಂಗ್‌ಪಬೂನ್‌ಗೆ ಖತಾರ್‌ನ ಮೊಹ್ಸೆನ್‌ ಬುಕ್‌ಶೈಶಾ ವಿರುದ್ಧ 4–3ರಿಂದ ಗೆಲುವು (27-60, 37-41, 73-00, 12-46, 69 (69)-11, 77 (77)-22, 55-00); ಹಾಂಕಾಂಗ್‌ನ ಫಂಗ್‌ ಕ್ವೊಕ್‌ ವಾಯ್‌ಗೆ ಪಂಕಜ್‌ ಅಡ್ವಾಣಿ ವಿರುದ್ಧ 4–1ರಿಂದ ಜಯ (79 (54)-07, 01-82, 72 (41)-20, 45-04, 47-34); ಹಾಂಕಾಂಗ್‌ನ ಚೆಂಗ್ ಕಾ ವಾಯ್‌ಗೆ ಭಾರತದ ಸಂದೀಪ್‌ ಗುಲಾಟಿ ವಿರುದ್ಧ 4–1ರಿಂದ ಜಯ (44-56, 66 (48)-22, 66 (46)-18, 51-38, 53-46); ಇರಾನ್‌ನ ಅಮೀರ್ ಸರ್ಖೋಷ್‌ಗೆ ಸಿರಿಯಾದ ಯಜನ್‌ ಅಲ್ಹದದ್‌ ಎದುರು 4–0ಯಿಂದ ಜಯ (100 (100)-00, 44-19, 62 (51)-00, 55-43).

ಮ್ಯಾನ್ಮಾರ್‌ನ ಆಂಗ್ ಫಿಯೊ ವಿರುದ್ಧ ಭಾರತದ ಆದಿತ್ಯ ಮೆಹ್ತಾಗೆ 4–3ರಿಂದ ಜಯ (04-50, 43-49, 51 (51)-18, 00-103 (103), 49-36, 47-06, 52-09); ಭಾರತದ ಸೌರವ್ ಕೊಠಾರಿ ವಿರುದ್ಧ ಮನನ್‌ ಚಂದ್ರಗೆ 1–4ರಿಂದ ಜಯ (67-35, 78 (51)-01, 14-55, 55-41, 54-01); ಭಾರತದ ಲಕ್ಷ್ಮಣ್‌ ರಾವತ್ ವಿರುದ್ಧ ಥಾಯ್ಲೆಂಡ್‌ನ ಪೊಂಗ್‌ಐಸಕೊರ್ನ್‌ ಚೊಂಗ್‌ಜೈರೊಕ್‌ಗೆ 4–0ಯಿಂದ ಗೆಲುವು (67-36, 61 (45)-16, 47 (40)-37, 44-34); ಭಾರತದ ಸಂದೀಪ್‌ ಗುಲಾಟಿ ವಿರುದ್ಧ 4–0ಯಿಂದ ಕಮಲ್‌ ಚಾವ್ಲಾಗೆ ಜಯ (48-09, 50-24, 58-26, 51-00); ಖತಾರ್‌ನ ಮೊಹ್ಸೆನ್‌ ಬುಕ್ಸೈಶ್‌ ವಿರುದ್ಧ 4–3ರಿಂದ ಹಾಂಕಾಂಗ್‌ನ ಚೆಂಗ್ ಕಾ ವಾಯ್‌ಗೆ ಗೆಲುವು (00-55, 49-10, 63 (63)-20, 28-39, 49-01, 33-52, 47-26); ಭಾರತದ ಯೋಗೇಶ್ ಕುಮಾರ್ ವಿರುದ್ಧ 4–1ರಿಂದ ಪಂಕಜ್ ಅಡ್ವಾಣಿಗೆ ಗೆಲುವು (78 (74)-05, 47-14, 16-54, 71-19, 62-24); ಇರಾನ್‌ನ ಎಹ್ಸಾನ್‌ ಹೈದರಿ ನೆಜದ್‌ ಎದುರು ಖತಾರ್‌ನ ಅಲಿ ಅಲೊಬೈದ್ಲಿಗೆ 4–0ಯಿಂದ ಜಯ (58 (52)-00, 65-11, 61 (45)-09, 58-13).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT