ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಚ್‌ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿ: ಪ್ರೀ ಕ್ವಾರ್ಟರ್ ಫೈನಲ್‌ಗೆ ಸಾಯಿ ಚರಣ್‌

ಮಣಿಪುರದ ಮೀರಾಬಾಯಿಗೆ ಗೆಲುವು
Last Updated 2 ಮಾರ್ಚ್ 2019, 17:20 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಸಾಯಿ ಚರಣ್ ಕೋಯ ಅಮೋಘ ಆಟವಾಡಿ ಡಚ್ ಜೂನಿಯರ್ ಇಂಟರ್‌ನ್ಯಾಷನಲ್‌ ಬ್ಯಾಡ್ಮಿಂಟನ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಶನಿವಾರ ನಡೆದ ಪಂದ್ಯದಲ್ಲಿ ಅವರು ಇಂಡೊನೇಷ್ಯಾದ ಸೈಬದಾ ಪೆರ್ಕಾಸ ಬೆಲ್ವ ಅವರನ್ನು 21–11, 21–19ರಿಂದ ಮಣಿಸಿದರು. ಹಣಾಹಣಿ 38 ನಿಮಿಷ ನಡೆಯಿತು.

ಮಹಿಳೆಯರ ವಿಭಾಗದಲ್ಲಿ ಮಣಿಪುರದ ಮೀರಾಬಾಯಿ 21–13, 21–16ರಿಂದ ಒಂಬತ್ತನೇ ಶ್ರೇಯಾಂಕದ ಎರ್ನಸ್ಟೊ ಬಾಷ್‌ ವಿಚ್‌ ಅವರನ್ನು ಮಣಿಸಿದರು.

ಸಮಿಯಾ ಐಮದ್ ಫಾರೂಕಿ ಸೋತು ಹೊರಬಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT