ಬ್ಯಾಡ್ಮಿಂಟನ್: ಕ್ವಾರ್ಟರ್ ಫೈನಲ್‌ಗೆ ತಾನ್ಯಾ, ಪೃಥ್ವಿ

6

ಬ್ಯಾಡ್ಮಿಂಟನ್: ಕ್ವಾರ್ಟರ್ ಫೈನಲ್‌ಗೆ ತಾನ್ಯಾ, ಪೃಥ್ವಿ

Published:
Updated:

ಮೈಸೂರು: ಬೆಂಗಳೂರಿನ ಐ–ಸ್ಪೋರ್ಟ್ಸ್ ಕ್ಲಬ್‌ನ ತಾನ್ಯಾ ಹೇಮಂತ್ ಅವರು ಇಲ್ಲಿ ನಡೆಯುತ್ತಿರುವ ರಾಜ್ಯ ರ‍್ಯಾಕಿಂಗ್ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಬಾಲಕಿಯರ 17 ವರ್ಷ ವಯಸ್ಸಿನೊಳಗಿನವರ ವಿಭಾಗದ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಅಗ್ರಶ್ರೇಯಾಂಕ ಹೊಂದಿರುವ ತಾನ್ಯಾ ಅವರು ಜಿ.ಎಸ್‌.ಸ್ಪೋರ್ಟ್ಸ್‌ ಕಾಂಪ್ಲೆಕ್ಸ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ 21–9, 21–4 ರಲ್ಲಿ ತಮ್ಮದೇ ಕ್ಲಬ್‌ನ ಅನುಷ್ಕಾ ಗಣೇಶ್‌ ವಿರುದ್ಧ ಗೆದ್ದರು.

ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಡಿವೈಇಎಸ್‌ನ ನೇಸಾ ಕಾರ್ಯಪ್ಪ 21–10, 19–21, 21–14 ರಲ್ಲಿ ಆಸ್ಪೈರ್ ಅಕಾಡೆಮಿಯ ಎನ್.ಅರುಂಧತಿ ವಿರುದ್ಧ; ಕಾಸ್ಮೊಪಾಲಿಟನ್ ಕ್ಲಬ್‌ನ ವಿಜೇತಾ ಹರೀಶ್ 21–5 ರಲ್ಲಿ (ನಿವೃತ್ತಿ) ಬಿಪಿಬಿಎಯ ಎಸ್‌.ವಿ.ಅನಘಾ ವಿರುದ್ಧ; ಡಿವೈಇಎಸ್‌ನ ಕಿಶಾ ಕೊಠಾರಿ 21–18, 23–21 ರಲ್ಲಿ ಡಿವೈಇಎಸ್‌ನ ಜಯಂತಿಕಾ ರಾಠೋಡ್ ವಿರುದ್ಧ ಗೆಲುವು ಪಡೆದರು.

ಪೃಥ್ವಿಗೆ ಜಯ: ಶಿವಮೊಗ್ಗದ ಪೃಥ್ವಿ ರಾಯ್ ಅವರು ಬಾಲಕರ 17 ವರ್ಷ ವಯಸ್ಸಿನೊಳಗಿನವರ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಅವರು 21–19, 18–21, 23–21 ರಲ್ಲಿ ವಸಂತ ಕುಮಾರ್ ಅಕಾಡೆಮಿಯ ಅನೀಶ್ ಮುರಳೀಧರ ವಿರುದ್ಧ ಗೆದ್ದರು.

ಇತರ ಪಂದ್ಯಗಳಲ್ಲಿ ಪ್ರಣೀಲ್ ರಾಜೇಶ್ 21–17, 21–18 ರಲ್ಲಿ ಕಿಶಲ್ ಗಣಪತಿ ವಿರುದ್ಧ; ನರೇನ್‌ ಎಸ್‌.ಅಯ್ಯರ್ 21–9, 21–13 ರಲ್ಲಿ ಅರುಜ್‌ ಮಹೇಶ್ವರಿ ವಿರುದ್ಧ; ಗೌರವ್ ಅಜಿಲ 21–18, 21–17 ರಲ್ಲಿ ಸಾಹಿಲ್‌ ಖಾಝಿ ವಿರುದ್ಧ ಜಯ ಸಾಧಿಸಿದರು.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !