ಏಷ್ಯನ್ ಚಾಂಪಿಯನ್‌ಷಿಪ್‌ಗೆ ಮಹಿಳೆಯರ ರಿಲೇ ತಂಡ

ಶನಿವಾರ, ಏಪ್ರಿಲ್ 20, 2019
31 °C

ಏಷ್ಯನ್ ಚಾಂಪಿಯನ್‌ಷಿಪ್‌ಗೆ ಮಹಿಳೆಯರ ರಿಲೇ ತಂಡ

Published:
Updated:

ಪಟಿಯಾಲ: ದ್ಯುತಿ ಚಾಂದ್‌ ನೇತೃತ್ವದ 4x100 ಮೀಟರ್ಸ್ ರಿಲೇ ತಂಡ ಮುಂಬರುವ ಏಷ್ಯನ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸಿತು. ಇಲ್ಲಿ ನಡೆದ ಟ್ರಯಲ್ಸ್‌ನಲ್ಲಿ ದ್ಯುತಿ ಚಾಂದ್‌, ಹಿನಾ, ಅರ್ಚನಾ ಮತ್ತು ಸುಸೀಂದ್ರ ಅವರನ್ನು ಒಳಗೊಂಡ ತಂಡ 44.12 ಸೆಕೆಂಡುಗಳಲ್ಲಿ ಗುರಿ ಮುಟ್ಟಿತು. ಅರ್ಹತೆಗಾಗಿ ಭಾರತ ಅಥ್ಲೆಟಿಕ್ ಫೆಡರೇಷನ್‌ 44.50 ಸೆಕೆಂಡು ನಿಗದಿ ಮಾಡಿತ್ತು.

ಆದರೆ ಬಹುತೇಕ ಅಥ್ಲೀಟ್‌ಗಳು ಅರ್ಹತಾ ಮಾನದಂಡವನ್ನು ದಾಟಲು ವಿಫಲರಾಗಿ ನಿರಾಸೆ ಅನುಭವಿಸಿದರು. 

ಏಪ್ರಿಲ್ 21ರಿಂದ 24ರ ವರೆಗೆ ದೋಹಾದಲ್ಲಿ ನಡೆಯಲಿರುವ ಚಾಂಪಿಯನ್‌ಷಿಪ್‌ಗೆ ಭಾರತ ಅಥ್ಲೆಟಿಕ್ ಫೆಡರೇಷನ್‌ 51 ಮಂದಿ ಅಥ್ಲೀಟ್‌ಗಳ ಪಟ್ಟಿ ಸಿದ್ಧಗೊಳಿಸಿತ್ತು. ಆದರೆ ಟ್ರಯಲ್ಸ್‌ನಲ್ಲಿ ರಿಲೇ ತಂಡ ಮತ್ತು ಮಧ್ಯಮ ದೂರ ಓಟಗಾರ್ತಿ ಕೆ.ಗೌತಮಿ ಮಾತ್ರ ಅರ್ಹತಾ ಮಾನದಂಡ ದಾಟಿದರು.

ಮಹಿಳಾ ಡಿಸ್ಕಸ್ ಥ್ರೋ ಪಟು ಕಮಲ್‌ಪ್ರೀತ್‌ ಸಿಂಗ್‌ ಕೌರ್‌ ಮತ್ತು ನವಜೀತ್ ಕೌರ್‌ ಧಿಲಾನ್‌ ಅರ್ಹತಾ ಮಾನದಂಡವನ್ನು ದಾಟಲಿಲ್ಲವಾದರೂ ಅವರನ್ನು ಆಯ್ಕೆ ಮಾಡಲಾಗಿದೆ. 400ಮೀಟರ್ಸ್ ಹರ್ಡಲ್ಸ್‌ನಲ್ಲಿ ಧರುಣ್ ಅಯ್ಯಸಾಮಿ ಗಾಯಗೊಂಡಿದ್ದಾರೆ.

ಟ್ರಯಲ್ಸ್‌ನಲ್ಲಿ ಉತ್ತಮ ಸಾಧನೆ ಮಾಡದೇ ಇರುವವರ ಪೈಕಿ ಕೆಲವರನ್ನಷ್ಟೇ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಫೆಡರೇಷನ್ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !