ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಡಬಲ್ಸ್‌ ಬ್ಯಾಡ್ಮಿಂಟನ್ ಕೋಚ್ ರಾಜೀನಾಮೆ

Last Updated 2 ಮಾರ್ಚ್ 2019, 19:05 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಬ್ಯಾಡ್ಮಿಂಟನ್ ತಂಡದ ಡಬಲ್ಸ್‌ ವಿಭಾಗದ ಕೋಚ್ ಟ್ಯಾನ್ ಕಿಮ್ ಹರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವೈಯಕ್ತಿಕ ಕಾರಣಗಳಿಗಾಗಿ ಈ ನಿರ್ಧಾರ ಕೈಗೊಂಡಿದ್ದಾಗಿ ಅವರು ತಿಳಿಸಿದ್ದಾರೆ.

ಮಲೇಷ್ಯಾದ 47 ವರ್ಷದ ಕಿಮ್ ಅವರ ಗುತ್ತಿಗೆಯ ಅವಧಿಯು ಇನ್ನೂ ಒಂದೂವರೆ ವರ್ಷ ಬಾಕಿಯಿತ್ತು. 2020ರ ಟೊಕಿಯೊ ಒಲಿಂಪಿಕ್ಸ್‌ ಕೂಟದವರೆಗೂ ತಂಡಕ್ಕೆ ತರಬೇತಿ ನೀಡುವ ಒಪ್ಪಂದವನ್ನು ಅವರು ಭಾರತ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ)ಯೊಂದಿಗೆ ಮಾಡಿಕೊಂಡಿದ್ದರು.

‘ಟ್ಯಾನ್ ಕಿಮ್ ಅವರು ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಒಂದು ತಿಂಗಳ ಹಿಂದೆಯೇ ಅವರು ಪತ್ರ ನೀಡಿದ್ದರು. ಕೌಟುಂಬಿಕ ಕಾರಣಗಳಿಗಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಬಿಎಐ ಕಾರ್ಯದರ್ಶಿ ಓಮರ್ ರಶೀದ್ ತಿಳಿಸಿದ್ದಾರೆ.

ಕಿಮ್ ಅವರು ಇಲ್ಲಿಗೆ ಬರುವ ಮೊದಲು ಇಂಗ್ಲೆಂಡ್, ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾ ತಂಡಗಳಿಗೆ ತರಬೇತಿ ನೀಡಿದ್ದರು.

ಆದರೆ, ಕಿಮ್ ಅವರು ಜಪಾನ್ ತಂಡಕ್ಕೆ ಕೋಚ್ ಆಗಿ ಕಾರ್ಯನಿರ್ವಹಿಸಲು ತೆರಳಿದ್ದಾರೆ ಎಂದು ಡಬಲ್ಸ್‌ ಆಟಗಾರ ಚಿರಾಗ್ ಶೆಟ್ಟಿ ನೀಡಿದ್ದ ಹೇಳಿಕೆಯನ್ನು ರಶೀದ್ ಅಲ್ಲಗಳೆದಿದ್ದಾರೆ.

ಕಿಮ್ ಅವರ ಮಾರ್ಗದರ್ಶನದಲ್ಲಿ ಚಿರಾಗ್, ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಅವರು ಗೋಲ್ಡ್‌ಕೋಸ್ಟ್ ಕಾಮನ್‌ವೆಲ್ತ್‌ ಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಮಹಿಳಾ ಡಬಲ್ಸ್‌ನಲ್ಲಿ ಎನ್. ಸಿಕ್ಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಅವರು ಕಂಚು ಗಳಿಸಿದ್ದರು.

‘ಈ ವಿಷಯದ ಕುರಿತು ಎರಡು–ಮೂರು ವಾರಗಳ ಹಿಂದೆ ತಿಳಿಯಿತು. ಇಲ್ಲಿಂದ ನಿರ್ಗಮಿಸುತ್ತಿರುವುದಾಗಿ ಅವರೇ ಹೇಳಿದ್ದಾಗ ನಮಗೆ ಅಚ್ಚರಿಯಾಗಿತ್ತು’ ಎಂದು ಸಾತ್ವಿಕ್ ಸಾಯಿರಾಜ್ ಹೇಳಿದ್ದಾರೆ.

ಭಾರತದ ಪುರುಷರು ಮತ್ತು ಸಿಂಗಲ್ಸ್‌ಆಟಗಾರರಿಗೆ ಮಾರ್ಗದರ್ಶನ ನೀಡಲು ಕೊರಿಯಾದ ಕೋಚ್‌ಗಳಾದ ಕಿಮ್ ಜಿ ಯೂನ್ ಮತ್ತು ಪಾರ್ಕ್ ಟೈ ಸಾಂಗ್ ಅವರೊಂದಿಗೆ ಬಿಎಐ ಈಚೆಗೆ ಒಪ್ಪಂದ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT