ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಠೀರವ: ಸಿಂಥೆಟಿಕ್ ಹಾಸುವ ಕಾರ್ಯ ಶೀಘ್ರ ಆರಂಭ ಸಾಧ್ಯತೆ

ವಿದೇಶದಿಂದ ಬಂದ ಮೊದಲ ಕಂತಿನ ಸರಕು; ಬೆಂಗಳೂರು ತಲುಪಿದ ರೆಕ್ಟೋರನ್ ಸಿಂಥೆಟಿಕ್ ಹಾಸು
Last Updated 5 ಸೆಪ್ಟೆಂಬರ್ 2020, 14:25 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕಂಠೀರವ ಕ್ರೀಡಾಂಗಣದ ಓಟದ ಟ್ರ್ಯಾಕ್‌ಗೆ ಹೊಸ ಸಿಂಥೆಟಿಕ್ ಹಾಸುವ ಕಾರ್ಯ ಸದ್ಯದಲ್ಲೇ ಆರಂಭಗೊಳ್ಳುವ ಸಾಧ್ಯತೆ ಇದೆ. ವಿದೇಶದಿಂದ ಆಮದು ಮಾಡಿರುವ ರೆಕಾರ್ಟನ್ ಸಿಂಥೆಟಿಕ್ ಹಾಸು ಶುಕ್ರವಾರ ಬೆಂಗಳೂರಿಗೆ ತಲುಪಿದ್ದು ಮಳೆ ನಿಂತ ಕೂಡಲೇ ಕಾಮಗಾರಿ ಆರಂಭವಾಗಲಿದೆ.

10 ವರ್ಷಗಳ ಹಿಂದೆ ಹಾಸಿದ್ದ ಸಿಂಥೆಟಿಕ್ ಹಾಳಾಗಿ ಟ್ರ್ಯಾಕ್‌ನಲ್ಲಿ ಗುಂಡಿಗಳು ಬಿದ್ದಿದ್ದವು. ಇದರಿಂದ ಇಲ್ಲಿ ಕ್ರೀಡಾಕೂಟಗಳನ್ನು ಆಯೋಜಿಲಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಕಳೆದ ವರ್ಷ ಟ್ರ್ಯಾಕ್ ನವೀಕರಣಕ್ಕೆ ಯೋಜನೆ ಸಿದ್ಧಪಡಿಸಲಾಗಿತ್ತು. ಮಾರ್ಚ್ ಒಂಬತ್ತರಂದು ಹಳೆಯ ಸಿಂಥೆಟಿಕ್ ತೆಗೆಯುವ ಕಾಮಗಾರಿಗೆ ಚಾಲನೆ ನೀಡಲಾಯಿತು. ಆದರೆ ಕೆಲವೇ ದಿನಗಳಲ್ಲಿ ಲಾಕ್ ಡೌನ್ ಘೋಷಣೆಯಾದದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ವಿದೇಶದಿಂದ ಸಾಮಗ್ರಿಗಳನ್ನು ತರುವ ಪ್ರಕ್ರಿಯೆಗೂ ಅಡ್ಡಿಯಾಗಿತ್ತು. ಅನ್‌ಲಾಕ್ ಪ್ರಕ್ರಿಯೆಗಳು ಮುಂದುವರಿದು ನಾಲ್ಕನೇ ಹಂತಕ್ಕೆ ತಲುಪುತ್ತಿದ್ದಂತೆ ಸಾಮಗ್ರಿಗಳನ್ನು ಹೊತ್ತ ಮೊದಲ ಟ್ರಕ್ ಬೆಂಗಳೂರಿಗೆ ಬಂದಿದೆ.

‘ವರ್ಲ್ಡ್‌ ಅಥ್ಲೆಟಿಕ್ಸ್ (ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್‌) ಮಾನ್ಯತೆ ನೀಡುವ ‘ರೆಕಾರ್ಟನ್’ ಸಿಂಥೆಟಿಕ್ ತರಿಸಲಾಗಿದ್ದು ಇದರಿಂದಾಗಿ ಗುಣಮಟ್ಟದ ಟ್ರ್ಯಾಕ್ ಸಿದ್ಧವಾಗಲಿದೆ. ಸದ್ಯ ಆಗಾಗ ಮಳೆ ಸುರಿಯುತ್ತಿದೆ. ಇಂಥ ಸಂದರ್ಭದಲ್ಲಿ ಅದನ್ನು ಹಾಸಲು ಸಾಧ್ಯವಿಲ್ಲ. ಮಳೆ ನಿಂತ ಕೂಡಲೇ ಕಾಮಗಾರಿ ಆರಂಭವಾಗಲಿದೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಜಿತೇಂದ್ರ ಶೆಟ್ಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT