ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಡ್ಮಿಂಟನ್‌: ಫೈನಲ್‌ಗೆ ನರೇನ್‌, ತಾನ್ಯಾ

Last Updated 4 ಅಕ್ಟೋಬರ್ 2019, 19:39 IST
ಅಕ್ಷರ ಗಾತ್ರ

ದಾವಣಗೆರೆ: ನರೇನ್‌ ಎಸ್‌. ಅಯ್ಯರ್‌ ಹಾಗೂ ತಾನ್ಯಾ ಹೇಮಂತ್‌ ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ 17 ವರ್ಷದೊಳಗಿನವರ ಸಿಂಗಲ್ಸ್‌ನಲ್ಲಿ ಕ್ರಮವಾಗಿ ಬಾಲಕ, ಬಾಲಕಿಯರ ವಿಭಾಗದ ಫೈನಲ್‌ ಪ್ರವೇಶಿಸಿದರು.

ಕರ್ನಾಟಕ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌, ದಾವಣಗೆರೆ ಜಿಲ್ಲಾ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ ಆಶ್ರಯದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ನರೇನ್‌ (ಲೆವಲ್‌ ಅಪ್‌) 21–12, 19–21, 21–4ರಲ್ಲಿ ನಾಲ್ಕನೇ ಶ್ರೇಯಾಂಕದ ಆದಿತ್ಯ ದಿವಾಕರ್‌ (ದೊಮ್ಮಲೂರು ಕ್ಲಬ್‌) ಎದುರು ಹಾಗೂ ಅಗ್ರ ಶ್ರೇಯಾಂಕದ ತಾನ್ಯಾ (ಐ ಸ್ಪೋರ್ಟ್ಸ್‌) 21–13, 21–18ರಲ್ಲಿ ತಮ್ಮದೇ ಕ್ಲಬ್‌ನ ಅನುಷ್ಕಾ ಗಣೇಶ್‌ ವಿರುದ್ಧ ಗೆದ್ದರು.

ಚಿರಂಜೀವಿ ರೆಡ್ಡಿ (ವೈ.ಪಿ.ಬಿ.ಎ) 21–11, 21–17ರಲ್ಲಿ ಅಗ್ರ ಶ್ರೇಯಾಂಕದ ಬಿ.ಎಸ್‌. ವೈಭವ್‌ (ಡಿವೈಇಎಸ್‌) ಅವರನ್ನು ಕ್ವಾರ್ಟರ್‌ ಫೈನಲ್‌ನಲ್ಲಿ ಮಣಿಸಿದರು. ಆದರೆ, ಸೆಮಿ ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಜಯಂತ್‌ ಜಿ. 14–21, 21–8, 21–16ರಲ್ಲಿ ಚಿರಂಜೀವಿ ಅವರನ್ನು ಸೋಲಿಸಿದರು. ‌

ಫಲಿತಾಂಶಗಳು: ಸೆಮಿಫೈನಲ್‌: 15 ವರ್ಷದೊಳಗಿನ ಬಾಲಕರ ವಿಭಾಗ: ಆಯುಷ್ ಆರ್‌. ಶೆಟ್ಟಿ (ಐ ಸ್ಪೋರ್ಟ್ಸ್‌) ಅವರಿಗೆ 21–9, 21–10ರಲ್ಲಿ ತುಷಾರ್‌ ಸುವೀರ್‌ (ಪಿ.ಪಿ.ಬಿ.ಎ) ಎದುರು; ಅರ್ಜುನ್‌ ಮಹೇಶ್ವರಿ (ಕೆ.ಬಿ.ಎ ಅಕಾಡೆಮಿ) ಅವರಿಗೆ 21–17, 21–17ರಲ್ಲಿ ಸಾತ್ವಿಕ್‌ ಶಂಕರ್‌ (ಐ ಸ್ಪೋರ್ಟ್ಸ್‌) ವಿರುದ್ಧ ಗೆಲುವು.

ಬಾಲಕಿಯರು: ನೆಯ್ಸಾ ಕಾರ್ಯ ಯಪ್ಪ (ಡಿವೈಇಎಸ್‌) ಅವರಿಗೆ 21–10, 21–18ರಲ್ಲಿ ಪ್ರೇರಣಾ ಶೇಟ್‌ (ಎನ್‌.ಎಂ. ಬ್ಯಾಡ್ಮಿಂಟನ್ ಅಕಾಡೆಮಿ, ಶಿರಸಿ) ಎದುರು; ಕಾರ್ಣಿಕಾ ಶ್ರೀ (ಪಿ.ಪಿ.ಬಿ.ಎ) ಅವರಿಗೆ 21–17, 21–17ರಲ್ಲಿ ಆಶಿತಾ ಸಿಂಗ್‌ (ಐ ಸ್ಪೋರ್ಟ್ಸ್‌) ವಿರುದ್ಧ ಜಯ.

13 ವರ್ಷದೊಳಗಿನ ಬಾಲಕರು: ಅವಿ ಬಾಸಕ್‌ (ಐ ಸ್ಪೋರ್ಟ್ಸ್‌) 21–17, 22–20ರಲ್ಲಿ ಸಂಕೀರ್ತ ಪಿ.ಕೆ. (ಉದಯ್‌ ಬ್ಯಾಡ್ಮಿಂಟನ್‌ ಅಕಾಡೆಮಿ) ವಿರುದ್ಧ; ಓಂ ಮಾಕಾ (ಶ್ರೀ ಸಾಯಿ ಬ್ಯಾಡ್ಮಿಂಟನ್ ಅಕಾಡೆಮಿ) 21–10, 21–18ರಲ್ಲಿ ಮಯೂಖ್‌ ಗೌಡ (ಡಿವೈಇಎಸ್‌) ಎದುರು ಗೆದ್ದರು.

ಬಾಲಕಿಯರು: ರುಜುಲಾ ರಾಮು (ಪಟೇಲ್ಸ್‌ ಇನ್‌) 21–12, 22–20ರಲ್ಲಿ ಅನ್ವಿತಾ ವಿಜಯ್‌ (ಡಿವೈಇಎಸ್‌) ಎದುರು; ಅನುಷ್ಕಾ ಬರಾಯಿ (ಗೋಲ್ಡನ್‌ ಫಿನ್ಸ್‌) 21–8, 21–12ರಲ್ಲಿ ಅನನ್ಯಾ ಲೊಬೊ (ಗೋಪಾಲಸ್ವಾಮಿ, ಮೈಸೂರು) ವಿರುದ್ಧ ಜಯ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT