ಮಂಗಳವಾರ, ಆಗಸ್ಟ್ 20, 2019
21 °C

ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಸಿಂಧು–ಸೈನಾ ಸೆಮಿ ಮುಖಾಮುಖಿ?

Published:
Updated:

ನವದೆಹಲಿ (ಪಿಟಿಐ): ಭಾರತದ ಅಗ್ರ ಆಟಗಾರ್ತಿಯರಾದ ಸೈನಾ ನೆಹ್ವಾಲ್‌ ಮತ್ತು ಪಿ.ವಿ.ಸಿಂಧು, ಮುಂದಿನ ವಾರ ಸ್ವಿಜರ್ಲೆಂಡ್‌ನ ಬಾಸೆಲ್‌ನಲ್ಲಿ ಆರಂಭ ವಾಗುವ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯ ನ್‌ಷಿಪ್‌ನಲ್ಲಿ ಫೈನಲ್‌ಗೆ ಮೊದಲೇ  ಎದುರಾಗುವ ಸಾಧ್ಯತೆ ಇದೆ. ಶನಿವಾರ ನಡೆಸಿದ ಪರಿಷ್ಕೃತ ಸಿಂಗಲ್ಸ್‌ ‘ಡ್ರಾ’ದಲ್ಲಿ ಇವರಿಬ್ಬರು ಒಂದೇ ಭಾಗದಲ್ಲಿರುವುದು ಇದಕ್ಕೆ ಕಾರಣ.

ಆಟಗಾರನೊಬ್ಬನ ಹೆಸರು ತಪ್ಪಾಗಿ ಸೇರಿಕೊಂಡ ಕಾರಣ ಮಹಿಳಾ ಸಿಂಗಲ್ಸ್‌ ‘ಡ್ರಾ’ ಮತ್ತೊಮ್ಮೆ ನಡೆಲಾಯಿತು ಎಂದು ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಭಾರತದ ಆಟಗಾರ್ತಿಯರು ತಮ್ಮ ಆರಂಭದ ‌‌‌ಕೆಲವು ಪಂದ್ಯಗಳನ್ನು ಗೆಲ್ಲುತ್ತಾ ಹೋದರೆ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುತ್ತಾರೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಬೆಳ್ಳಿ ಗೆದ್ದಿರುವ ಸಿಂಧು, ಈ ಬಾರಿ ಐದನೇ ಶ್ರೇಯಾಂಕ ಪಡೆದಿದ್ದು ಮೊದಲ ಸುತ್ತಿನಲ್ಲಿ ‘ಬೈ’ ಪಡೆದಿದ್ದಾರೆ.

ಎಂಟನೇ ಶ್ರೇಯಾಂಕದ ಪಡೆದಿರುವ ಸೈನಾ, ಇಲ್ಲಿ ಆರಂಭದ ಸುತ್ತಿನಲ್ಲಿ ‘ಬೈ’ ಪಡೆದಿದ್ದು, ಸಬ್ರಿನಾ ಜಾಕೆ (ಸ್ವಿಜರ್ಲೆಂಡ್‌) ಮತ್ತು ಸೊರಯಾ ಡೆ ವಿಷ್‌ ಎಬರ್ಜೆನ್‌ ನಡುವಣ ವಿಜೇತರನ್ನು ಎರಡನೇ ಸುತ್ತಿನಲ್ಲಿ ಎದುರಿಸುವರು.

ಮಾರಿಷಸ್‌ನ ಕೇಟ್‌ ಫೋ ಕ್ಯೂನ್‌ ಅವರನ್ನು ತಪ್ಪಾಗಿ ‘ಡ್ರಾ’ದಲ್ಲಿ ಸೇರಿಸಲಾಗಿತ್ತು. ಅವರನ್ನು ಉದ್ದೀಪನ ಮದ್ದುಸೇವನೆ ಕಾರಣ ಜುಲೈನಲ್ಲಿ ಅಮಾನತು ಮಾಡಲಾಗಿತ್ತು. ಅವರನ್ನು ಹೊರಗಿಟ್ಟು ಮತ್ತೆ ಡ್ರಾ ನಡೆಸಲಾಯಿತು ಎಂದು ಕ್ರೀಡಾ  ವಾಹಿನಿಯೊಂದರ ವರದಿ ತಿಳಿಸಿದೆ.

Post Comments (+)