ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್: ತೆಲಂಗಾಣ, ತಮಿಳುನಾಡು ಫೈನಲ್‌ಗೆ

Last Updated 22 ಸೆಪ್ಟೆಂಬರ್ 2019, 18:14 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಅಂತರರಾಜ್ಯ ದಕ್ಷಿಣ ವಲಯ ಬ್ಯಾಡ್ಮಿಂಟನ್ ಚಾಂಪಿಯಷಿಪ್‌ನ ಸೀನಿಯರ್ ವಿಭಾಗದ ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡವು ತೆಲಂಗಾಣ ತಂಡದ ವಿರುದ್ಧ ಮುಗ್ಗರಿಸಿತು.

ರಾಜ್ಯ ತಂಡವು 0–3ರಲ್ಲಿ ಸೋಲುವ ಮೂಲಕ ನಿರಾಸೆ ಅನುಭವಿಸಿತು.

ಪುರುಷರ ಸಿಂಗಲ್ಸ್‌ನಲ್ಲಿ ಹೇಮಂತ್ ಎಂ.ಗೌಡ ಅವರು 21–18, 11–21, 19–21ರಲ್ಲಿ ತೆಲಂಗಾಣದ ಎಂ.ತರುಣ್ ಪರಾಭವಗೊಂಡರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ಡಿ.ಶೀತಲ್ ಅವರನ್ನು 7–21, 16–21ರಲ್ಲಿ ತೆಲಂಗಾಣದ ಎಂ.ಮೇಘನಾ ರೆಡ್ಡಿ ಅವರು ಸೋಲಿಸಿದರು.

ಪುರುಷರ ಡಬಲ್ಸ್‌ ಎಸ್.ಆದರ್ಶ್‌ ಕುಮಾರ್, ಸಂಜೀತ್ ಜೋಡಿ 14–21, 19–21ರಲ್ಲಿ ಪಿ.ಶ್ರೀಕೃಷ್ಣಕುಮಾರ ಸಾಯಿ ಕುಮಾರ್, ಪಿ.ವಿಷ್ಣುವರ್ಧನಗೌಡ ವಿರುದ್ಧ ಸೋಲನುಭವಿಸಿತು.

ಮತ್ತೊಂದು ಪಂದ್ಯದಲ್ಲಿ ತಮಿಳುನಾಡು ತಂಡವು 0–3ರಲ್ಲಿ ಆಂಧ್ರಪ್ರದೇಶ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು.

ಪುರುಷರ ಸಿಂಗಲ್ಸ್‌ನಲ್ಲಿ ಕೆ.ಸತೀಶ್‌ಕುಮಾರ್ 12–21, 5–21ರಲ್ಲಿ ಆಂಧ್ರಪ್ರದೇಶದ ಕೆ.ಜಗದೀಶ್ ವಿರುದ್ಧ ಗೆದ್ದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ಅಕ್ಷಯ ಆರ್ಮುಗಂ 17–21, 15–21ರಲ್ಲಿ ಎ.ಅಕ್ಷಿತಾ ಅವರನ್ನು ಮಣಿಸಿದರು.

ಪುರುಷರ ಡಬಲ್ಸ್‌ನಲ್ಲಿ ಗಣೇಶ್‌ಕುಮಾರ್ ಎ., ನವೀನ್ ಪಿ., ಜೋಡಿಯು 21–23, 21–17, 11–21ರಲ್ಲಿ ಡಿ.ಚಂದ್ರಕುಮಾರ್ ಮತ್ತು ಗೌಸ್ ಜೋಡಿಯನ್ನು ಸೋಲಿಸಿತು.

’ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ’

ಗುಲಬರ್ಗಾ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಮತ್ತು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಆಯೋಜಿಸಿರುವ 75ನೇ ಅಂತರರಾಜ್ಯ ದಕ್ಷಿಣ ವಲಯ ಬ್ಯಾಡ್ಮಿಂಟನ್ ಚಾಂಪಿಯಷಿಪ್‌ಗೆ ಡಿಸಿಪಿ ಕಿಶೋರ ಬಾಬು ಅವರು ಭಾನುವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬೇಕು. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಗುಲಬರ್ಗಾ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಅರುಣಕುಮಾರ ಪಾಟೀಲ, ಕಾರ್ಯದರ್ಶಿ ಯೋಗೇಶ್ ಪಾಟೀಲ, ಕೊಯಮತ್ತೂರಿನ ವರಾಹಸ್ವಾಮಿ ಫಿಲ್ಮ್ಸ್‌ ಎಜುವಿಷನ್‌ನ ಚೇರ್ಮನ್ ವಿನೋಧ್‌ಕುಮಾರ್‌, ಭಾರತ ಬ್ಯಾಡ್ಮಿಂಟನ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಎಸ್.ಚಕ್ರಪಾಣಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯ್ಕ್‌, ಅನಿಲ್‌ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT