ಮ್ಯಾಡ್ರಿಡ್ (ಪಿಟಿಐ): ಚುರುಕಿನ ಆಟವಾಡಿದ ಪಿ.ವಿ.ಸಿಂಧು ಅವರು ಮ್ಯಾಡ್ರಿಡ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಪ್ರವೇಶಿಸಿದರು.
ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಅವರು 24–22, 22–20 ರಲ್ಲಿ ಸಿಂಗಪುರದ ಯಿಯೊ ಜಿಯಾ ಮಿನ್ ವಿರುದ್ಧ ಗೆದ್ದರು. ಹೈದರಾಬಾದ್‌ನ ಆಟಗಾರ್ತಿ ಈ ವರ್ಷ ಆಡಿದ ಟೂರ್ನಿಗಳಲ್ಲಿ ಫೈನಲ್ ಪ್ರವೇಶಿಸಿದ್ದು ಇದೇ ಮೊದಲು.
ಜಿದ್ದಾಜಿದ್ದಿನ ಸೆಣಸಾಟ 48 ನಿಮಿಷ ನಡೆಯಿತು. ಮೊದಲ ಗೇಮ್‌ನಲ್ಲಿ 15–20 ರಿಂದ ಹಿನ್ನಡೆಯಲ್ಲಿದ್ದ ಸಿಂಧು ಆ ಬಳಿಕ ಅಮೋಘ ರೀತಿಯಲ್ಲಿ ಮರುಹೋರಾಟ ನಡೆಸಿ ಗೇಮ್ ಗೆದ್ದರು. ಎರಡನೇ ಗೇಮ್‌ನಲ್ಲಿ ಇಬ್ಬರೂ 17–17 ರಲ್ಲಿ ಸಮಬಲ ಸಾಧಿಸಿದ್ದರು. ಆ ಬಳಿಕ ಸಿಂಧು ಎಚ್ಚರಿಕೆಯಾಗಿ ಆಟವಾಡಿ ಫೈನಲ್‌ಗೆ ಲಗ್ಗೆಯಿಟ್ಟರು.
ಸ್ಪೇನ್‌ನ ಕರೊಲಿನಾ ಮರಿನ್– ಇಂಡೊನೇಷ್ಯಾದ ಗ್ರೆಗೊರಿಯಾ ತನ್‌ಜುಂಗ್ ನಡುವಣ ಸೆಮಿ ಪಂದ್ಯದ ವಿಜೇತರನ್ನು ಸಿಂಧು ಅವರು ಫೈನಲ್‌ನಲ್ಲಿ ಎದುರಿಸಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.