ಬ್ಯಾಡ್ಮಿಂಟನ್‌: ಭಾರತಕ್ಕೆ ಮಣಿದ ಮಾಲ್ಡೀವ್ಸ್‌

7
ಶ್ರೀಕಾಂತ್‌, ಪ್ರಣಯ್‌ ಮೋಡಿ

ಬ್ಯಾಡ್ಮಿಂಟನ್‌: ಭಾರತಕ್ಕೆ ಮಣಿದ ಮಾಲ್ಡೀವ್ಸ್‌

Published:
Updated:
Deccan Herald

ಜಕಾರ್ತ: ಭಾರತದ ಪುರುಷರ ಬ್ಯಾಡ್ಮಿಂಟನ್‌ ತಂಡದವರು ಏಷ್ಯನ್‌ ಕ್ರೀಡಾಕೂಟದಲ್ಲಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಜಿಬಿಕೆ ಬ್ಯಾಡ್ಮಿಂಟನ್‌ ಹಾಲ್‌ನಲ್ಲಿ ಭಾನುವಾರ ನಡೆದ ತಂಡ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ಭಾರತ 3–0ರಿಂದ ಮಾಲ್ಡೀವ್ಸ್‌ ತಂಡವನ್ನು ಪರಾಭವಗೊಳಿಸಿತು.

ಸೋಮವಾರ ನಡೆಯುವ ಎಂಟರ ಘಟ್ಟದ ಪೈಪೋಟಿಯಲ್ಲಿ ಭಾರತ ತಂಡ ಆತಿಥೇಯ ಇಂಡೊನೇಷ್ಯಾ ‌ಸವಾಲು ಎದುರಿಸಲಿದೆ.

ಮೊದಲ ಸಿಂಗಲ್ಸ್‌ನಲ್ಲಿ ಕಣಕ್ಕಿಳಿದಿದ್ದ ಕಿದಂಬಿ ಶ್ರೀಕಾಂತ್‌ 21–4, 21–5ರಲ್ಲಿ ಸಹೀದ್‌ ಜಾಕಿ ಅವರನ್ನು ಸೋಲಿಸಿ ಭಾರತಕ್ಕೆ 1–0ರ ಮುನ್ನಡೆ ತಂದುಕೊಟ್ಟರು.

ಎರಡೂ ಗೇಮ್‌ಗಳಲ್ಲೂ ಶ್ರೀಕಾಂತ್‌ ಪ್ರಾಬಲ್ಯ ಮೆರೆದರು.

ಎರಡನೆ ಸಿಂಗಲ್ಸ್‌ನಲ್ಲಿ ಎಚ್‌.ಎಸ್‌.ಪ್ರಣಯ್‌ 21–8, 21–6ರಲ್ಲಿ ಮೊಹಮ್ಮದ್‌ ಸರಿನ್‌ ಎದುರು ಏಕಪಕ್ಷೀಯವಾಗಿ ಗೆದ್ದರು.

ಮೂರನೆ ಸಿಂಗಲ್ಸ್‌ನಲ್ಲಿ ಬಿ.ಸಾಯಿ ಪ್ರಣೀತ್‌ 21–7, 21–8ರಲ್ಲಿ ಅಜ್‌ಫಾನ್‌ ರಶೀದ್‌ ಮೊಹಮ್ಮದ್‌ ಅವರನ್ನು ಸೋಲಿಸಿದರು.

ಭಾರತ ತಂಡ ಸಿಂಗಲ್ಸ್‌ ವಿಭಾಗದ ಮೂರು ಪಂದ್ಯಗಳಲ್ಲೂ ಗೆದ್ದ ಕಾರಣ ಡಬಲ್ಸ್‌ ವಿಭಾಗದ ಹೋರಾಟಗಳು ನಡೆಯಲಿಲ್ಲ.

ಇಂದು ಮಹಿಳಾ ವಿಭಾಗದ ಸ್ಪರ್ಧೆ: ಸೋಮವಾರದಿಂದ ಮಹಿಳಾ ವಿಭಾಗದ ಸ್ಪರ್ಧೆಗಳು ಆರಂಭವಾಗಲಿವೆ.

ತಂಡ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತ ತಂಡ ಜಪಾನ್‌ ವಿರುದ್ಧ ಸೆಣಸಲಿದೆ. 

ಜಪಾನ್‌ ತಂಡದಲ್ಲಿ ಬಲಿಷ್ಠ ಆಟಗಾರ್ತಿಯರು ಇರುವ ಕಾರಣ ಭಾರತಕ್ಕೆ ಕಠಿಣ ಸವಾಲು ಎದುರಾಗುವ ನಿರೀಕ್ಷೆ ಇದೆ. ತಂಡದಲ್ಲಿರುವ ಪಿ.ವಿ.ಸಿಂಧು, ಸೈನಾ ನೆಹ್ವಾಲ್‌, ಕರ್ನಾಟಕದ ಅಶ್ವಿನಿ ‍ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಅವರ ಮೇಲೆ ಇತರರಿಗಿಂತಲೂ ಹೆಚ್ಚಿನ ಜವಾಬ್ದಾರಿ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !