ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ಫ್‌: ಅಗಸ್ಟಾ ನ್ಯಾಷನಲ್‌ ಫೈನಲ್ ಸುತ್ತಿಗೆ ಅವನಿ

ಪ್ರತಿಷ್ಠಿತ ಟೂರ್ನಿಯ ಸ್ಪ‍ರ್ಧಾತ್ಮಕ ಸುತ್ತಿನಲ್ಲಿ ಆಡಲಿರುವ ಮೊದಲ ಭಾರತೀಯ ಆಟಗಾರ್ತಿ
Last Updated 2 ಏಪ್ರಿಲ್ 2022, 3:11 IST
ಅಕ್ಷರ ಗಾತ್ರ

ಅಗಸ್ಟಾ, ಅಮೆರಿಕ: ಕರ್ನಾಟಕದ ಅವನಿ ಪ್ರಶಾಂತ್ ಅವರು ಅಗಸ್ಟಾ ನ್ಯಾಷನಲ್ ಗಾಲ್ಫ್‌ ಕ್ಲಬ್‌ನ ಫೈನಲ್‌ ಸುತ್ತಿಗೆ ಆಡುವ ಅರ್ಹತೆ ಗಿಟ್ಟಿಸಿದ್ದಾರೆ. ಇದರೊಂದಿಗೆ ಪ್ರತಿಷ್ಠಿತ ಟೂರ್ನಿಯ ಸ್ಪರ್ಧಾತ್ಮಕ ಸುತ್ತಿನಲ್ಲಿ ಆಡಲಿರುವ ಭಾರತದ ಮೊದಲ ಆಟಗಾರ್ತಿ ಎನ್ನುವ ಶ್ರೇಯ ಗಳಿಸಿದ್ದಾರೆ.

ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಹಿಳಾ ಅಮೆಚೂರ್ ಚಾಂಪಿಯನ್‌ಷಿಪ್ ಮೂಲಕ ಬೆಂಗಳೂರಿನ ಅವನಿ ಈ ಅವಕಾಶ ಪಡೆದರು. 72 ಸ್ಪರ್ಧಿಗಳಿದ್ದ ಅಂಗಣದಲ್ಲಿ ಅವರು 21ನೇ ಸ್ಥಾನ ಗಳಿಸಿದರು. ಅಗ್ರ 30 ಸ್ಥಾನ ಗಳಿಸಿದವರಿಗೆ ಫೈನಲ್ ಸುತ್ತಿಗೆ ಪ್ರವೇಶಿಸುವ ಅವಕಾಶ ಇತ್ತು.

‘ಇಲ್ಲಿ ಉತ್ತಮ ಸಾಮರ್ಥ್ಯ ತೋರುವ ಗುರಿಯೊಂದಿಗೆ ಇಲ್ಲಿಗೆ ಆಗಮಿಸಿದ್ದೇನೆ. ಇದು ಮೊದಲ ಹೆಜ್ಜೆ. ಇನ್ನು ಒಂದು ಸುತ್ತು ಬಾಕಿ ಇದ್ದು, ಸ್ಪರ್ಧೆಗೆ ಉತ್ಸುಕನಾಗಿದ್ದೇನೆ‘ ಎಂದು ಅವನಿ ಹೇಳಿದ್ದಾರೆ.

ಫೈನಲ್ ಸುತ್ತು ಶನಿವಾರ ನಡೆಯಲಿದೆ.

ಆದರೆ ಅಮೆರಿಕದಲ್ಲಿ ನೆಲೆಸಿರುವ ಭಾರತದ ಮೇಘಾ ಗನ್ನೆ ಅರ್ಹತೆ ಗಳಿಸಲು ವಿಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT