ಶನಿವಾರ, ನವೆಂಬರ್ 23, 2019
17 °C

ಎಟಿಪಿ ಫೈನಲ್ಸ್‌ಗೆ ಆರು ಆಟಗಾರರು

Published:
Updated:

ಪ್ಯಾರಿಸ್‌: ಲಂಡನ್‌ನಲ್ಲಿ ನಡೆಯವ ಎಟಿಪಿ ಟೆನಿಸ್‌ ಫೈನಲ್ಸ್‌ಗೆ ಈಗಾಗಲೇ ಆರು ಆಟಗಾರರು ಟಿಕೆಟ್‌ ಗಿಟ್ಟಿಸಿದ್ದು, ಇನ್ನೆರಡು ಸ್ಥಾನಗಳು ನಿರ್ಧಾರವಾಗಬೇಕಿದೆ. 

ಶಾಂಘೈ ಮಾಸ್ಟರ್ಸ್‌ ಟೂರ್ನಿಯಲ್ಲಿ ಗ್ರೀಸ್‌ ಆಟಗಾರ ಸ್ಟೆಫಾನೋಸ್‌ ಸಿಸಿಪಸ್‌ ಅವರು ನೊವಾಕ್‌ ಜೊಕೊವಿಚ್‌ ಅವರನ್ನು ಸೋಲಿಸಿ ಆರನೇ ಆಟಗಾರನಾಗಿ ಫೈನಲ್ಸ್‌ಗೆ ಅರ್ಹತೆ ಪಡೆದರು.

ಫೈನಲ್ಸ್‌ನಲ್ಲಿ ಎಂಟು ಆಟಗಾರರಿಗೆ ಮಾತ್ರ ಆಡಲು ಅವಕಾಶವಿದೆ. ರಫೆಲ್‌ ನಡಾಲ್‌, ಜೊಕೊವಿಚ್‌, ಡೇನಿಯಲ್‌ ಮೆಡ್ವೆಡೆವ್‌, ರೋಜರ್‌ ಫೆಡರರ್‌, ಡೊಮಿನಿಕ್‌ ಥೀಮ್‌ ಈಗಾಗಲೇ ಅರ್ಹತೆ ಪಡೆದಿದ್ದು, ಏಳು ಮತ್ತು ಎಂಟನೇ ಆಟಗಾರರಾಗಿ ಅಲೆಕ್ಸಾಂಡರ್‌ ಜ್ವೆರೆವ್‌ ಹಾಗೂ ಮ್ಯಾಟೆಯೊ ಬೆರೆಟ್ಟಿನಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

ಎಟಿಪಿ ಫೈನಲ್ಸ್ ನವೆಂಬರ್‌ 10ರಿಂದ 17ರವರೆಗೆ ನಡೆಯಲಿದೆ.

ಪ್ರತಿಕ್ರಿಯಿಸಿ (+)