ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಆಸ್ಟ್ರೇಲಿಯಾ ತಿರುಗೇಟು

Last Updated 3 ಡಿಸೆಂಬರ್ 2022, 14:27 IST
ಅಕ್ಷರ ಗಾತ್ರ

ಅಡಿಲೇಡ್‌ (ಪಿಟಿಐ): ಆರಂಭದಲ್ಲಿ ಮುನ್ನಡೆ ಗಳಿಸಿದರೂ ಆ ಬಳಿಕ ಆಟದ ಮೇಲಿನ ಲಯ ಕಳೆದುಕೊಂಡ ಭಾರತ ತಂಡ, ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಹಾಕಿ ಸರಣಿಯ ನಾಲ್ಕನೇ ಪಂದ್ಯದಲ್ಲಿ 1–5 ರಲ್ಲಿ ಸೋತಿತು.

ಶನಿವಾರ ನಡೆದ ಪಂದ್ಯವನ್ನು ಗೆಲ್ಲುವ ಮೂಲಕ ಆತಿಥೇಯರು ಸರಣಿಯಲ್ಲಿ 3–1ರಲ್ಲಿ ಮುನ್ನಡೆ ಸಾಧಿಸಿದರು.

ಮೊದಲ ಎರಡು ಪಂದ್ಯಗಳಲ್ಲಿ ಸೋತಿದ್ದ ಭಾರತ, ಮೂರನೇ ಪಂದ್ಯ ಗೆದ್ದು ಸರಣಿ ಜಯದ ಕನಸು ಜೀವಂತವಾಗಿರಿಸಿಕೊಂಡಿತ್ತು. ಆದರೆ ಗೆಲುವಿನ ಓಟ ಮುಂದುವರಿಸಲು ವಿಫಲವಾಯಿತು.

ದಿಲ್‌ಪ್ರೀತ್‌ ಸಿಂಗ್‌ 25ನೇ ನಿಮಿಷದಲ್ಲಿ ಗೋಲು ಗಳಿಸಿ ಭಾರತಕ್ಕೆ ಮುನ್ನಡೆ ತಂದಿತ್ತರು. ಎರಡನೇ ಕ್ವಾರ್ಟರ್‌ ಬಳಿಕ ಆಸ್ಟ್ರೇಲಿಯಾ ಪಂದ್ಯದ ಮೇಲೆ ಹಿಡಿತ ಸಾಧಿಸಿತು.

ಜೆರೆಮಿ ಹೇವಾರ್ಡ್‌ (29ನೇ ನಿ.) ಮತ್ತು ಜೇಕ್‌ ವೆಟನ್‌ (30ನೇ ನಿ.) ಅವರು 50 ಸೆಕೆಂಡುಗಳ ಅಂತರದಲ್ಲಿ ಗೋಲು ಗಳಿಸಿ ಆಸ್ಟ್ರೇಲಿಯಾಕ್ಕೆ 2–1 ಮುನ್ನಡೆ ತಂದಿತ್ತರು. ಟಾಮ್‌ ವಿಕ್‌ಹ್ಯಾಂ (34 ನೇ ನಿ.), ಹೇವಾರ್ಡ್‌ (41ನೇ ನಿ.) ಮತ್ತು ಮ್ಯಾಟ್‌ ಡಾಸನ್‌ (54ನೇ ನಿ.) ಅವರು ಗೆಲುವಿನ ಅಂತರ ಹೆಚ್ಚಿಸಿದರು.

ಗೋಲ್‌ಕೀಪರ್‌ ಕೃಷ್ಣ ಪಾಠಕ್‌ ಅವರ ಸೊಗಸಾದ ಪ್ರದರ್ಶನ ಇಲ್ಲದೇ ಇರುತ್ತಿದ್ದಲ್ಲಿ, ಭಾರತದ ಸೋಲಿನ ಅಂತರ ಇನ್ನಷ್ಟು ಹೆಚ್ಚುತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT