ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್‌ವೆಲ್ತ್‌ ಕೂಟ: ಕುಸ್ತಿ ಪಂದ್ಯದ ವೇಳೆ ಕಳಚಿ ಬಿದ್ದ ಧ್ವನಿವರ್ಧಕ

Last Updated 5 ಆಗಸ್ಟ್ 2022, 13:55 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್‌ ಕೂಟದ ಕುಸ್ತಿ ಪಂದ್ಯ ನಡೆಯುತ್ತಿದ್ದ ಸ್ಥಳದಲ್ಲಿ ಚಾವಣಿಗೆ ಜೋಡಿಸಿದ್ದ ಧ್ವನಿವರ್ಧಕವೊಂದು ಕಳಚಿ ಬಿದ್ದಿರುವ ಘಟನೆ ಶುಕ್ರವಾರ ನಡೆದಿದ್ದು, ಸಂಘಟಕರು ಮುಜುಗರ ಅನುಭವಿಸಿದ್ದಾರೆ.

ಬೆಳಗ್ಗಿನ ಅವಧಿಯ ಕುಸ್ತಿ ಹಣಾಹಣಿ ನಡೆಯುತ್ತಿದ್ದ ವೇಳೆಯೇ ಸ್ಪೀಕರ್‌ ಕಳಚಿಬಿದ್ದಿದೆ. ಅದೃಷ್ಟವಶಾತ್‌ ಆ ಸ್ಥಳದಲ್ಲಿ ಯಾರೂ ಇರಲಿಲ್ಲ. ಇದರಿಂದ ಸುಮಾರು ಎರಡು ಗಂಟೆಗೂ ಹೆಚ್ಚು ಹೊತ್ತು ಸ್ಪರ್ಧೆಯನ್ನು ಸ್ಥಗಿತಗೊಳಿಸಲಾಯಿತು.

ಮುನ್ನೆಚ್ಚರಿಕೆ ಕ್ರಮವಾಗಿ ಹಾಲ್‌ನಲ್ಲಿದ್ದ ಎಲ್ಲ ಪ್ರೇಕ್ಷಕರು ಮತ್ತು ಸ್ಪರ್ಧಿಗಳನ್ನು ಕೆಲಹೊತ್ತು ಹೊರಕ್ಕೆ ಕಳುಹಿಸಲಾಯಿತು.

‘ಘಟನೆ ನಡೆಯುವ ವೇಳೆ ನಾವು ತಾಲೀಮು ನಡೆಸುವ ಸ್ಥಳದಲ್ಲಿದ್ದೆವು. ಸ್ಪೀಕರ್‌ ಕಳಚಿ ಮ್ಯಾಟ್‌ಗೆ ಬೀಳುವ ಶಬ್ದ ಕೇಳಿಸಿತು’ ಎಂದು ಭಾರತ ತಂಡದ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT