ಗುರುವಾರ , ಅಕ್ಟೋಬರ್ 24, 2019
21 °C
ಡಬಲ್ಸ್‌, ಮಿಕ್ಸ್ಡ್‌ ಡಬಲ್ಸ್‌ನಲ್ಲಿ ಮಿಂಚಿದ ಜನನಿ

ಬ್ಯಾಡ್ಮಿಂಟನ್‌: ಆಯುಷ್‌, ತಾನ್ಯಾಗೆ ಪ್ರಶಸ್ತಿ

Published:
Updated:
Prajavani

ದಾವಣಗೆರೆ: ಅಗ್ರಶ್ರೇಯಾಂಕದ ಆಟಗಾರರಾದ ಆಯುಷ್‌ ಆರ್‌. ಶೆಟ್ಟಿ ಹಾಗೂ ತಾನ್ಯಾ ಹೇಮಂತ್‌ ಅವರು ಶನಿವಾರ ಇಲ್ಲಿ ಮುಕ್ತಾಯಗೊಂಡ ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ‘ಪ್ರಶಸ್ತಿ ಡಬಲ್‌’ ಸಾಧನೆ ಮಾಡಿದರು.

15 ವರ್ಷದೊಳಗಿನ ಬಾಲಕರ ವಿಭಾಗದ ಸಿಂಗಲ್ಸ್‌ ಹಾಗೂ ಡಬಲ್ಸ್‌ನಲ್ಲಿ ಆಯುಷ್‌ ಗೆದ್ದರು. 17 ವರ್ಷದೊಳಗಿನ ಬಾಲಕಿಯರ ವಿಭಾಗದ ಸಿಂಗಲ್ಸ್‌ ಹಾಗೂ ಡಬಲ್ಸ್‌ನಲ್ಲಿ ತಾನ್ಯಾ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಜನನಿ ಕೂಡ ಡಬಲ್ಸ್‌ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಫಲಿತಾಂಶಗಳು: ಫೈನಲ್‌: 17 ವರ್ಷದೊಳಗಿನ ಬಾಲಕರ ಸಿಂಗಲ್ಸ್‌: ಅಗ್ರಶ್ರೇಯಾಂಕದ ನರೇನ್‌ ಎಸ್‌. ಅಯ್ಯರ್‌ (ಲೆವಲ್‌ ಅಪ್‌) 21–14, 21–13ರಲ್ಲಿ ತೃತೀಯ ಶ್ರೇಯಾಂಕದ ಜಯಂತ್‌ ಜಿ. (ಆರ್‌.ಬಿ.ಎ, ಮೈಸೂರು) ಎದುರು ಜಯ.

ಡಬಲ್ಸ್‌: ಸನೀತ್‌ ಎಸ್‌. ದಯಾನಂದ (ಲೆವಲ್‌ ಅಪ್‌) ಮತ್ತು ಚಿರಂಜೀವಿ ರೆಡ್ಡಿ (ವೈಪಿಬಿಎ) 21–17, 24–22ರಲ್ಲಿ ದೇವದತ್ತ ಹಾನಗಲ್‌ (ಐ ಸ್ಪೋರ್ಟ್ಸ್‌) ಮತ್ತು ಸುಹಾಸ್‌ ವಿ. (ಜೆ.ಪಿ.ಬಿ.ಎ) ವಿರುದ್ಧ ಜಯ.

ಬಾಲಕಿಯರ ಸಿಂಗಲ್ಸ್‌: ತಾನ್ಯಾ ಹೇಮಂತ್‌ 22–20, 21–6ರಲ್ಲಿ ಆರನೇ ಶ್ರೇಯಾಂಕದ ಜನನಿ ಅನಂತಕುಮಾರ್‌ ವಿರುದ್ಧ ಗೆಲುವು. ಡಬಲ್ಸ್‌: ಜನನಿ ಅನಂತಕುಮಾರ್‌ ಮತ್ತು ತಾನ್ಯಾ ಹೇಮಂತ್‌ 21–15, 21–13ರಲ್ಲಿ ಗ್ಲೋರಿಯಾ ವಿನಯಕುಮಾರ್‌ ಅಠಾವಳೆ (ಎನ್‌.ಎಂ.ಬಿ.ಎ, ಹುಬ್ಬಳ್ಳಿ) ಮತ್ತು ಆಕಾಂಕ್ಷಾ ಎಸ್‌. ಪೈ (ಗೋಲ್ಡನ್‌ ಶಟಲ್‌ ಅಕಾಡೆಮಿ) ವಿರುದ್ಧ ಜಯ.

15 ವರ್ಷದೊಳಗಿನ ಬಾಲಕರ ಸಿಂಗಲ್ಸ್‌: ಆಯುಷ್‌ ಶೆಟ್ಟಿ 21–17,21–18ರಲ್ಲಿ ಅರ್ಜುನ್‌ ಮಹೇಶ್ವರಿ ಎದುರು ಜಯ. ಡಬಲ್ಸ್‌: ಸಾತ್ವಿಕ್‌ ಶಂಕರ್‌ ಮತ್ತು ಆಯುಷ್‌ ಶೆಟ್ಟಿ 22–20, 21–12ರಲ್ಲಿ ಅರ್ಜುನ್‌ ಮಹೇಶ್ವರಿ ಮತ್ತು ಸುಮುಖ ಜಿ.ಎಸ್‌. ಎದುರು ಜಯ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)