ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್: ಕ್ವಾರ್ಟರ್‌ಗೆ ಪ್ರಣೀತ್‌

ಬ್ಯಾಡ್ಮಿಂಟನ್: ಥಾಯ್ಲೆಂಡ್‌ ಓಪನ್‌ ಟೂರ್ನಿ
Last Updated 2 ಫೆಬ್ರುವರಿ 2023, 19:14 IST
ಅಕ್ಷರ ಗಾತ್ರ

ಬ್ಯಾಂಕಾಕ್‌ (ಪಿಟಿಐ): ಭಾರತದ ಬಿ.ಸಾಯಿ ಪ್ರಣೀತ್‌ ಅವರು ಇಲ್ಲಿ ನಡೆಯುತ್ತಿರುವ ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಗುರುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ 16ರ ಘಟ್ಟದ ಪಂದ್ಯದಲ್ಲಿ ಅವರು 24–22, 7–21, 22–20 ರಲ್ಲಿ ಕೊರಿಯಾದ ಜೊನ್‌ ಹ್ಯೊಕ್‌ ಜಿನ್‌ ವಿರುದ್ಧ ಗೆದ್ದರು. ಈ ಜಿದ್ದಾಜಿದ್ದಿನ ಹೋರಾಟ ಒಂದು ಗಂಟೆ 18 ನಿಮಿಷ ನಡೆಯಿತು.

ಕಣದಲ್ಲಿರುವ ಭಾರತದ ಇತರ ಎಲ್ಲ ಸ್ಪರ್ಧಿಗಳೂ 16ರ ಘಟ್ಟದಲ್ಲಿ ಎಡವಿದರು. ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕಿರಣ್‌ ಜಾರ್ಜ್‌ 22–20, 15–21, 20–22 ರಲ್ಲಿ ಹಾಂಗ್‌ಕಾಂಗ್‌ನ ಯಿಯು ಲೀ
ಚುಕ್‌ ಎದುರು ಸೋತರು.

ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಅಶ್ಮಿತಾ ಚಲಿಹಾ 21–19, 13–21, 27–29 ರಲ್ಲಿ ಡೆನ್ಮಾರ್ಕ್‌ನ ಲಿನ್‌ ಹೊಯೆಮಾರ್ಕ್‌ ಕೈಯಲ್ಲಿ ಪರಾಭವಗೊಂಡರು.

ಪುರುಷರ ಡಬಲ್ಸ್‌ನಲ್ಲಿ ಭಾರತದ ಇಶಾನ್‌ ಭಟ್ನಾಗರ್‌– ಕೆ.ಸಾಯಿ ಪ್ರತೀಕ್‌ ಜೋಡಿ 14–21, 21–18, 26–24 ರಲ್ಲಿ ಪುನ್ಪನಿಚ್‌ ತನದೊನ್‌– ಸೊತೊನ್‌ ವಚಿರವಿತ್‌ ಎದುರು ಸೋತಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT