ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌: ನಿಹಾರಿಕಾ, ಅನೀಶ್‌ಗೆ ಪ್ರಶಸ್ತಿ

ರಾಜ್ಯಮಟ್ಟದ ಮುಕ್ತ ಆಹ್ವಾನ ಬ್ಯಾಡ್ಮಿಂಟನ್‌ ಟೂರ್ನಿ
Last Updated 29 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಬಳ್ಳಾರಿ: ಬೆಳಗಾವಿಯ ಅನೀಶ್‌ ಉಪಾ ಧ್ಯಾಯ ಹಾಗೂ ನಿಹಾರಿಕಾ ಕಡಕೋಲ್ ಅವರು, ನಗರದಲ್ಲಿ ಭಾನುವಾರ ಮುಕ್ತಾಯವಾದ ರಾಜ್ಯಮಟ್ಟದ ಮುಕ್ತ ಆಹ್ವಾನ ಬ್ಯಾಡ್ಮಿಂಟನ್‌ ಟೂರ್ನಿಯ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆದರು.

ಬಾಲಕರ ವಿಭಾಗದ ಫೈನಲ್‌ನಲ್ಲಿ ಅನೀಶ್ 21–13, 2-1–14 ತಮ್ಮೂರಿ ನವರೇ ಆದ ನವನೀತ್‌ ರಜಪೂತ್‌ ಮೇಲೂ, ಬಾಲಕಿಯರ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ನಿಹಾರಿಕಾ 18–21, 21–18, 21–9ರಲ್ಲಿ ಬಳ್ಳಾರಿಯ ಅಚಲಾ ಜೈನ್‌ ಎದುರು ಗೆಲುವು ಪಡೆದರು.

ಪುರುಷರ ಡಬಲ್ಸ್‌ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಬಳ್ಳಾ ರಿಯ ಕೃಷ್ಣ ಮತ್ತು ನಿತಿನ್ 21–15, 21–5ರಲ್ಲಿ ಬೆಳಗಾವಿಯ ನವನೀತ್ ಮತ್ತು ಅನೀಶ್ ಎದುರು ಗೆಲುವು ಪಡೆದರು. ಬಾಲಕರ 19 ವರ್ಷದ ಒಳಗಿನವರ ವಿಭಾಗದಲ್ಲಿ ಚಿಕ್ಕಮಗಳೂರಿನ ದರ್ಶನ್ 21–11, 21–16ರಲ್ಲಿ ಬಾಗಲಕೋಟೆಯ ವಿಜಯ ಬಡಿಗೇರ ಮೇಲೂ, ಡಬಲ್ಸ್‌ನಲ್ಲಿ ಹಾಸನದ ವಿಜಯ್–ದರ್ಶನ್ 19–21, 21–12, 22–19ರಲ್ಲಿ ಬೆಳಗಾವಿಯ ಅಜಿಂಕ್ಯ ಜೋಶಿ–ಅಭಿಷೇಕ್ ವಿರುದ್ಧವೂ ಗೆಲುವು ಸಾಧಿಸಿ ಪ್ರಶಸ್ತಿ ಪಡೆದರು.

15 ವರ್ಷದ ಒಳಗಿನವರ ವಿಭಾಗ ದಲ್ಲಿ ಹುಬ್ಬಳ್ಳಿಯ ಗೋವಿಂದ ಕಾಟವೆ 21–12, 22–17ರಲ್ಲಿ ಬೀದ ರ್‌ನ ನಿಹಾಲ್‌ ಮೇಲೂ, ಡಬಲ್ಸ್‌ನಲ್ಲಿ ಹುಬ್ಬಳ್ಳಿಯ ತಾನಿಷ್‌–ಗೋವಿಂದ 21–13, 21–12ರಲ್ಲಿ ಬೆಳಗಾವಿಯ ಕೃಷ್ಣ–ಕೌಶಿಕ್ ವಿರುದ್ಧವೂ ಗೆಲುವು ತಮ್ಮದಾಗಿಸಿಕೊಂಡರು.

ಮಹಿಳೆಯರ ಡಬಲ್ಸ್‌ನಲ್ಲಿ ಹುಬ್ಬಳ್ಳಿಯ ಸಾಚಿ ದೇಸಾಯಿ–ಕ್ಷಿತಿ ಶಿಗ್ಗಾವ್ 15–21, 21–8, 21–16ರಲ್ಲಿ ಅನ್ಮೋಲ್‌ ಜೈನ್‌–ಮೇಘಾ ಮಾನೆ ಎದುರು ಗೆಲುವು ಸಾಧಿಸಿದರು.

ಬಾಲಕಿಯರ 15 ವರ್ಷದ ಒಳಗಿನವರ ವಿಭಾಗದಲ್ಲಿ ಚಿತ್ರದುರ್ಗದ ಕೆ. ಶ್ರೇಯಾ 21–19, 21–6ರಲ್ಲಿ ಕ್ಷಿತಿ ಮೇಲೂ, ಮಿಶ್ರ ಡಬಲ್ಸ್‌ನಲ್ಲಿ ಅಜಿಂಕ್ಯ ಜೋಶಿ–ನಿಹಾರಿಕಾ 21–15, 21–8ರಲ್ಲಿ ನಿತಿನ್‌–ಅಂಚಲ್ ಜೈನ್‌ ಎದುರು ಜಯ ಸಂಪಾದಿಸಿದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ನಿಹಾರಿಕಾ 18-21, 21-19, 21-9ರಲ್ಲಿ ಅಚಲಾ ಜೈನ್‌ ಮೇಲೂ, ಡಬಲ್ಸ್‌ನಲ್ಲಿ ಹುಬ್ಬಳ್ಳಿಯ ಸಾಕ್ಷಿ ದೇಸಾಯಿ–ಕ್ಷಿತಿ ಶಿಗ್ಗಾವ್‌ 15–21, 21–8, 21–16ರಲ್ಲಿ ಬೆಳಗಾವಿಯ ಅನ್ಮೋಲ್‌ ಜೈನ್‌–ಮೇಘಾ ಮಾನೆ ಜಯ ತಮ್ಮದಾಗಿಸಿಕೊಂಡರು. ವೆಟರನ್ಸ್‌ ವಿಭಾಗದ ಡಬಲ್ಸ್‌ನಲ್ಲಿ ಶಿವಮೊಗ್ಗದ ಸುನೀಲ್–ಶ್ರೀಚರಣ 21–19, 29–27ರಲ್ಲಿ ಹುಬ್ಬಳ್ಳಿ ನರಸಿಂಹ–ಪ್ರಭುರಾಜ ಜೋಡಿಯನ್ನು ಮಣಿಸಿ ಚಾಂಪಿಯನ್‌ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT