ತನ್ವೀರ್‌, ಸಂಗೀತಾ ಮಿಂಚು

7
ಜಿಲ್ಲಾ ಮಟ್ಟದ ಅಥ್ಲೆಟಿಕ್‌ ಕೂಟ; ಲಕ್ಷ್ಮಣಗೆ ಅಗ್ರಸ್ಥಾನ

ತನ್ವೀರ್‌, ಸಂಗೀತಾ ಮಿಂಚು

Published:
Updated:
Deccan Herald

ಮೈಸೂರು: ಯೂನಿಕ್‌ ಅಥ್ಲೆಟಿಕ್‌ ಕ್ಲಬ್‌ನ ತನ್ವೀರ್‌ ಪಾಷ ಮತ್ತು ಮಹಾರಾಣಿ ವಿಜ್ಞಾನ ಕಾಲೇಜಿನ ಡಿ.ಎಸ್.ಸಂಗೀತಾ ಅವರು ಮೈಸೂರು ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಅಥ್ಲೆಟಿಕ್‌ ಕೂಟದಲ್ಲಿ ಅಗ್ರಸ್ಥಾನ ಪಡೆದುಕೊಂಡರು.

ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಬಾಲಕರ 20 ವರ್ಷ ವಯಸ್ಸಿನೊಳಗಿನವರ ವಿಭಾಗದ ಓಟದಲ್ಲಿ ತನ್ವೀರ್ 23.38 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಬಾಲಕಿಯರ ವಿಭಾಗದಲ್ಲಿ ಸಂಗೀತಾ ಅವರು 30.96 ಸೆಕೆಂಡುಗಳಲ್ಲಿ ಮೊದಲಿಗರಾಗಿ ಗುರಿ ತಲುಪಿದರು.

ಬಾಲಕರ 20 ವರ್ಷದೊಳಗಿನವರ 1,500 ಮೀ ಓಟದ ಸ್ಪರ್ಧೆಯಲ್ಲಿ ಮಹಾರಾಜ ಕಾಲೇಜಿನ ಎಚ್‌.ಡಿ.ಲಕ್ಷ್ಮಣ ಅವರು 4 ನಿಮಿಷ 18.75 ಸೆ.ಗಳಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು.

ಉದ್ಘಾಟನೆ: ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗದ ಪ್ರಭಾರಿ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಅವರು ಕೂಟವನ್ನು ಉದ್ಘಾಟಿಸಿದರು. ಸಿ.ಮರಿಯಪ್ಪ, ಕೆ.ಆರ್.ರಾಮಚಂದ್ರ ಗೌಡ, ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆ ಅಧ್ಯಕ್ಷ ಎಸ್.ಸೋಮಶೇಖರ್, ಕಾರ್ಯದರ್ಶಿ ಶ್ರೀಕಾಂತ್, ಅಭಿಲಾಷ್ ನಾಯರ್ ಪಾಲ್ಗೊಂಡಿದ್ದರು.

ಎರಡು ದಿನಗಳ ಕೂಟದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳ 1,500 ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ. ಬಾಲಕ ಮತ್ತು ಬಾಲಕಿಯರಿಗೆ 14 ವರ್ಷ, 16 ವರ್ಷ, 18 ವರ್ಷ ಮತ್ತು 20 ವರ್ಷ ವಯಸ್ಸಿನೊಳಗಿನವರ ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಮೊದಲ ದಿನದ ಪ್ರಮುಖ ಫಲಿತಾಂಶಗಳು ಹೀಗಿವೆ: ಬಾಲಕರ ವಿಭಾಗ: 20 ವರ್ಷ ವಯಸ್ಸಿನೊಳಗಿನವರು:

200 ಮೀ. ಓಟ: ತನ್ವೀರ್‌ ಪಾಷ (ಯೂನಿಕ್‌ ಅಥ್ಲೆಟಿಕ್‌ ಕ್ಲಬ್‌)–1, ಬಿ.ಮಿಥುನ್‌ ರಾಜ್‌ (ಯೂನಿಕ್‌ ಅಥ್ಲೆಟಿಕ್‌ ಕ್ಲಬ್)–2, ಎಚ್‌.ಕೆ.ವಿನಯ್ (ಪರಿವರ್ತನ ಕಾಲೇಜು)–3. ಕಾಲ: 23.38 ಸೆ.

1,500 ಮೀ. ಓಟ: ಎಚ್‌.ಡಿ.ಲಕ್ಷ್ಮಣ (ಮಹಾರಾಜ ಕಾಲೇಜು)–1, ರಾಹುಲ್‌ ಚೌಧರಿ (ಕೌಟಿಲ್ಯ)–2, ಬಿ.ಸಿ.ಪುಟ್ಟರಾಜು (ಪ್ರೈಡ್‌ ಅಥ್ಲೆಟಿಕ್ ಕ್ಲಬ್‌)–3. ಕಾಲ: 4 ನಿ. 18.75 ಸೆ.

18 ವರ್ಷ ವಯಸ್ಸಿನೊಳಗಿನವರು: ಷಾಟ್‌ ಪಟ್‌: ರಾಹುಲ್‌ ಕಶ್ಯಪ್ (ಪ್ರೈಡ್)–1, ಪಿ.ಹೇಮಂತ್ (ಮಹಾಜನ)–2, ವೈ.ಸಚಿತ್ (ಕೌಟಿಲ್ಯ)–3. ದೂರ: 15.67 ಮೀ.

ಜಾವೆಲಿನ್‌ ಥ್ರೋ: ಆರ್‌.ಮನೋಹರ್ (ಪರಿವರ್ತನಾ ಕಾಲೇಜು)–1, ಎಂ.ಮಂಜುನಾಥ್ (ಶ್ರೀಕಂಠೇಶ್ವರ ಕಾಲೇಜು)–2, ಕೆ.ಪ್ರವೀಣ್ (ಹರಿ ವಿದ್ಯಾಲಯ)–3. ದೂರ: 36.06 ಮೀ.

ಲಾಂಗ್‌ಜಂಪ್: ತಬ್ರೇಜ್‌ ಪಾಷಾ (ಎಸ್‌ಆರ್‌ಕೆವಿಎಸ್)–1, ಎಂ.ಆದರ್ಶ್ (ಯೂನಿಕ್ ಸ್ಪೋರ್ಟ್ಸ್‌ ಕ್ಲಬ್)–2, ಎನ್.ಪಿ.ವಾಗೇಶ್ (ನಿಸರ್ಗ ಸ್ಪೋರ್ಟ್ಸ್‌ ಕ್ಲಬ್)–3. ದೂರ: 6.61 ಮೀ.

16 ವರ್ಷದೊಳಗಿನವರು: 1000 ಮೀ. ಓಟ: ರಾಹುಲ್ (ಐಡಿಯಲ್ ಜಾವಾ ರೋಟರಿ ಶಾಲೆ)–1, ಮಿಲಿಂದ್ ಎಸ್‌.ಪ್ರಸಾದ್ (ಪೊಲೀಸ್‌ ಪಬ್ಲಿಕ್‌ ಶಾಲೆ)–2, ಎಂ.ವಿಶ್ವಾಸ್ (ಮಹಾಜನ)–3. ಕಾಲ: 2 ನಿ.24.6 ಸೆ.)

ಬಾಲಕಿಯರ ವಿಭಾಗ: 20 ವರ್ಷದೊಳಗಿನವರು: 200 ಮೀ. ಓಟ: ಡಿ.ಎಸ್.ಸಂಗೀತಾ (ಮಹಾರಾಣಿ ವಿಜ್ಞಾನ ಕಾಲೇಜು)–1, ಎಂ.ಅಂಬಿಕಾ (ಮಹಾರಾಣಿ ವಿಜ್ಞಾನ ಕಾಲೇಜು)–2. ಕಾಲ: 30.96 ಸೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !