ಗುರುವಾರ , ಅಕ್ಟೋಬರ್ 24, 2019
21 °C
ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್‌ ಮಿಕ್ಸೆಡ್‌ ತಂಡಗಳ ಚಾಂಪಿಯನ್‌ಷಿಪ್‌

ಸತತ ಮೂರನೇ ಜಯ ಕಂಡ ಭಾರತ

Published:
Updated:

ಕಜಾನ್‌, ರಷ್ಯಾ : ಭಾರತದ ಮೈಸ್ನಮ್‌ ಮೀರಬಾ ಲುವಾಂಗ್‌ ಹಾಗೂ ತಸ್ನಿಮ್‌ ಮಿರ್‌ ನೇತೃತ್ವದ ಭಾರತ ತಂಡ ಬಿಡಬ್ಲ್ಯುಎಫ್‌ ವಿಶ್ವ ಜೂನಿಯರ್‌ ಮಿಕ್ಸೆಡ್‌ ಚಾಂಪಿಯನ್‌ಷಿಪ್‌ನಲ್ಲಿ ಸತತ ಮೂರನೇ ಜಯ ಸಂಪಾದಿಸಿದೆ. ‘ಇ’ ಗುಂಪಿನ ಹಣಾಹಣಿಯಲ್ಲಿ 4–1ರಿಂದ ಆಸ್ಟ್ರೇಲಿಯಾ ತಂಡದ ಎದುರು ಭಾರತ ಗೆದ್ದಿತು.

ಮೊದಲ ಪಂದ್ಯದಲ್ಲಿ ತನಿಷಾ ಕ್ರಾಸ್ಟೊ– ಇಶಾನ್‌ ಭಟ್ನಾಗರ್‌ ಜೋಡಿಯು ಜಾಕ್‌ ಯು– ಕೈತ್ಲಾನ್‌ ಈ ವಿರುದ್ಧ 21–7, 20–22, 21–11ರಿಂದ ಜಯ ಸಾಧಿಸಿ ಮೊದಲ ಪಾಯಿಂಟ್‌ ತಂದರು.

ವಿಶ್ವ ಜೂನಿಯರ್‌ ಕ್ರಮಾಂಕದಲ್ಲಿ 10ನೇ ಸ್ಥಾನದಲ್ಲಿರುವ ಮೀರಬಾ, ಆಸ್ಟ್ರೇಲಿಯಾದ ರಿಯೊ ಅಗಸ್ಟಿನೊ ಎದುರು 21–7, 21–11ರಿಂದ ಗೆದ್ದರು. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಗುಜರಾತ್‌ನ ತಸ್ನಿಮ್‌ ಮಿರ್‌ ಅವರು ಎಂಜೆಲಾ ಯು ವಿರುದ್ಧ ಸುಲಭದ ಜಯ ಸಂಪಾದಿಸಿದರು. 22 ನಿಮಿಷಗಳಲ್ಲಿ ಮುಗಿದ ಪಂದ್ಯದಲ್ಲಿ 21–11, 21–15ರಿಂದ ಅವರು ಯಶಸ್ಸು ಸಾಧಿಸಿದರು. ಭಾರತಕ್ಕೆ 3–0 ಮುನ್ನಡೆ ಲಭಿಸಿತು.

ನಾಲ್ಕನೇ ಪಂದ್ಯದಲ್ಲಿ ಮಣಿಪುರದ ಜೋಡಿ ಮಂಜೀತ್‌ ಸಿಂಗ್‌–ಡಿಂಕು ಸಿಂಗ್‌ ಕೊಂತೌಜಾಮ್‌ ಅವರು ಹಿನ್ನಡೆಯಿಂದ ಚೇತರಿಸಿಕೊಂಡು ರಿಕಿ ಥಾಂಗ್‌–ಒಟ್ಟೊ ಡಿ ಜಾವೊ ವಿರುದ್ಧ 17–21, 21–8, 21–14ರಿಂದ ಗೆಲುವು ಸಾಧಿಸಿದರು.

ಕೊನೆಯ ಪಂದ್ಯದಲ್ಲಿ ಮಾತ್ರ ಭಾರತಕ್ಕೆ ನಿರಾಸೆ ಕಾಡಿತು. ಮಹಿಳಾ ಡಬಲ್ಸ್‌ನಲ್ಲಿ ಅದಿತಿ ಭಟ್‌– ತನಿಷಾ ಕ್ರಾಸ್ಟೊ ಜೋಡಿಯು ವಿಕ್ಟೋರಿಯಾ ಹೇ– ಎಂಜೆಲಾ ಯು ವಿರುದ್ಧ 17–21, 21–18, 15–21ರಿಂದ ಮಣಿಯಿತು.

ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭಾರತ ಬುಧವಾರ ಜಪಾನ್‌ ತಂಡವನ್ನು ಎದುರಿಸಲಿದೆ. 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)