ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್: ಚಿನ್ನ ಗೆದ್ದ ಬಜರಂಗ್ ಪೂನಿಯಾ

ಬುಧವಾರ, ಮೇ 22, 2019
24 °C
ಫೈನಲ್‌ಗೆ ಪರ್ವೀನ್ ರಾಣಾ

ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್: ಚಿನ್ನ ಗೆದ್ದ ಬಜರಂಗ್ ಪೂನಿಯಾ

Published:
Updated:
Prajavani

ಕ್ಸಿಯಾನ್: ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗಳಿಸುವುದರೊಂದಿಗೆ ಭಾರತ ಶುಭಾರಂಭ ಮಾಡಿದೆ.

ಮಂಗಳವಾರ ನಡೆದ ಪಂದ್ಯಗಳಲ್ಲಿ ಅಗ್ರಕ್ರಮಾಂಕದ ಬಜರಂಗ್‌ ಪೂನಿಯಾ 65 ಕೆ.ಜಿ ವಿಭಾಗದಲ್ಲಿ ಚಿನ್ನ ಗೆದ್ದರೆ, ಪರ್ವೀನ್‌ ರಾಣಾ ಫೈನಲ್‌ ಪ್ರವೇಶಿಸಿದ್ದಾರೆ. 

ಪುರುಷರ ಫ್ರೀ–ಸ್ಟೈಲ್‌ ವಿಭಾಗದಲ್ಲಿ ಬಜರಂಗ್‌ ಅವರು ಕಜಕಸ್ತಾನದ ಸಯ್ಯತ್ಬೆಕ್ ಒಕಸೊವ್ ‌ವಿರುದ್ಧ 12–7ರಿಂದ ಗೆದ್ದರು. ಪ್ರಾರಂಭದಲ್ಲಿ 2–7ರಿಂದ ಹಿನ್ನಡೆ ಅನುಭವಿಸಿದ್ದ ಪೂನಿಯಾ ನಂತರ ಆಕ್ರಮಣಕಾರಿಯಾಗಿ ಆಟವಾಡಿದರು. 

ಕೊನೆ ಬೆಲ್‌ಗೆ 60 ಸೆಕೆಂಡ್‌ ಉಳಿದಿದ್ದಾಗ ಪುಟಿದೆದ್ದ ಪೂನಿಯಾ, 8 ಅಂಕ ಗಿಟ್ಟಿಸಿಕೊಂಡು ಅಭಿಮಾನಿಗಳಲ್ಲಿ ಕಿಚ್ಚು ಹತ್ತಿಸಿದ್ದರು. ರೋಚಕ ಗೆಲುವು ಪಡೆಯುವುದರೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದರು. 

ಬಜರಂಗ್‌ ಅವರ ಮುಂದಿನ ನಡೆಯನ್ನು ಗುರುತಿಸಲು ಎದುರಾಳಿಗೆ ಆಗಲಿಲ್ಲ. ವೇಗ ಮತ್ತು ಬಲವಾದ ಪಟ್ಟುಗಳಿಗೆ ಕಜಕ್‌ ಆಟಗಾರ ಶರಣಾಗಬೇಕಾಯಿತು. ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ನಲ್ಲಿ ಉಜ್ಬೆಕಿಸ್ತಾನದ ಸಿರಾಜಿದ್ದೀನ್‌ ಕಶನೊವ್ ಅವರನ್ನು 12–1ರಿಂದ ಮಣಿಸಿದ್ದರು. 

ಫೈನಲ್‌ಗೆ ಪರ್ವೀನ್‌: 79 ಕೆ.ಜಿ ವಿಭಾಗದಲ್ಲಿ ಪರ್ವೀನ್ ರಾಣಾ ಅವರು ಕಜಕಸ್ತಾನದ ಗ್ಯಾಲಿಮ್ಝಾನ್ ಉಸೆರ್ಬೇವ್‌ ಅವರನ್ನು 3–2ರಿಂದ ಮಣಿಸಿದರು. ಫೈನಲ್‌ನಲ್ಲಿ ಚಿನ್ನಕ್ಕಾಗಿ ಇರಾನ್‌ನ ಮೊಹಮ್ಮದ್‌ ತೆಮೌರಿ ವಿರುದ್ಧ ಸೆಣಸಲಿದ್ದಾರೆ. 

57 ಕೆ.ಜಿ ವಿಭಾಗದಲ್ಲಿ ರವಿಕುಮಾರ್‌ ಅವರು ತೈವಾನ್‌ನ ತ್ಸೋ ಲಿಯೂ ‌ಅವರನ್ನು 4–0ರಿಂದ ಸೋಲಿಸುವ ಮೂಲಕ ಕಂಚಿನ ಪದಕದ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಸತ್ಯವ್ರತ್‌ ಕದಿಯಾನ್‌ ಅವರು 97 ಕೆ.ಜಿ ವಿಭಾಗದಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಆದರೆ,  70 ಕೆ.ಜಿ ವಿಭಾಗದಲ್ಲಿ ರಜನೀಶ್‌ ಅವರು ಸೋತು ಟೂರ್ನಿಯಿಂದ ಹೊರನಡೆದಿದ್ದಾರೆ.     

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !